ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ
ಗದಗ 12: ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಗುನ್ನಾ ನಂಬರ: 12/2025 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಕಾಣೆಯಾದ ಮಹಿಳೆ ಸೋಫಿಯಾ ತಂದೆ ಮಲ್ಲಿಕಸಾಬ ರೋಣದ ವಯಾ: 18 ವರ್ಷ 08 ತಿಂಗಳ ಉದ್ಯೋಗ ಮನೆಗೆಲಸ ಸಾ: ನರೇಗಲ್ಲ ತಾ: ಗಜೇಂದ್ರಗಡ ಇವಳು ದಿನಾಂಕ 02/03/2025 ರಂದು ರಾತ್ರಿ 11:00 ಘಂಟೆಯಿಂದ ದಿನಾಂಕ 03/03/2025 ರಂದು ಬೆಳಗ್ಗೆ 04:30 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ತನ್ನ ತಂದೆಯ ಮನೆಯಿಂದ ಹೋದವಳು ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಈ ಬಗ್ಗೆ ನರೇಗಲ್ಲ ಪೊಲೀಸ್ ಠಾಣೆಯಲ್ಲಿ ದಿನಾಂಕ 07/03/2025 ರಂದು ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮಹಿಳೆಯ ಚಹರೆಪಟ್ಟಿ ಸೋಫಿಯಾ ತಂದೆ ಮಲ್ಲಿಕಸಾಬ, ವಯಸ್ಸು;18ವರ್ಷ08ತಿಂಗಳು, ಎತ್ತರ;05ಫೂಟ್, ಜಾತಿ;ಮುಸ್ಲೀಂ, ಉದ್ಯೋಗ ;ಮನೆಗೆಲಸ, ಶಿಕ್ಷಣ 10ನೇ ತರಗತಿ ಚಹರೆ : ಮೈಯಿಂದ ಸಾಧಾರಣ, ಕೆಂಪು ಮೈಬಣ್ಣ, ಕೋಲುಮುಖ, ತಲೆಯಲ್ಲಿ ಕಪ್ಪು ಕೂದಲು ಹೊಂದಿರುತ್ತಾಳೆ. ಧರಿಸಿದ ಬಟ್ಟೆಗಳು : ತಿಳಿ ಹಸಿರು ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾಳೆ. ಮಾತನಾಡುವ ಭಾಷೆ : ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾಳೆ.ಸದರಿ ಕಾಣೆಯಾದ ಮಹಿಳೆಗೆ ಪತ್ತೆ ಮಾಡುವ ಕುರಿತು ಕಾಣೆಯಾದ ಮಹಿಳೆಯ ಭಾವಚಿತ್ರವನ್ನು, ಅವಳ ವಿವರಗಳನ್ನು ಹಾಗೂ ಪೊಲಿಸ್ ಪ್ರಕಟಣೆಯನ್ನು ಲಗತ್ತಿಸಿರುತ್ತದೆ. ಸದರಿ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿಎಸ್‌ಐ ನರೇಗಲ್ ಪೊಲೀಸ್ ಠಾಣೆ ಮೊಬೈಲ್ ನಂಬರ: 08381-268233 / 9480804454, ಸಿಪಿಐ ರೋಣ ಮೊಬೈಲ ನಂ: 9480804434, ಗದಗ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ ನಂ: 9480804400 ನೇದ್ದಕ್ಕೆ ಸಂಪರ್ಕಿಸಬಹುದಾಗಿದೆ.