ಮಕ್ಕಳ ಪರಿಪೂರ್ಣ ವ್ಯಕ್ತಿತ್ವಕ್ಕೆ ಶ್ರಮಿಸಿ: ಖಾಜಿ

ಲೋಕದರ್ಶನವರದಿ

ಧಾರವಾಡ04 : ಶಾಲಾ ಅಂಗಳದಲ್ಲಿ ಶಿಕ್ಷಕರು ಹಾಗೂ ಕುಟುಂಬದ ಪರಿಸರದಲ್ಲಿ ಪಾಲಕರು ಮಕ್ಕಳ ಪರಿಪೂರ್ಣ ವ್ಯಕ್ತಿತ್ವಕ್ಕೆ ಶ್ರಮಿಸಬೇಕೆಂದು ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಚಿಣ್ಣರ ಕಲಿಕೆಗೆ ಪ್ರೋತ್ಸಾಹ ನೀಡುವಲ್ಲಿ ಹಮ್ಮಿಕೊಂಡಿದ್ದ ಪುಟಾಣಿ ಪದವೀಧರರ ದಿನದ ವಿಶೇಷ ಘಟಿಕೋತ್ಸವದಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ. ಮಕ್ಕಳಿಗೆ ಗೌನ್ ತೊಡಿಸಿ ಪದಕ ಮತ್ತು ಪ್ರಮಾಣಪತ್ರ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿದರ್ೆಶಕ ಹಾಗೂ ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಸಲಹೆ ಮಾಡಿದರು.

 ವಿದ್ಯಾಥರ್ಿಗಳು ಮಿನುಗುತಾರೆಗಳಿದ್ದಂತೆ, ಅವರಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯಗಳು ಲಭಿಸಿದರೆ, ಅವರು ಬೆಳೆದು ಉನ್ನತ ವ್ಯಕ್ತಿತ್ವದ ಪ್ರಜೆಗಳಾಗುವುದರಲ್ಲಿ ಸಂಶಯವಿಲ್ಲ ಎಂದೂ ಖಾಜಿ ಹೇಳಿದರು. ಇದೇ ಸಂದರ್ಭದಲ್ಲಿ ಅವರು ಶಾಲೆಯ ನೂತನ ಸಭಾಂಗಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದರು. 

ಎ.ಆರ್.ಸಿ. ಫéೌಂಡೇಶನ್ ಅಧ್ಯಕ್ಷ, ನ್ಯಾಯವಾದಿ ಅರುಣ ಚರಂತಿಮಠ ವಿದ್ಯಾಥರ್ಿಗಳಲ್ಲಿ ಕೇವಲ ತಪ್ಪುಗಳನ್ನು ಹುಡುಕಿ ಹೀಯಾಳಿಸುವದನ್ನು ಬಿಟ್ಟು ಪಾಲಕರು ಹಾಗೂ ಪೋಷಕರು ಮಕ್ಕಳನ್ನು ಅವರ ಉತ್ತಮ ಹವ್ಯಾಸಗಳತ್ತ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು. ಶಾಲೆಯ ಪ್ರಿನ್ಸಿಪಾಲ್ ವೀಣಾ ಮಣಿ, ಶಾಲಾ ಆಡಳಿತ ಮಂಡಳಿ ಸದಸ್ಯೆ ವೀಣಾ ಬೆಟಗೇರಿ, 'ಜೀವನ ಶಿಕ್ಷಣ' ಮಾಸಪತ್ರಿಕೆಯ ಸಂಪಾದಕ ಗುರುಮೂತರ್ಿ ಯರಗಂಬಳಿಮಠ, ನಿವೃತ್ತ ಯೋಧ ಮಲ್ಲಿಕಾಜರ್ುನ ಪಾಟೀಲ, ಪಾಲಕರು-ಶಿಕ್ಷಕರು ಸೇರಿದಂತೆ ಇತರರು ಇದ್ದರು.

ಶಾಲೆಯ ಪುಟ್ಟ ಪುಟ್ಟ ಮಕ್ಕಳು ನೀಲಿ ಮತ್ತು ಕೆಂಪು ಬಣ್ಣದ ಗೌನ್ ತೊಟ್ಟು ತಲೆಗೆ ವಿಶಿಷ್ಟ ಟೊಪ್ಪಿಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದರು