ಲೋಕದರ್ಶನ ವರದಿ
ಧಾರವಾಡ21: ಕನರ್ಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ "ವಸ್ತು ವಿಜ್ಞಾನ" ವಿಷಯದ ಕುರಿತು ಎರಡು ದಿನಗಳ ಕಾಯರ್ಾಗಾರವನ್ನು ಏರ್ಪಡಿಸಲಾಗಿತ್ತು. ಇದರೊಂದಿಗೆ ವಸ್ತು ವಿಜ್ಞಾನ ಬುಲೆಟಿನ್ನ ಸಂಪಾದಕ ಮಂಡಳಿಯ ಸಭೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಪ್ರೊ. ಎಸ್. ಎಂ. ಶಿವಪ್ರಸಾದ ರವರು, ನಿದರ್ೇಶಕರು ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ ಹಾಗೂ ನಿದರ್ೇಶಕರು ಅಜಓಖ ಪ್ರೊ. ಜಿ. ಯು. ಕುಲಕಣರ್ಿ ರವರು ಉದ್ಘಾಟಿಸಿ ಮಾತನಾಡಿದರು. ಈ ಕಾಯರ್ಾಗಾರದಲ್ಲಿ ದೇಶದ ಹಿರಿಯ ವಿಜ್ಞಾನಿಗಳು ಆಗಮಿಸಿ ಹತ್ತು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕನರ್ಾಟಕ ವಿಶ್ವವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾಂವಿಯ ವ್ಯಾಪ್ತಿಯಲ್ಲಿರುವ ಸ್ನಾತಕೋತ್ತರ ವಿದ್ಯಾಥರ್ಿಗಳು, ಸಂಶೋಧನಾ ವಿದ್ಯಾಥರ್ಿಗಳು ಹಾಗೂ ಆಸಕ್ತ ಉಪನ್ಯಾಸಕರು ಭಾಗವಹಿಸಿದ್ದರು, ಸೇರಿದಂತೆ 150 ಜನ ಭಾಗವಹಿಸಿದ್ದರು.
ಈ ಕಾಯರ್ಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ದೇಶದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ ದೆಹಲಿ, ಜವಾಹರಲಾಲ ನೆಹರು ಸೆಂಟರ ಆಂಡ ಸೈಂಟಿಫಿಕ್ ರಿಸರ್ಚ ಬೆಂಗಳೂರು, ಐಐಟಿ ಖರಗಪುರ. ಐಐಟಿ ಚೆನೈ, ಹೈದ್ರಾಬಾದ ವಿಶ್ವವಿದ್ಯಾಲಯ, ಅಜಓಖ ಬೆಂಗಳೂರು, ಂಅಖ ಕೊಲ್ಕತ್ತಾ ಮುಂತಾದವರಿದ್ದರು.
ನಂತರ ಈ ಕಾಯರ್ಾಗಾರದಲ್ಲಿ ಭಾಗವಹಿಸಿದ ವಿದ್ಯಾಥರ್ಿಗಳೊಂದಿಗೆ ಹಿರಿಯ ವಿಜ್ಞಾನಿಗಳು ಸಂವಾದ ನಡೆಸಿ ವಿದ್ಯಾಥರ್ಿಗಳಿಗೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸಿದರು ಮತ್ತು ಮಾರ್ಗದರ್ಶನ ಮಾಡಿದರು. ಪ್ರೊ. ಎಂ. ಆಯ್. ಸವದತ್ತಿ, ಪ್ರೊ. ಬಿ. ಜಿ. ಮೂಲಿಮನಿ, ಪ್ರೊ. ಎಸ್. ಎಸ್. ಕುಬಕಡ್ಡಿ, ಮತ್ತು ಪ್ರೊ. ಎನ್. ಎಚ್. ಅಯಾಚಿತ್ತ ರವರು ಉಪಸ್ಥಿತರಿದ್ದು ಕಾಯರ್ಾಗಾರಕ್ಕೆ ಶೋಭೆ ತಂದರು.
ಉನ್ನತ ಶಿಕ್ಷಣ ಅಕಾಡೆಮಿಯ ಡೀನರಾದ ಡಾ. ಹೆಚ್ ಬಿ ನೀಲಗುಂದ, ಡಾ. ಆರುಂಧತಿ ಕುಲಕಣರ್ಿ, ಡಾ. ಆಯ್. ಬಿ ಸಾತಿಹಾಳ, ಡಾ. ಎ. ಆರ್. ಜಗತಾಪ ಉಪಸ್ಥಿತರಿದ್ದರು.