ಗದಗ 11: ವಿಶ್ವ ಏಡ್ಸ್ ದಿನಾಚರಣೆಯ ಜನಜಾಗೃತಿ ರ್ಯಾಲಿ ಮಾಡುವ ಉದ್ದೇಶ ಹಾಗೂ ಸೊನ್ನೆಗೆ ತರುವ ಗುರಿಯನ್ನು ತಿಳಿಸಿದರು. ಈ ವರ್ಷದ ಘೋಷಣೆಯಂತೆ "ನಿಮ್ಮ ಹೆಚ್.ಐ.ವ್ಹಿ ಸ್ಥಿತಿಯನ್ನು ತಿಳಿದುಕೊಳ್ಳಿ ಯನ್ನುವ ಮೂಲಕ ಎಲ್ಲರೂ ಹೆಚ್.ಐ.ವ್ಹಿ ತಪಾಸಣೆಗೆ ಮುಂದಾದರು ಹಾಗೂ ಹೆಚ್.ಐ.ವ್ಹಿಯಿಂದ ಹರಡುವ ಸೋಂಕನ್ನು ಸೊನ್ನೆಯನ್ನು ತನ್ನಿ, ಕಳಂಕ ತಾರತಮ್ಯವನ್ನು ಸೊನ್ನೆಗೆ ತನ್ನಿ ಹಾಗೂ ಹೆಚ್.ಐ.ವ್ಹಿ ಯಿಂದ ಮರಣಿಸುವುದನ್ನು ಸೊನ್ನೆಗೆ ತರುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬರವರಾಜ ಲಾಲಗಟ್ಟಿ ಜಿಲ್ಲಾ ಮೇಲ್ವಿಚಾರಕರು, ಆರೋಗ್ಯ ಇಲಾಖೆ ಇವರು ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧಿಕ್ಷಕರಾದ ಕೆ.ಎಸ್. ಮಾನ್ವಿ ಮಾತನಾಡಿ ಹೆಚ್.ಐ.ವ್ಹಿ ತಡೆಗಟ್ಟುವಲ್ಲಿ ಯುವಕರ ಪಾತ್ರ ದೊಡ್ಡದಿದ್ದು ತಾವೆಲ್ಲರೂ ಯಾವೂದೂ ಕಾರಣಾಂತರಳಿಂದ ಜೈಲು ವಾಸಿಯಾಗಿದ್ದು ಮುಂದಿನ ದಿನಮಾನದಲ್ಲಿ ತಾವೆಲ್ಲರೂ ಸಾಮಾಜಿಕ ಸೇವೆಯತ್ತ ಮುನ್ನುಗ್ಗಬೇಕು ಹಾಗೂ ದಿನದಲಿತರ ಬಡವರ ಸೇವೆಯನ್ನು ಮಾಡಿ ಭೂಮಿ ಖುಣವನ್ನು ತಿರಿಸಬೇಕೆಂದು ತಿಳಿಸಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಕನರ್ಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಬೆಂಗಳೂರು, ನ್ಯಾಕೋ ಸಂಸ್ಥೆ, ಸಾತಿ ಸಂಸ್ಥೆ ಬೆಂಗಳೂರು, ಜಿಲ್ಲಾ ಕಾರಾಗೃಹ ಹಾಗೂ ವಿಲ್ಟನ್ ಜಾನ್ ಏಡ್ಸ್ ಪೌಂಡೆಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಾರಾಗೃದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಹೆಚ್.ಐ.ವ್ಹಿ/ಏಡ್ಸ್ ಮತ್ತು ಟಿಬಿ ಕಾಯುಲೆ ಬಗ್ಗೆ ಮಾಹಿತಿ ತಿಳಿವಳಿಕೆ ಹಾಗೂ ಮ್ಯೂಜಿಕಲ್ ಚೇರ್ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು.
ಪ್ರಾರಂಭದಲ್ಲಿ ಪ್ರವೀನ ಕುಮಾರ ಅಂಗಡಿ ಎಲ್ಲ ಕೈದಿಗಳಿಗೆ ಮ್ಯೂಜಿಕಲ್ ಚೇರ್ ಸ್ಪಧರ್ೆಯನ್ನು ಏರ್ಪಡಿಸಿ ಎಲ್ಲರ ಮೌಲ್ಯಮಾಪನ ಮಾಡಿದರು ಹಾಗೂ ಹೆಚ್.ಐ.ವ್ಹಿ ಏಡ್ಸ್ ಮತ್ತು ಟಿಬಿ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು ನಂತರ ಸ್ಪಧರ್ಾವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.