ಲೋಕದರ್ಶನವರದಿ
ಧಾರವಾಡ04: ಅರಣ್ಯ ಸಂರಕ್ಷಣೆ ಎನ್ನುವುದು ಅಧಿಕಾರಿಗಳ ಹೊಣೆ ಆಗದೇ ಸಾರ್ವಜನಿಕರ ಹೊಣೆ ಆಗಬೇಕು. ಸಧ್ಯ ವಿವಿಧೆಡೆ ಕಾಡ್ಗಿಚ್ಚಿನಿಂದ ಅರಣ್ಯ ಸಂಪತ್ತು ಹಾಗೂ ವನ್ಯ ಜೀವಿಗಳು ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಆಗಬೇಕು
ಎಂದು ಹಳಿಯಾಳ ರಸ್ತೆಯ ಟಿ.ರಾಮಚಂದ್ರ ನಗರದಲ್ಲಿ ಅರಣ್ಯ ಇಲಾಖೆವತಿಯಿಂದ ವನ್ಯಜೀವಿ ಸಂರಕ್ಷಣಾ ಸಪ್ತಾಹವನ್ನು ಪ್ರತಿಜ್ಞಾ ವಿಧಿ ಬೋಧಿಸಿ ಧಾರವಾಡ ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ಮರಿತಮ್ಮಣ್ಣವರ ಉದ್ಘಾಟಿಸಿದರು.
ಅತಿಥಿಯಾದ್ದ ಉತ್ತರ ಕನರ್ಾಟಕ ಅಭಿವೃದ್ಧಿ ವೇದಿಕೆ ಸಂಚಾಲಕ ಆನಂದ ಜಾಧವ ಮಾತನಾಡಿ, ಅರಣ್ಯ ಸಂಪತ್ತು ಉಳಿದರೆ ಮಾತ್ರ ನಾವೆಲ್ಲ ಉಳಿಯಲು ಸಾಧ್ಯ, ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಹಾಳುಗುತ್ತಿದ್ದು, ಇದು ವನ್ಯ ಜೀವಿ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಈ ದಿಸೆಯಲ್ಲಿ ಅರಣ್ಯ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಹಾಯಕ ವಲಯ ಅರಣ್ಯ ಅಧಿಕಾರಿ ಜೆ.ಎಂ.ಕಾಂಬ್ಳೆ, ರೈತರಾದ ಬಾಬು ಜಗತಾಪ, ಯಲ್ಲಪ್ಪ ಚವ್ಹಾಣ, ಸಿಬ್ಬಂದಿಗಳಾದ ಪ್ರದೀಪ ಗಾವಡೆ, ವಿನಾಯಕ ಮೆಹರವಾಡೆ, ಸಂಗಣ್ಣ ಬಿರಾದಾರ ಮುಂತಾದವರು ಇದ್ದರು.