ನ್ಯಾಯವಾದಿ ಸಂಘದಿಂದ ಮಹಿಳಾ ದಿನಾಚರಣೆ
ವಿಜಯಪುರ, 10 : ಮಹಿಳೆಯರು ಯಾವುದಕ್ಕೂ ಕಮ್ಮಿಯಿಲ್ಲ ಎಂದು ಇತ್ತೀಚಿನ ದಿನಮಾನದಲ್ಲಿ ಎಲ್ಲ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪನ್ನು ಮೂಡಿಸಿರುವುದು ಸಂತೋಷದಾಯಕವಾಗಿದೆ ಎಂದು ಡಿ.ಬಿ. ಬಿರಾದಾರ ಹೇಳಿದರು. ಅವರು ನಗರದ ನ್ಯಾಯವಾದಿ ಸಂಘದ ಕಛೇರಿಯಲ್ಲಿ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಅವರು ಮಹಿಳೆಗೆ ವಿಶೇಷ ಶಕ್ತಿಯಿದೆ. ಸಹನೆಯ ಮೂರ್ತಿ ಮಹಿಳೆಯದಾಗಿದೆ. ಮಹಿಳೆ ಇಲ್ಲದೇ ಜೀವನ ಇಲ್ಲ. ಇಂದಿನ ದಿನದಲ್ಲಿ ಮಹಿಳೆ ಅಡುಗೆ ಮನೆಗೆ ಸಿಮಿತಗೊಳ್ಳದೇ ಸರ್ವ ರಂಗದಲ್ಲಿ ಪಾಲ್ಗೋಂಡು ತಮ್ಮದೇ ವೀಶಿಷ್ಠತೆಯನ್ನು ಕಂಡುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನ್ಯಾಯಾದೀಶರ ಧರ್ಮಪತ್ನಿಯಾದ ಶ್ರೀಮತಿ ಸ್ಮೀತಾ ಎಂ. ಪಾಟೀಲ, ಅತಿಥಿಗಳಾದ ಅನ್ನಪೂರ್ಣ ಸುಭಾಷ ಸಂಕದ, ಸುಧಾ ಸಂಕ್ರೆಸಿ ಇವರು ಅತಿಥಿ ಸ್ಥಾನ ವಹಿಸಿದ್ದರು. ಜಿಲ್ಲಾ ನ್ಯಾಯಾವಾದಿ ರಮಾ ನಾಯಕ, ಸಂಘದ ಮಹಾ ಸದಸ್ಯರದ ಶ್ರೀಮತಿ ಸಹೀದಾ ಆಸಂಗಿ, ಕಾವ್ಯ ಬಿರಾದಾರ, ಸಾವಿತ್ರಿ ರಾಮನಗೇರಿ, ಲೋಕೇಶ ಧನಪಾಲ ಹವಲೇ, ಜಹಾಜನ, ಮಹೇಶ ಚಂಧ್ರಕಾಂತ, ಸಮೀರ ಕೋಳ್ಳಿ, ಪರಿಮಳಾ ತುಬಾಕಿ, ಯುವಕನ ಮರಡಿ, ಸ್ಮೀತಾ, ಮಾಲಗಾವಿ, ಚಂದ್ರಕಾಂತ, ಭಾರತಿ ತೆಗ್ಗಿನಳ್ಳಿ, ಲಕ್ಷ್ಮೀ ಕನ್ನೋಳ್ಳಿ, ಗಿರಿಜಾ ನ್ಯಾಯವಾದಿ ಪುತ್ರಿ, ನೃತ್ಯ ಮಾಡಿದಳು, ಶ್ವೇತಾ ಶಿರಾಢೋಣ ಮಂಜುಳಾ ಅರಕೇರಿ ಗೀತೆ ಹಾಡಿದರು. ಎಸ್.ಎಮ್. ಭಕ್ಷಿ, ನಿರೂಪಿಸಿದರು. ದೀಪಾ ಬೀರಲದಿನ್ನಿ ವಂದಿಸಿದರು.