ಲೋಕದರ್ಶನ ವರದಿ
ಕೊಪ್ಪಳ 19: ರಾಜಕೀಯ, ಸಾಮಾಜಿಕ ಹಾಗೂ ಆಥರ್ಿಕ ಸೇರಿದಂತೆ ವಿವಿಧ ರಂಗಗಳಲ್ಲಿ ಮಹಿಳೆಯರು ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಿದ್ದು, ಪಕ್ಷದ ಮುಖಾಂತರ ಮಹಿಳೆಯರ ರಾಜಕೀಯ ಸ್ಥಾನಮಾನಗಳಿಗಾಗಿ ಸಂಘಟಿತವಾಗಬೇಕೆಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಮಹಿಳಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ರಾಜಕೀಯ ಬದಲಾವಣೆ ಇಂದು ಅಗತ್ಯವಾಗಿದೆ, ಮಹಿಳೆಯರ ಹಕ್ಕುಗಳ ರಕ್ಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಇನ್ನೂ ನ್ಯಾಯಯುತವಾಗಿ ಪಾಲು ಸಿಗಬೇಕಾಗಿದೆ. ಬಿಜೆಪಿಯಿಂದ ಮಹಿಳೆಯರ ಅಭಿವೃದ್ಧಿ ಸಾಧ್ಯವಿಲ್ಲ ಅದಕ್ಕಾಗಿ ನಿರಂತರ ಹೋರಾಟ ಅವಶ್ಯವೆಂದರು.
ರಾಜ್ಯದಲ್ಲಿ ಕಾಂಗ್ರೆಸ್ನ ಮಹಿಳಾ ಘಟಕವನ್ನು ಹೆಚ್ಚು ಬಲಶಾಲಿಯಾಗಿ ಸಂಘಟಿಸಲು ಕಾರ್ಯತಂತ್ರಗಳನ್ನು ಹಾಕಿಕೊಂಡಿದ್ದು, ನಾವೇಲ್ಲಾ ಪಕ್ಷದ ಜೊತೆ ಜೊತೆಯಾಗಿ ಬೆಳೆಯಬೇಕು, ಅದರೊಟ್ಟಿಗೆ ಪಕ್ಷ ಹಾಗೂ ಸಕರ್ಾರದಲ್ಲಿ ಪ್ರಮಾಣಿಕ ಕಾರ್ಯಕರ್ತರಿಗೆ ಖಂಡಿತ ಅವಕಾಶಗಳಿವೆ, ಬರಲಿರುವ ಲೋಕಸಭಾ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಹೆಚ್ಚು ಮಹಿಳೆಯರನ್ನು ಕರೆತರುವದು ಹಾಗೂ ಶಕ್ತಿ ಯೋಜನೆಯಡಿ ಸದಸ್ಯರನ್ನಾಗಿ ನೋಂದಾಯಿಸುವುಂತೆ ಕರೆನೀಡಿದರು.
ಕಾಂಗ್ರೆಸ್ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಇಂದಿರಾ ಭಾವಿಕಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದಶರ್ಿ ಕಿಶೋರಿ ಬೂದನೂರ್, ಭಾರತಿ ನೀರಗೇರಿ, ಸೇರಿದಂತೆ ಜಿಲ್ಲೆಯ ಚುನಾಯಿತ ಮಹಿಳಾ ಪ್ರತಿನಿಧಿಗಳು, ವಿವಿಧ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.