ಲೋಕದರ್ಶನ ವರದಿ
ಬ್ಯಾಡಗಿ:ಶಾಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅಡುಗೆ ಸಿಬ್ಬಂದಿಯ ಅಪ್ರತ್ಯಕ್ಷ ಸಹಕಾರ ದೊರೆಯುತ್ತಿದೆ, ಮಕ್ಕಳ ಹಾಜರಾತಿ ಹೆಚ್ಚಾಗಲು ತಮ್ಮ ರುಚಿ-ಶುಚಿಯಾದ ಆಹಾರವೂ ಕಾರಣವಾಗಲಿದೆ, ಸಿಬ್ಬಂದಿಯೊಂದಿಗೆ ಸಮನ್ವಯತೆಯಿಂದ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡುವಲ್ಲಿ ಶ್ರಮಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.
ಸ್ಥಳೀಯ ವರ್ತಕರ ಕಾಲೇಜಿನ ಸಭಾಭವನದಲ್ಲಿ ತಾಲೂಕಾ ಪಂಚಾಯತ, ತಾಲೂಕಾ ಅಕ್ಷರದಾಸೋಹ ಕೇಂದ್ರ ಮತ್ತು ಅರವಿಂದ ಗ್ಯಾಸ್ ಏಜೆನ್ಸಿ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಅಡುಗೆ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ ಅಡುಗೆ ಸಿಬ್ಬಂದಿ ಶಾಲಾ ಎಸ್ಡಿಎಂಸಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಶಾಲಾ ಮಕ್ಕಳಿಗೆ ಶುಚಿಯಾದ ಊಟದ ವ್ಯವಸ್ಥೆ ಕಲ್ಪಿಸಬೇಕು ಯಾವುದೇ ಮಕ್ಕಳಿಗೆ ಅನ್ಯಾಯವಾಗದಂತೆ ಊಟದ ವ್ಯವಸ್ಥೆ ಕೊಡಬೇಕು, ಮಕ್ಕಳಲ್ಲಿ ಭೇದಭಾವ ಕಲ್ಪಿಸದೇ ಪ್ರೀತಿ ವಿಶ್ವಾಸ ಮೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಂಜುನಾಥ ಮಾತನಾಡಿ, ಅಡುಗೆ ಸಿಬ್ಬಂದಿ ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿಯೇ ಅವಶ್ಯವಿರುವ ಸಾಮಗ್ರಿಗಳನ್ನು ದವಸ ಧಾನ್ಯಗಳನ್ನು ಸ್ವಚ್ಚಗೊಳಿಸಿಕೊಂಡು ಅಡುಗೆ ಕಾಯಕದಲ್ಲಿ ಮುಂದುವರಿಯಬೇಕು, ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಮ್ಮ ದಿನನಿತ್ಯದ ಕೆಲಸದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕೆಂದರು.
ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಎನ್.ತಿಮ್ಮಾರಡ್ಡಿ ಮಾತನಾಡಿ, ತಾಲೂಕಿನ ಎಲ್ಲಾ ಶಾಲೆಯ ಅಡುಗೆ ಸಿಬ್ಬಂದಿಯವರು ಉತ್ತಮವಾಗಿ ಕೆಲಸವನ್ನು ಮಾಡುತ್ತಲಿದ್ದಾರೆ. ರಾಜ್ಯ ಸಕರ್ಾರ ಅಡುಗೆ ಸಿಬ್ಬಂದಿಯವರಿಗೆ ಅನೇಕ ಅಡುಗೆ ಸಾಮಗ್ರಿಗಳ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದಾರೆ.
ಅವುಗಳನ್ನು ಸರಿಯಾಗಿ ಬಳಸಿಕೊಂಡು ಇನ್ನೂ ಉತ್ತಮವಾದ ಅಡುಗೆಯನ್ನು ಮಕ್ಕಳಿಗೆ ಬಡಿಸಬೇಕೆಂದರು,
ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ತಾಲೂಕಾ ಪಂಚಾಯತ ಅಧ್ಯಕ್ಷೆ ಸವಿತಾ ಸುತ್ತಕೋಟಿ, ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಅಬಿದ್ ಗದ್ಯಾಳ, ತಾಲೂಕಾ ಸಮನ್ವಯಾಧಿಕಾರಿ ಬಾಕರ್ಿ, ಧುರೀಣರಾದ ಶಂಕ್ರಣ್ಣ ಮಾತನವರ, ರವೀಂದ್ರ ಪಟ್ಟಣಶೆಟ್ಟಿ, ಸುರೇಶ ಅಸಾದಿ, ಸುಧೀರ ಹವಳದ ಸೇರಿದಂತೆ ಇನ್ನಿತರರಿದ್ದರು. ಇದೇ ಸಂದರ್ಭದಲ್ಲಿ ನಿಕಟಪೂರ್ವ ತಾಲೂಕಾ ಸಮನ್ವಯಾಧಿಕಾರಿ ಜೆ.ಸಿ.ಪೀರಜಾದೆ ಅವರನ್ನು ಸನ್ಮಾನಿಸಲಾಯಿತು