26 ಪದಕ ಹಾಗೂ 124 ಅಂಕಗಳೊಂದಿಗೆ ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಅಗ್ರಸ್ಥಾನ

With 26 medals and 124 marks, JSS Manjunatheshwar Institute of Graduate and Post Graduate Studies t

 

26 ಪದಕ ಹಾಗೂ 124 ಅಂಕಗಳೊಂದಿಗೆ ಜೆ.ಎಸ್‌.ಎಸ್  ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಅಗ್ರಸ್ಥಾನ

ದಾರವಾಡ 13 : 5000 ಮೀಟರ್ ಪುರುಷರ ಓಟದ ವಿಭಾಗದಲ್ಲಿ ಕರ್ನಾಟಕ ಆರ್ಟ್ಸ ಕಾಲೇಜಿನ ನಾಗರಾಜ ದಿವಟೆ 5000 ಮೀಟರ್ ಓಟದಲ್ಲಿ 14:45.60 ನಿಮಿಷದಲ್ಲಿ ಗುರಿ ತಲುಪಿ ಹಳೆಯ 1992 ರಲ್ಲಿ ಇಲಕಲ್‌ನಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಎಸ್‌.ಐ. ಕುಂಬಾರ ನಿರ್ಮಿಸಿದ 15:05.32 ನಿಮಿಷದ 32 ವರ್ಷ ದಾಖಲೆ ಮುರಿದು ನೂತನ ಕೂಟ ದಾಖಲೆಯನ್ನು ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ. 200 ಮೀಟರ್ ಪುರುಷರ ಓಟದಲ್ಲಿ ಕರ್ನಾಟಕ ಆರ್ಟ್ಸ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ 21.41 ನಿಮಿಷದಲ್ಲಿ ಗುರಿ ತಲುಪಿ ಹಿಂದಿನ 2019 ರಲ್ಲಿ ಧಾರವಾಡದಲ್ಲಿ ಹುಬ್ಬಳ್ಳಿ ಕೆ.ಎಲ್‌.ಇ ಆರ್ಟ್ಸ ಕಾಲೇಜಿನ ವಿನಾಯಕ ಸೊಂಟಣ್ಣವರ ಬರೆದ 21.78 ನಿಮಿಷದ ದಾಖಲೆ ಮುರಿದು ಹೊಸ ಕೂಟ ದಾಖಲೆ ಬರೆಯುವದರೊಂದಿಗೆ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ. 

ಪುರುಷರ ವಿಭಾಗ4ಘಿ100 ಮೀಟರ್ ರಿಲೇ ಪುರುಷ ವಿಭಾಗಧಾರವಾಡದ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಾದ ಸುನೀಲ್ ನಲವಡೆ, ಯಲ್ಲಪ್ಪಾ, ಯಶಸ್‌. ಡಿ ಮತ್ತು ಲೋಗೇಶ ಇವರ ತಂಡ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪಡೆದುಕೊಂಡಿದೆ.ಹೊನ್ನಾವರದ ಎಮ್‌.ಪಿ.ಇ.ಎಸ್ ಎಸ್‌.ಡಿ.ಎಮ್ ನ ಸನ್ನಿ ಫರ್ನಾಂಡಿಸ್, ಚಿನ್ಮಯ ಮರಾಠಿ, ನಾಗರಾಜ ಗೌಡ, ಈಶ್ವರ ಗೌಡ ಇವರ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದುಕೊಂಡಿದೆ. 

ಕುಮುಟಾ ಸರಕಾರಿ ಪದವಿ ಕಾಲೇಜಿನ ರೋಹನ್ ನಾಯಕ್, ಡಿ. ಧನಂಜಯ, ಮಿಥುನ್ ಮಹೇಶ ನಾಯಕ್,, ಕಮಲಾಕರ್ ಅಂಬಿಗ ಇವರ ತಂಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದಾರೆ. 

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ನಕುಲ್ ನಾಯಕ್, ರಜತ್ ಶಿರಾಲಿ, ಮನೋಜ ನಾಯಕ್, ನಾಗರಾಜ ಮರಾಠಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.4ಘಿ400 ಮೀಟರ್ ರಿಲೇ ಪುರುಷ ವಿಭಾಗಧಾರವಾಡದ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಾದ ಈರಣ್ಣಾ ಕಟಗಿ ಇವರ ತಂಡ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪಡೆದುಕೊಂಡಿದೆ.ಕರ್ನಾಟಕ ಆರ್ಟ್ಸ ಕಾಲೇಜಿನ ನಾಗರಾಜ ದಿವಟೆ ಇವರ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದುಕೊಂಡಿದೆ.ಧಾರವಾಡದ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ಪ್ರತಾಪ್ ಬಿ ಚಲವಾದಿ ತಂಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದೆ. 

5000 ಮೀಟರ್ ಓಟದ ಪುರುಷರ ವಿಭಾಗಕರ್ನಾಟಕ ಆರ್ಟ್ಸ ಕಾಲೇಜಿನ ನಾಗರಾಜ ದಿವಟೆ 5000 ಮೀಟರ್ ಓಟದಲ್ಲಿ 14:45.60 ನಿಮಿಷದಲ್ಲಿ ಗುರಿ ತಲುಪಿ ಹಳೆಯ 1992 ರಲ್ಲಿ ಇಲಕಲ್‌ನಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಎಸ್‌.ಐ. ಕುಂಬಾರ ನಿರ್ಮಿಸಿದ 15:05.32 ನಿಮಿಷದ ದಾಖಲೆ ಮುರಿದು ನೂತನ ಕೂಟ ದಾಖಲೆಯನ್ನು ಬರೆದು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ. 

ಧಾರವಾಡದ ಶಿ ಛತ್ರಪತಿ ಶಿವಾಜಿ ಮಹಾರಾಜ ಪದವಿ ಕಾಲೇಜಿನ ಪ್ರತಾಪ ಬಿ. ಛಲವಾದಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾನೆ ಕರ್ನಾಟಕ ಆರ್ಟ್ಸ ಕಾಲೇಜಿನ ಮಡಿವಾಳಪ್ಪಾ ಹುಂಬಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ 1500 ಮೀಟರ್ ಓಟ ಪುರುಷರ ವಿಭಾಗಧಾರವಾಡದ ಜೆ.ಎಸ್‌.ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್‌.ಕೆ ಗುಬ್ಬಿ ಪದವಿ ಕಾಲೇಜಿನ ಸಂಜೀವಕುಮಾರ ಬಿ. ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.ಕರ್ನಾಟಕ ಆರ್ಟ್ಸ ಕಾಲೇಜಿನ ಚನ್ನಯ್ಯಾ ಕೊರಪಟ್ಟಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ.ಕರ್ನಾಟಕ ಆರ್ಟ್ಸ ಕಾಲೇಜಿನ ಬಾಲು ಹೆಗ್ರಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.ಡಿಸ್ಕಸ್ ಥ್ರೋ ಪುರುಷರ ವಿಭಾಗಗದಗಿನ  ಪ್ರಭು ರಾಜೇಂದ್ರ ಪದವಿ ಕಾಲೇಜಿನ ಅಭಿನಂದನ ನಾಯಕ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ. 

ಕುಮುಟಾದ ಡಾ. ಎ.ವಿ ಬಾಳಿಗಾ ಕಾಲೇಜಿನ ರೋಹನ್ ನಾಯಕ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆಹುಬ್ಬಳ್ಳಿಯ ಐ.ಬಿ.ಎಮ್‌.ಆರ್ ಕಾಲೇಜಿನ ಅರ್ಚಿತ್ ಗಾಯಕವಾಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ. 

200 ಮೀಟರ್ ಓಟದ ಪುರುಷರ ವಿಭಾಗಕರ್ನಾಟಕ ಆರ್ಟ್ಸ ಕಾಲೇಜಿನ ಪ್ರಸನ್ನಕುಮಾರ ಮಣ್ಣೂರ 21.41 ನಿಮಿಷದಲ್ಲಿ ಗುರಿ ತಲುಪಿ ಹಿಂದಿನ 2019 ರಲ್ಲಿ ಧಾರವಾಡದಲ್ಲಿ ಹುಬ್ಬಳ್ಳಿ ಕೆ.ಎಲ್‌.ಇ ಆರ್ಟ್ಸ ಕಾಲೇಜಿನ ವಿನಾಯಕ ಸೊಂಟಣ್ಣವರ ಬರೆದ 21.78 ನಿಮಿಷದ ದಾಖಲೆ ಮುರಿದು ಹೊಸ ಕೂಟ ದಾಖಲೆ ಬರೆಯುವದರೊಂದಿಗೆ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ. 

ಹೊನ್ನಾವರದ ಎಮ್‌.ಪಿ.ಇ.ಎಸ್ ಎಸ್‌.ಡಿ.ಎಮ್ ಕಾಲೇಜಿನ ಚಿನ್ಮಯ ಮರಾಠಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾರೆ. 

ಹೊನ್ನಾವರದ ಎಮ್‌.ಪಿ.ಇ.ಎಸ್ ಎಸ್‌.ಡಿ.ಎಮ್ ಕಾಲೇಜಿನ ಸನ್ನಿ ಫರ್ನಾಂಡಿಸ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾರೆ. 

ಮಹಿಳಾ ವಿಭಾಗ4ಘಿ100 ಮೀಟರ್ ರಿಲೇ ಮಹಿಳಾ ವಿಭಾಗಧಾರವಾಡದ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿಯರಾದ ಸುಕನ್ಯಾ ಪತ್ರಿಮಠ, ಫೈರೋಜಾ ಅಂಗಡಿಕರ್, ಅಂಕಿತಾ ಮಲ್ಲಿಗವಾಡ, ಪ್ರೀನ್ಸಿತಾ ಸಿದ್ಧಿ ಇವರ ತಂಡ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪಡೆದುಕೊಂಡಿದೆ.ಸರಕಾರಿ ಪದವಿ ಕಾಲೇಜು ಮಣಕಿಯ ಶ್ರೇಯಾ ನಾಯಕ್, ಜೀವಿತಾ ಮೋಗೇರ, ಶ್ವಾತಿ ಶೆಟ್ಟಿ, ಅನುಷಾ ನಾಯಕ್ ಇವರ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳೀಯ ಪದಕ ಪಡೆದಕೊಂಡಿದೆ.ಹೊನ್ನಾವರದ ಎಮ್‌.ಪಿ.ಇ.ಎಸ್ ಎಸ್‌.ಡಿ.ಎಮ್ ಕಾಲೇಜಿನ ನಿಖಿತಾ ಪುರುಷೋತ್ತಮಗೌಡ ಶ್ಯಾಮಾ ಡಿ. ಸಹನಾ ಖರಿ​‍್ವ, ಸಿಂಚನಾ ನಾಯಕ್ ಇವರ ತಂಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದೆ. 

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾ ದೇವಾಡಿಗ, ಸಂಜನಾ ನಾಯಕ್, ಮೇಘನಾ ದೇವಾಡಿಗ, ಅಂಕಿತಾ ಫರ್ನಾಂಡಿಸ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.4ಘಿ400 ಮೀಟರ್ ರಿಲೇ ಮಹಿಳಾ ವಿಭಾಗಧಾರವಾಡದ ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿಯರಾದ ಚೈತ್ರಾ ಚಂದರಗಿ, ಪ್ರೀಯಾಂಕಾ ಓಲೆಕಾರ, ವಚನಶ್ರೀ ಮಡಿವಾಳರ ಮತ್ತು ವಿಜಯಲಕ್ಷ್ಮಿ ಇವರ ತಂಡ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪಡೆದುಕೊಂಡಿದೆ.ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಸರಸ್ವತಿ ಭಂಡಾರಿ, ಅಮೃತಾ ಜಗನ್ನಾಥ, ಶಿಲ್ಪಾ ಮೆಸ್ತಾ, ಚೈತ್ರಾ ಮೋಗೇರ ತಂಡ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದುಕೊಂಡಿದೆ.ಸರಕಾರಿ ಪದವಿ ಕಾಲೇಜು ಮಣಕಿಯ ಸುಜನಾ ನಾಯಕ, ಸುಚಿತ್ರಾ ನಾಯಕ್, ಕವನಾ ನಾಯಕ್, ಪೂಜಾ ನಾಯಕ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದೆ.ಭಟ್ಕಳದ ಮುರಡೇಶ್ವರದ ಆರ್‌.ಎನ್‌.ಎಸ್ ಪದವಿ ಕಾಲೇಜಿನ ಶಿಲ್ಪಾ, ಸುಮಾ, ಅಫ್ರೋಜಾ, ಕೌಸಲ್ಯಾ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.100 ಮೀಟರ್ ಹರ್ಡಲ್ಸ್‌ ಮಹಿಳಾ ವಿಭಾಗಕರ್ನಾಟಕ ಆರ್ಟ್ಸ ಕಾಲೇಜಿನ ಕೀರ್ತಿ ಸಂಗಣ್ಣವರ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿರುತ್ತಾರೆ.ಭಟ್ಕಳದ ಸರಕಾರಿ ಪದವಿ ಕಾಲೇಜಿನ ಅನನ್ಯಾ ನಾಯಕ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ.ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಅಂಕಿತಾ ಎಮ್ ಮಲ್ಲಿಗವಾಡ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾಳೆ.5000 ಮೀಟರ್ ಓಟದ ಮಹಿಳಾ ವಿಭಾಗಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಚೈತ್ರಾ ಚಂದರಗಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.ಧಾರವಾಡದ ಸರಕಾರಿ ಪದವಿ ಕಾಲೇಜಿನ ಮೇಘಾ ಸಿ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿದ್ದಾರೆ.ಹುಬ್ಬಳ್ಳಿಯ ಎಸ್‌.ಜೆ.ಎಮ್ ವಿ ಪದವಿ ಕಾಲೇಜಿನ ಗಂಗವ್ವಾ ಹೆಚ್‌. ಜೋಗ್ಯಾವ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾಳೆ. 

ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಅಂಬಿಕಾ. ವಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.ಶಿರಸಿಯ ಎಮ್‌.ಇ.ಎಸ್ ಪದವಿ ಕಾಲೇಜಿನ ನವ್ಯಾ ಭಟ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾಳೆ.ಕರ್ನಾಟಕ ಆರ್ಟ್ಸ ಕಾಲೇಜಿನ ಗುಣವರ್ಧಿನಿ ತೃತಿಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾಳೆ.1500ಮೀಟರ್ ಮಹಿಳೆಯರ ಓಟದ ವಿಭಾಗಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರೀಯಾಂಕಾ ಓಲೆಕಾರ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಚನಶ್ರೀ ಮಡಿವಾಳರ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾಳೆ.ಮಣಕಿಯ ಸರಕಾರಿ ಪದವಿ ಕಾಲೇಜಿನ ಅನುಷಾ ನಾಯಕ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾಳೆ 

200 ಮೀಟರ್ ಮಹಿಳೆಯರ ಓಟದ ವಿಭಾಗಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರಿನ್ಸಿತಾ ಸಿದ್ಧಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಪಡೆದಿದ್ದಾಳೆ.ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಫಿರೋಜಾ ಅಂಗಡಿಕರ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದಿರುತ್ತಾಳೆ.ಧಾರವಾಡದ ಸರಕಾರಿ ಪದವಿ ಕಾಲೇಜಿನ ಶ್ರೀದೇವಿ. ಪಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿರುತ್ತಾಳೆ