ಕಿನ್ನಾಳದಲ್ಲಿ ಮಹಿಳಾ ಗ್ರಾಮ ಸಭೆ: ಮಹಿಳೆ ಅಬಲೆ ಅಲ್ಲ ಸಬಲೆ-ನ್ಯಾ, ಚಂದ್ರಶೇಖರ್
ಕೊಪ್ಪಳ 24 : ಮನೆಯ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿರುವ ಮಹಿಳೆ ಅಬಲೇ ಅಲ್ಲ ಸಬಲೆ ಯಾಗಿದ್ದಾಳೆ, ಪುರುಷ ದುಡಿದು ಮನೆಗೆ ತಂದು ಹಾಕ ಬಹುದು ,ಆದರೆ ಮನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಣೆ ಮಹಿಳೆ ಮೇಲೆ ಅವಲಂಬಿತ ವಾಗಿರುತ್ತದೆ , ಎಂದು ಕೊಪ್ಪಳ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ಸಿ, ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು,ಅವರು ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಏರಿ್ಡಸಿದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆವರು ಮಹಿಳೆಗೆ ನಾವು ಅಬಲೇ ಎಂದು ಕರೆಯದೆ ಸಬಲೆ ಎಂದು ಕರೆಯಬೇಕು ಎಂದ ಅವರು ಮನೆಯ ಮತ್ತು ಕುಟುಂಬದ ಜವಾಬ್ದಾರಿ ನಿರ್ವಹಣೆಯಲ್ಲಿ ಮಹಿಳೆಗೆ ಪುರುಷ ಸೇರಿದಂತೆ ಇತರ ಸದಸ್ಯರು ಸಹಕಾರ ನೀಡಬೇಕು ಎಂದರು, ಮುಂದುವರೆದು ಮಾತನಾಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮನವಿ ಮೇರೆಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದತ್ತು ಗ್ರಾಮ ಕಿನ್ನಾಳಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ 1.56 ಕೋಟಿ ಸಾಮಾಗ್ರಿ ಆಧಾರಿತ ಕಾಮಗಾರಿ ಮಂಜೂರು ಮಾಡಿದೆ ಎಂದು ವಿವರಿಸಿದರು, ಇದೇ ವೇಳೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳಿಗೆ ಅವರು ಭೂಮಿ ಪೂಜೆ ನೆರವೇರಿಸಿದರು ನಂತರ ಡೆಲ್ ಸಹಯೋಗದಲ್ಲಿ ಪ್ರಾರಂಭವಾದ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯದೀಶರಾದ ಸಿ, ಚಂದ್ರಶೇಖರ್ ರವರು ಸಲಹೆ ನೀಡಿದರು. ಈಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ದರ್ಗದ ಸೇರಿದಂತೆ ಕಿನ್ನಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ವೇತಾ ರಾಘವೇಂದ್ರ ಡಂಬಳ, ಉಪಾಧ್ಯಕ್ಷರಾದ ದುರ್ಗಪ್ಪ ಡಾಂಬರ್, ಗ್ರಾಮ ಪಂಚಾಯಿತಿಯ ಸದಸ್ಯರಾದ ಕಾಳಪ್ಪ ಬಿದರುರ, ಹನುಮೇಶ್ ಕೋವಿ, ಪ್ರಶಾಂತ ಕುಲಕರ್ಣಿ ಮಂಜುನಾಥ ಕುರುಬರ, ಮೈಲಾರ್ಪ ಉದ್ದಾರ್, ಸಣ್ಣಪ್ಪ, ಮಾರುತಿ ಹಂಚಿನಾಳ ,ಶಕುಂತಲಾ, ಮೇಘ ಹಿರೇಮಠ್, ಕಮಲಮ್ಮ ಶಶಿರೇಖಾ ,ದೀಪ ,ಕಸ್ತೂರಮ್ಮ ,ಶಿಲ್ಪ ಉಪ್ಪಾರ್, ಅಲ್ಲದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರಯ್ಯ ತೇಳಗಡೆ ಮಠ, ಕಾರ್ಯ ದರ್ಶಿ ನೀಲಮ್ಮ, ಲೆಕ್ಕ ಸಹಾಯಕ ತಾಜುದ್ದೀನ್ ಸೇರಿದಂತೆ ವೈದ್ಯಾಧಿಕಾರಿಗಳು ಸಿಡಿಪಿಯು ಮತ್ತು ಶಾಲೆಗಳ ಮುಖ್ಯೋಪಾಧ್ಯಾಯರು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,,