ಲೋಕದರ್ಶನ ವರದಿ
ಕೊಪ್ಪಳ 20: 18ನೇ ಶತಮಾನದಲ್ಲೇ ಮಹಿಳೆ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡದ್ದು ಇತಿಹಾಸ. ಮಾಧ್ಯಮ ಲೋಕ ಇಂದು ವಿಸ್ತಾರಗೊಂಡಿದೆ. ಹೈ-ಕ ಭಾಗದಲ್ಲಿ ಮಹಿಳೆಯರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕಿದೆ ಎಂದು ಪತ್ರಿಕೆಯೊಂದರ ವಿಶೇಷ ವರದಿಗಾರ ಸೋಮರಡ್ಡಿ ಅಳವಂಡಿ ಕರೆ ನೀಡಿದರು.
ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಡಿಸಿದ ಅವರು ಉಪನ್ಯಾಸ ನೀಡಿದರು.
ಕನ್ನಡ ಪತ್ರಿಕೋದ್ಯಮದಲ್ಲಿ ಮಹಿಳಾ ಪತ್ರಕರ್ತರು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ವಚನಗಳ ಮೂಲಕವೇ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಅವರಂಥ ವಚನಕಾರರು ಪತ್ರಕರ್ತರ ಮನೋಧೋರಣೆ ಹೊಂದಿದವರು. ಪತ್ರಕರ್ತ ಎನಿಸಿಕೊಂಡವರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಸ್ವಸ್ಥ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಂಥ ಕಾರ್ಯದಲ್ಲಿ ಮಹಿಳಾ ಪತ್ರಕರ್ತರು ಧುಮುಕಿ ಕೊಡುಗೆ ನೀಡುವಂತಾಗಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಾದಿಕ್ ಅಲಿಯವರು, ಪತ್ರಿಕಾರಂಗದ ತಮ್ಮ 22 ವರ್ಷಗಳ ಅನುಭವಗಳನ್ನು ಹಂಚಿಕೊಂಡು, ಕೆಟ್ಟಪಥದಲ್ಲಿರುವ ಸಮಾಜವನ್ನು ಉತ್ತಮ ದಾರಿಗೆ ಕೊಂಡೊಯ್ಯುವಲ್ಲಿ ಪತ್ರಕರ್ತರು ಶ್ರಮಿಸಬೇಕು ಎಂದರು.
ಮತ್ತೋರ್ವ ಅತಿಥಿ ಕೊಪ್ಪಳ ಮೀಡಿಯಾ ಕ್ಲಬ್ನ ಅಧ್ಯಕ್ಷ ಸಂತೋಷ ದೇಶಪಾಂಡೆ ಮಾತನಾಡಿ, ಯುವಕರು ಪತ್ರಿಕೋದ್ಯಮದತ್ತ ನಾನಾ ಕಾರಣಗಳಿಗಾಗಿ ಆಕರ್ಷಿತರಾಗುತ್ತಿದ್ದು, ಇದು ವೃತ್ತಿಯಲ್ಲ, ಸೇವೆ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಸವರಾಜ ಕರುಗಲ್, ಮೊದಲ ಬಾರಿಗೆ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಆಯೋಜಿಸಿದ್ದು, ಮುಂಬರುವ ದಿನಗಳಲ್ಲಿ ಮಾಧ್ಯಮ ಲೋಕದ ಗಣ್ಯರೊಂದಿಗೆ ವಿದ್ಯಾಥರ್ಿಗಳ ಸಂವಾದ, ಮಾಹಿತಿ ವಿನಿಮಯಕ್ಕೆ ಪತ್ರಿಕೋದ್ಯಮ ವಿಭಾಗ ಹಲವು ಯೋಜನೆ ರೂಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಮನೋಹರ ದಾದ್ಮಿ ಮಾತನಾಡಿ, ಪತ್ರಿಕೋದ್ಯಮ ವಿಭಾಗ ಕ್ರಿಯಾಶೀಲವಾಗಿದ್ದು, ಮುಂದಿನ ದಿನಗಳಲ್ಲೂ ಇಂಥ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಕಾಲೇಜಿನ ವಿದ್ಯಾಥರ್ಿಗಳು ಪತ್ರಿಕಾ ಲೋಕ ಪ್ರವೇಶಿಸಿ ಸಮಾಜ ಪರ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.
ಈ ವೇಳೆ ಪ್ರೊ.ಪ್ರಕಾಶ್ ಬಳ್ಳಾರಿ, ಪ್ರೊ.ಶಿವಕುಮಾರ್, ಪ್ರೊ.ರಾಜು ಹೊಸಮನಿ, ಪ್ರೊ.ಅರುಣ್, ಡಾ.ಬಸವರಾಜ ಪೂಜಾರ್, ಪ್ರೊ.ಶರಣಬಸವ ಬಿಳಿಯಲಿ, ಮೂರನೇ ಸೆಮ್ ವಿದ್ಯಾಥರ್ಿಗಳು ಇದ್ದರು. ಭಾವನಾ ಮತ್ತು ತೇಜಸ್ವಿನಿ ನಿರೂಪಿಸಿದರು. ಕಾವ್ಯಾ ಪ್ರಾಥರ್ಿಸುದರು. ಉಮಾ ಹಾಗೂ ಪ್ರೊ. ನಾಗರಾಜ ದಂಡೋತಿ ಅತಿಥಿ ಪರಿಚಯ ಮಾಡಿಕೊಟ್ಟರು. ಕಾನೀಸ್ ಫಾತೀಮಾ ವಂದಿಸಿದರು.