ಮಹಿಳೆ ಆಧುನಿಕತೆಗೆ ಆಧಾರವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ: ಜಯರಾಮ್ ಶೆಟ್ಟಿ
Women are the foundation of modernity: Jayaram Shetty
ಮಹಾಲಿಂಗಪುರ 05: ಅಂದು ಮಹಿಳೆ ಅಬಲೆಯಾಗಿದ್ದಳು ಆದರೆ ಇಂದು ಆಧುನಿಕತೆ ಬೆಳೆದಂತೆ ಮಹಿಳೆ ಬದಲಾಗಿ ಇಂದು ಪ್ರತಿ ರಂಗದಲ್ಲಿ ಪುರುಷರಿಗೆ ಸರಿಸಮಾನಾಗಿ ಕೆಲಸ ನಿರ್ವಹಿಸಿ ಆಧುನಿಕತೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ಹಿರಿಯ ಪತ್ರಕರ್ತರಾದ ಜಯರಾಮ್ ಶೆಟ್ಟಿ ಹೇಳಿದರು.
ನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಶ್ರೀ ಮಡಿವಾಳ ಮಾಚಿದೇವ ಮಹಿಳಾ ಸ್ವ ಸಹಾಯ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿ ಮಾತನಾಡಿ ಇಂದು ಜಗತ್ತಿನ ಅನೇಕ ದೇಶಗಳನ್ನು ಮುನ್ನೆಡೆಸುತ್ತಿದ್ದಾಳೆ. ಭಾರತದ ರಾಷ್ಟ್ರಪತಿಯಾಗಿ, ಹಣಕಾಸು ಸಚಿವೆಯಾಗಿ, ಬೇರೆ ಬೇರೆ ದೇಶಗಳಲ್ಲಿ ಅನೇಕ ಉನ್ನತ ಹುದ್ದೆಗಳನ್ನು ಪಡೆದು ಕಾರ್ಯ ನಿರ್ವಹಿಸುತ್ತಿದ್ದಾಳೆ ಪುರುಷರಿಗೆ ಸರಿಸಮನಾಗಿ ಸಾಧನೆ ಮಾಡಿ ತೊಟ್ಟಿಲು ತೂಗುವ ಕೈ ಜಗತ್ತನ್ನೇ ಅಳಬಲದು ಎಂದು ಪದೇ ಪದೇ ಸಾಭಿತು ಮಾಡುತ್ತಿದ್ದಾಳೆ.ಎಂದರು.
ನಂತರ ಮಾತನಾಡಿದ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಸುಲೋಚನಾ ಮಡಿವಾಳ ನಾವು ಭಾವಿ ಕಪ್ಪೆಯಾಗದೆ ಆಧುನಿಕತೆಗೆ ಹೊಂದಿಕೊಂಡು ಸಮಾಜಮುಖಿಯಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವುದರ ಜೊತೆಗೆ ಸಂಸ್ಕಾರ ಕೊಟ್ಟರೆ ನಮ್ಮ ಮಕ್ಕಳು ಸಮಾಜದ ಉತ್ತಮ ಪ್ರಜೆಯಾಗಿ ಸಮಾಜದ ಶಕ್ತಿಯಾಗಿ ಬೆಳೆಯಬಲ್ಲರು ಎಂದರು. ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಗೋಪಿ ಮಡಿವಾಳ ಮಾತನಾಡಿದರು.
ಈ ಸಂದರ್ಭದಲ್ಲಿ ರಮೇಶ್ ಮಹಾಲಿಂಗಪ್ಪ ಮಡಿವಾಳ, ಅಧ್ಯಕ್ಷತೆ ವಹಿಸಿದ್ದರು ಸುಧಾ ಮಡಿವಾಳ ಮಲ್ಲಮ್ಮ ಪರಿಟ, ಶ್ರೀಶೈಲ ಮಡಿವಾಳ, ಸುಮಿತ್ರಾ ಮಡಿವಾಳ, ಕವಿತಾ ಮಡಿವಾಳ, ಮಂಜುಳಾ ಪರಿಟ, ಶಾಂತಾ ಮಡಿವಾಳ, ಹಿರಿಯ ಪತ್ರಕರ್ತರಾದ ಮಹೇಶ ಆರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಮಹಿಳಾ ಸಂಘದ ಗೌರವ ಅಧ್ಯಕ್ಷರಾದ ಶಾಂತಾ ಮಡಿವಾಳ, ಕಾರ್ಯಧ್ಯಕ್ಷರಾದ ಲಕ್ಷ್ಮಿ ಮಡಿವಾಳ ಅಧ್ಯಕ್ಷರಾದ ಸುಧಾ ಪರಿಟ, ಉಪಾಧ್ಯಕ್ಷರಾದ ಸುನಂದಾ ಪರಿಟ್, ಕಾರ್ಯದರ್ಶಿ ಸುರೇಖಾ ಮಡಿವಾಳ, ಖಜಾಂಚಿ ಭಾಗ್ಯಶ್ರೀ ಮಡಿವಾಳ, ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮಿ ಮ ಮಡಿವಾಳ, ಯಲ್ಲವ್ವಾ ಮಾ ಮಡಿವಾಳ, ರೇಖಾ ಮಡಿವಾಳ, ಮಹಾನಂದಾ ಅ ಮಡಿವಾಳ, ಮಹಾದೇವಿ ಮ ಮಡಿವಾಳ, ಪದ್ಮಾವತಿ ಮಡಿವಾಳ, ಸಹ ಕಾರ್ಯದರ್ಶಿಗಳಾದ ಸುಮಿತ್ರಾ ಅ ಮಡಿವಾಳ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಇದ್ದರು. ಮುಖಂಡರಾದ ಅರ್ಜುನ್ ಮಡಿವಾಳ, ವಿಜಯ ಮಡಿವಾಳ, ರವಿ ಮಡಿವಾಳ, ಮಾನಿಂಗ ಮಡಿವಾಳ, ರಮೇಶ ಮಡಿವಾಳ, ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ಪತ್ರಕರ್ತರಾದ ಲಕ್ಷ್ಮಣ ಕಿಶೋರ್ ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 