ವನಿತೆಯರ ಅಂಡರ್-23 ಹಾಕಿ: ಕೆನಡಾ ವಿರುದ್ಧ 0-0 ಡ್ರಾ ಸಾಧಿಸಿದ ಭಾರತ


ಅಂಟ್ವೆರ್ಪ 19: ಭಾರತದ ಜ್ಯೂನಿಯರ್ ಮಹಿಳಾ ಹಾಕಿ ತಂಡವು ಅಂಡರ್-23 ಆರು ದೇಶಗಳನ್ನೊಳಗೊಂಡ ಟೂನರ್ಿಯ ನಾಲ್ಕನೇ ಸುತ್ತಿನ ರಾಬಿನ್ ಪಂದ್ಯದಲ್ಲಿ ಕೆನಡಾ ವಿರುದ್ಧ 0-0 ಡ್ರಾ ಸಾಧಿಸಿದೆ. 

ಟೂನರ್ಿಯ ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಪ್ರೀತಿ ದುಬೇ ನೇತೃತ್ವದ ಭಾರತದ ವನಿತೆಯರು ಈ ಹಿಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮೊದಲ ಪಂದ್ಯದಲ್ಲಿ ಐಲರ್ೆಂಡ್ ವಿರುದ್ಧ 4-1, ಬಳಿಕ ಗ್ರೇಟ್ ಬ್ರಿಟನ್ ವಿರುದ್ಧ 1-0 ಹಾಗೂ ಮುರನೇ ಪಂದ್ಯದಲ್ಲಿ ಅತಿಥೇಯ ಬೆಲ್ಜಿಯಂ ವಿರುದ್ಧ 2-0 ಅಂತರದ ಭರ್ಜರಿ ಜಯ ಗಳಿಸಿದ್ದರು. 

ಬಳಿಕ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಕೆನಡಾ ವಿರುದ್ಧ 0-0 ಡ್ರಾ ಸಾಧಿಸುವ ಮೂಲಕ ಟೂನರ್ಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದಾರೆ. ಪಂದ್ಯದಲ್ಲಿ ಭಾರತ 6 ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೂ ಅದನ್ನು ಗೋಲ್ ಆಗಿ ಪರಿವತರ್ಿಸಲಾಗಲಿಲ್ಲ. 

ಕೆನಡಾ ವನಿತೆಯರು ಅದ್ಭುತ ಡಿಫೆಂಡಿಂಗ್ ಮೂಲಕ ಗಮನ ಸೆಳೆದರು. ಅಲ್ಲದೆ ಕೆನಡಾ ಕೂಡ 3 ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಗೋಲು ಬಾರಿಸಲಾಗಲಿಲ್ಲ. ಹೀಗಾಗಿ ಪಂದ್ಯವು 0-0 ಡ್ರಾ ಮೂಲಕ ಅಂತ್ಯಗೊಂಡಿತು.  

ಇನ್ನು ಟೂನರ್ಿಯ ಮುಂದಿನ ಪಂದ್ಯದಲ್ಲಿ ಭಾರತ ನಾಳೆ ನೆದಲರ್ೆಂಡ್ ವಿರುದ್ಧ ಸೆಣೆಸಲಿದೆ.