ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ : ಜಗದೀಶ್ ಶೆಟ್ಟರ್‌

Work has to be done to deliver central government schemes to the people: Jagdish Shettar

ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ : ಜಗದೀಶ್ ಶೆಟ್ಟರ್‌

ಸವದತ್ತಿ 20: ಕೇಂದ್ರ ಸರ್ಕಾರದಿಂದ ಸಾಕಷ್ಟು ದೊಡ್ಡ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ.ಮೋದಿಯವರ ನೇತೃತ್ವದಲ್ಲಿ ಭಾರತವನ್ನು 2047ರ ಹೊತ್ತಿಗೆ ಆರ್ಥಿಕವಾಗಿ ಮುಂದುವರಿದ ಸದೃಢ ರಾಷ್ಟ್ರವನ್ನಾಗಿ ರೂಪಿಸಲು ಬೇಕಾದ ಎಲ್ಲಾ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು, ಬೈಪಾಸ್ ರಸ್ತೆಗಳು, ಬೆಳಗಾವಿ- ರಾಯಚೂರು 6 ಲೇನ್ ಎಕ್ಸ್ಪ್ರೆಸ್ ಹೆದ್ದಾರಿ ಹೀಗೆ ಯಾವುದೇ ಕೇಂದ್ರ ಸರ್ಕಾರಗಳು ಈವರೆಗೆ ತಾರದೆ ಇರುವಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಎಸ್ ಶೆಟ್ಟರ್ ಹೇಳಿದರು.  ಅವರು ಕೇಂದ್ರ ಸಂವಹನ ಇಲಾಖೆ ಧಾರವಾಡ, ತಾಲೂಕ ಆಡಳಿತ, ತಾಲೂಕ ಪಂಚಾಯತ ಸವದತ್ತಿ, ಕೆಎಲ್‌ಇ ಸಂಸ್ಥೆಯ , ಎಸ್ ಬಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ, ಹೆಸ್ಕಾಂ, ಪುರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತ ಜಾಗೃತಿ ಕಾರ್ಯಕ್ರಮ ಮತ್ತು ಛಾಯಾಚಿತ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸವದತ್ತಿ ಕ್ಷೇತ್ರ ಅಭಿವೃದ್ಧಿಗೆ ಮೂರು ಕೋಟಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ ಎಂದ ಅವರು ಸವದತ್ತಿ ತಾಲೂಕಿನಲ್ಲಿ 44 ಗ್ರಾಮ ಪಂಚಾಯಿತಿಗಳಲ್ಲಿ 142 ಜನವಸತಿ ಪ್ರದೇಶಗಳ ಎಪ್ಪತ್ತು ಸಾವಿರ ಮನೆಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.  ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ತಾಲೂಕ ಆರೋಗ್ಯ ಅಧಿಕಾರಿ ಡಾ. ಶ್ರೀಪಾದ ಸಬನೀಸ ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ನೀಡಿದರು. ಶಿಶುಅಭಿವೃದ್ಧಿ ಯೋಜನಾಧಿಕಾರಿ, ಸುನಿತಾ ಪಾಟೀಲ ಬೇಟಿ ಬಚಾವೋ ಬೇಟಿ ಪಡಾವೋ, ಹಾಗೂ ಮಾತೃವಂದನಾ ಕಾರ್ಯಕ್ರಮಗಳ ಕುರಿತು ಮಾತನಾಡಿದರು. ಪುರಸಭಾಧ್ಯಕ್ಷೆ, ಚಿನ್ನಮ್ಮ ಹುಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು ಪುರಸಭಾ ಉಪಾಧ್ಯಕ್ಷೆ, ದಾವಲಬಿ ಮ.ಸನದಿ, ತಹಶೀಲ್ದಾರ್, ಮಲ್ಲಿಕಾರ್ಜುನ್ ಎನ್ ಹೆಗ್ಗನ್ನವರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ,ಆನಂದ ಬಡಕುಂದ್ರಿ, ಜೆಜೆಎಂ, ಜಿಲ್ಲಾ ಸಂಯೋಜಕಿ, ನೀಲಮ್ಮ ಕಮತೆ ಪ್ರಾಂಶುಪಾಲರಾದ ಡಾ. ಎನ್ ಆರ್ ಸವತಿಕರ್, ಹೆಸ್ಕಾಂ ಅಧಿಕಾರಿ ಎಸ್ ಎಸ್ ಬಾಗಲಕೋಟಿ, ಶಿಕ್ಷಣ ಇಲಾಖೆಯ ರವಿ ನಲವಡೆ, ಸ್ಥಳೀಯ ಮುಖಂಡರಾದ ಪಂಚನಗೌಡ ದ್ಯಾಮನಗೌಡರ್, ಸೌರವ್ ಚೋಪ್ರಾ, ವಿವಿಧ ಇಲಾಖೆಯ ಅಧಿಕಾರಿಗಳು ಆಶಾ ಅಂಗನವಾಡಿ ಕಾರ್ಯಕರ್ತೆಯರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕೇಂದ್ರ ಸಂವಹನ ಇಲಾಖೆಯ ಸಹಾಯಕ ನಿರ್ದೇಶಕ ತುಕಾರಾಮಗೌಡ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೇಂದ್ರ ಸಂವಹನ ಇಲಾಖೆಯ ಮರಳೀಧರ ಕಾರಬಾರಿ ಸ್ವಾಗತಿಸಿದರು. ವಚನಾ ಬಿ. ಕಾರ್ಯಕ್ರಮ ನಿರ್ವಹಿಸಿದರು. ಡಾಕ್ಟರ್ ಎನ್ ಎ ಕೌಜಗೇರಿ ವಂದಿಸಿದರು.  ಕಾರ್ಯಕ್ರಮಕ್ಕೆ ಮೊದಲು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಎಸ್ ಶೆಟ್ಟರ್ ಏಕ್ ಪೇಡ್ ಮಾ ಕೇ ನಾಮ್ ಅಡಿಯಲ್ಲಿ ಕಾಲೇಜ್ ಆವರಣದಲ್ಲಿ ಮಹಾಗನಿ ಮರದ ಗಿಡ ನೆಟ್ಟು ವಿವಿಧ ಇಲಾಖೆಗಳು ಏರಿ​‍್ಡಸಿದ್ದ ವಸ್ತು ಪ್ರದರ್ಶನ ಮಳಿಗೆಗಳನ್ನು ಸಂದರ್ಶಿಸಿದರು. ಕೇಂದ್ರ ಸರ್ಕಾರದ ನೊಂದಾಯಿತ ಕಲಾವಿದರು ಮನೋರಂಜನಾ ಕಾರ್ಯಕ್ರಮ ನೀಡಿದರು.