ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು: ಡಾ. ಪೂನಂ ಪಾಟೀಲ

Women should engage themselves in every field: Dr. Poonam Patil

 ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು: ಡಾ. ಪೂನಂ ಪಾಟೀಲ  

ಕಾಗವಾಡ: ಇಂದಿನ ಸ್ಮರ್ಧಾತ್ಮಕ ಯುಗದಲ್ಲಿ ಮಹಿಳೆಯರು ಯಾವುದೇ ಆತಂಕವಿಲ್ಲದೇ ಪ್ರತಿಯೊಂದು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಸ್ವಾವಲಂಬಿಗಳಾಬೇಕು. ಸಮಾಜದಲ್ಲಿ ಪುರುಷ-ಮಹಿಳೆ ಎಂಬ ಭೇದ ಭಾವವನ್ನು ಅಳಿಸಿ ಸಮಾಜವನ್ನು ಸಮತೋಲಾಗಿಸಬೇಕೆಂದು ಶೇಡಬಾಳದ ವೈದ್ಯರಾದ ಡಾ. ಪೂನಂ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ. ಶನಿವಾರ ದಿ. 08 ರಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಡಿ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಅವಕಾಶಗಳು ಕಡಿಮೆಯಾಗಿದ್ದವು. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಂಡ ಅನೇಕ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೇ ಇಂದು ಮಹಿಳೆಯರಿಗೆ ಅವಕಾಶಗಳು ಹೆಚ್ಚಾಗಿವೆ. ನಮ್ಮ ದೇಶದ ಪ್ರಮುಖ ಕೇತ್ರಗಳಲ್ಲಿ ಮಹಿಳೆಯರು ಪ್ರಮುಖ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ ಎಂದರು. ಕಾರ್ಯಕ್ರಮವನ್ನು ಬಿಕಾಂ ವಿದ್ಯಾರ್ಥಿನಿಯರ ಪಾರ್ಥನೆಯೊಂದಿಗೆ ವಿದ್ಯಾದೇವಿ ಸರಸ್ವತಿ ದೇವಿಯ ಪೂಜೆಯೊಂದಿಗೆ ಚಾಲನೆ ನೀಡಲಾಯಿತು. ಬಿಎ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯ್ನ ಎಸ್‌.ಆರ್‌. ಪರುತಗಾಲೆ ವಹಿಸಿದ್ದರು. ಈ ವೇಳೆ ಎ.ಆರ್‌. ಚೌಗಲೆ ಬಿ.ಡಿ. ಬನಜವಾಡೆ, ಸ್ವಾತಿ ಜತಗೌಡರ ಅಮೃತಾ ಜಾಧವ, ಬಿ.ಎಸ್‌. ಮಿರಗಿ ಡಿ.ಕೆ. ಮಾಲಗಾಂವೆ ಬಿ.ಎಸ್‌. ಸೊಕಾರೆ ಸತೀಶ ಪಾಟೀಲ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥತರಿದ್ದರು.