ಹೈದರಾಬಾದ್, ಏ 30 ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 45 ರನ್ ಗಳಿಂದ ಮಣಿಸಿದ ಸನ್ ರೈಸಸರ್್ ಹೈದರಾಬಾದ್ ತಂಡ ಗೆಲುವು ಸಾಧಿಸುವಲ್ಲಿ ಸಂಘಟಿತ ಆಟದ ಪ್ರದರ್ಶನವೇ ಕಾರಣ ಎಂದು ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯ ಪಟ್ಟಿದ್ದಾರೆ. 'ಲೀಗ್ ನಲ್ಲಿ ಎರಡು ಅಂಕಗಳಿಗೆ ಕಾದಾಟ ನಡೆಸುತ್ತೇವೆ. ಈ ಪಂದ್ಯ ನಿಣರ್ಾಯಕವಾಗಿತ್ತು. ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆವು. ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್ ಸ್ಟೋ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ' ಎಂದು ಕೇನ್ ತಿಳಿಸಿದ್ದಾರೆ. ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿರುತ್ತೇವೆ. ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು ಪ್ಲೇ ಆಫ್ ಪ್ರವೇಶಿಸಲು, ಗೆಲುವು ಅನಿವಾರ್ಯ. ಕಿಂಗ್ಸ್ ವಿರುದ್ಧದ ಗೆಲುವು, ಆಟಗಾರರಲ್ಲಿ ವಿಶ್ವಾಸ ಮೂಡಿಸಿದೆ. ನಮ್ಮ ತಂಡದ ಕ್ಷೇತ್ರ ರಕ್ಷಣೆ ಉತ್ತಮವಾಗಿದೆ. ಮುಂದಿನ ಪಂದ್ಯಗಳಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದರು. ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ಹೈದರಾಬಾದ್ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸಲು ಎಸ್ಆರ್ ಎಚ್ ತಂಡಕ್ಕೆ ಮುಂದಿನ ಎರಡೂ ಪಂದ್ಯ ಗೆಲ್ಲಬೇಕಿದೆ. ಕೋಲ್ಕತಾ ಹಾಗೂ ರಾಜಸ್ಥಾನ ತಂಡಗಳು ಸಹ ಮುಂದಿನ ಸುತ್ತಿನ ಮೇಲೆ ಕಣ್ಣು ನೆಟ್ಟಿವೆ.