ಲೋಕದರ್ಶನ ವರದಿ
ಮುಗಳಖೋಡ 02: ಹೆಚ್.ಐ.ವಿ ಸೋಂಕು ಶೇ. 87ಕ್ಕಿಂತಲೂ ಹೆಚ್ಚು ಅಸುರಕ್ಷಿತ (ಬಹು ಸಂಗಾತಿಗಳೊಟ್ಟಿಗೆ ಕಾಂಡೊಮ್ ರಹಿತವಾಗಿ) ಲೈಂಗಿಕ ಸಂಪರ್ಕದ ಮೂಲಕ, ಹೆಚ್.ಐ.ವಿ ಸೋಂಕಿತ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದರಿಂದ, ಹೆಚ್.ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ ಗಭರ್ಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲೂಣಿಸುವ ಮೂಲಕ, ಸಂಸ್ಕರಣೆ ಮಾಡದ ಸೂಜಿ, ಸಿರಿಂಜು ಬಳಸುವುದರಿಂದ. ಹೀಗೆ ಹೆಚ್.ಐ.ವಿ ಸೋಂಕು ಕೇವಲ ನಾಲ್ಕು ವಿಧಾನಗಳಿಂದ ಮಾತ್ರ ಹರಡುತ್ತದೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಸಕರ್ಾರಿ ಆಸ್ಪತ್ರೆಗಳಲ್ಲಿ ಐ.ಸಿ.ಟಿ.ಸಿ. ಕೇಂದ್ರವನ್ನು ಸಂಪಕರ್ಿಸಿ ಮತ್ತು ರಾಷ್ಟ್ರೀಯ ಸಹಾಯವಾಣಿ 1097 ಕ್ಕೆ ಕರೆ ಮಾಡಿ ಅನುಮಾನ ಪರಿಹರಿಸಿಕೊಳ್ಳಿ. ಎಂದು ಸಮುಧಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರಾದ ಮಹೇಶ ಪಾಟೀಲ ಮುಗಳಖೋಡ ಪುರಸಭೆ ಕಾಯರ್ಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ವಿಶ್ವ ಏಡ್ಸ್ ನಿರ್ಮಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಗಿಯಾಗಿ ಮಾತನಾಡಿದರು.
ನಂತರ ಪುರಸಭೆ ಮುಖ್ಯಾದಿಕಾರಿ ಮಹಾವೀರ ಬೊರಣ್ಣವರ ಮಾತನಾಡಿ ಊಟ ತಿಂಡಿ, ಬಟ್ಟೆ, ತಂಪು ಪಾನೀಯ ಹಂಚಿಕೊಳ್ಳುವದರಿಂದ, ಸೊಳ್ಳೆ, ಕ್ರಿಮಿ ಕೀಟ ಕಚ್ಚುವುದರಿಂದ ಹಾಗೂ ಕೆಮ್ಮು, ಸೀನು ಅಥವಾ ಗಾಳಿ ಸೇವನೆಯಿಂದ ಮತ್ತು ಒಂದೆ ಸ್ನಾನದ ಮನೆ, ಅಡುಗೆ ಮನೆ, ಶೌಚಾಲಯ ಬಳಸುವುದರಿಂದ ಹೆಚ್.ಐ.ವಿ ಹರಡುವುದಿಲ್ಲ ಎಂದು ಹೋದ ವರ್ಷಕಿಂತ ಈ ವರ್ಷ 25% ರಷ್ಟು ಹೆಚ್.ಐ.ವಿ ಸೋಂಕು ಕಡಿಮೇಯಾಗಿದೆ ಎಂದು ತಿಳಿ ಹೇಳಿದರು.
ನಂತರ ಪ್ರಮುಖ ಬಿದಿಗಳಲ್ಲಿ ಸಂಚರಿಸುತ್ತಾ ಕಾಂಡೊಮ್ ಬಳಸಿ ಹೆಚ್.ಐ.ವಿ ಅಳಿಸಿ, ಲೈಗಿಂಕ ಸುರಕ್ಷೆ ಬಾಳಿಗೆ ಶ್ರೀರಕ್ಷ, ಅರಿತು ನಡೆಯಿರಿ ಏಡ್ಸ್ ತಡೆಯಿರಿ, ಹೆಚ್.ಐ.ವಿ ಸೋಂಕಿತರಿಗೆ ಕಳಂಕ ತಾರತಮ್ಯ ಮಾಡಬೆಡಿ. ಎಂದು ಹಲವಾರ ಘೋಷಣೆ ಹಾಕುತ್ತಾ ಜನಜಾಗೃತಿ ಜಾತಾ ಕಾರ್ಯಕ್ರಮ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಕಾಯರ್ಾಲಯ ಸಿಬ್ಬಂದಿ, ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು ಮತ್ತು ಸಮುಧಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ಮತ್ತು ಸಿದ್ದರಾಮೇಶ್ವರ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾಥರ್ಿಗಳು ಮತ್ತು ಸರಕಾರಿ ಫ್ರೌಢ ಶಾಲೆಯ ಶಿಕ್ಷಕರು ವಿದ್ಯಾಥರ್ಿಗಳು ಹಾಗೂ ವಿವಿದ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದರು.