ಲೀಡ್ಸ್ 19: ಭಾರತೀಯ ಆಟಗಾರರು ಏಕದಿನ ಸರಣಿ ಮುಗಿಸಿ ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ಧವನ್ ಜಾಲಿಯಾಗಿ ಶಾಪಿಂಗ್ ಮಾಡಿದ್ದಾರೆ. ಜೊತೆಯಲ್ಲಿ ಶಾಪಿಂಗ್ನಲ್ಲಿ ಜೊತೆಯಾದ ಇನ್ನೊಬ್ಬ ಆಟಗಾರನನ್ನು ಅಪರಿಚಿತ ಎಂದು ಹೇಳಿಕೊಂಡಿದ್ದಾರೆ.
ಹೌದು, ಶಿಖರ್ ಧವನ್ ಟ್ವಿಟರ್ನಲ್ಲಿ ತಮ್ಮ ಫ್ಯಾಮಿಲಿ ಹಾಗೂ ವಿರಾಟ್ ದಂಪತಿ ಜೊತೆಗಿನ ಗ್ರೂಪ್ ಫೋಟೋ ಪೋಸ್ಟ್ ಮಾಡಿ, "ಇಂಗ್ಲೆಂಡ್ ಬೀದಿಯಲ್ಲಿ ಈ ಇಬ್ಬರು ಅಪರಿಚಿತರೊಂದಿಗೆ ಸುತ್ತಾಡಿದೆ" ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.