ಶಶಿಧರ ಶಿರಸಂಗಿ
ಶಿರಹಟ್ಟಿ 20: ತುಂಗಭದ್ರಾ ನದಿಯ ತಟದಲ್ಲಿರುವ ತಾಲೂಕಿನ ಹೊಳೆಇಟಗಿ ಗ್ರಾಮಕ್ಕು ಹಾಗೂ ಬಳ್ಳಾರಿ ಜಿಲ್ಲೆಯ ಬ್ಯಾಲಹುಣಸಿ ಗ್ರಾಮಕ್ಕು ಸರಕಾರ ತುಂಗಭದ್ರಾ ನದಿಗೆ ಕೇವಲ 600 ಮೀಟರ್ ಸೇತುವೆ ನಿರ್ಮಿಸಿಸುವದರಿಂದ ಕೇವಲ ಕೆಲವೇ ಕೇಲವು ಕೀಲೊ ಮೀಟರ್ ಅಂತರದಲ್ಲಿ ನಾಲ್ಕು ಜಿಲ್ಲೆಗಳನ್ನು ಹಾಗೂ ನೂರಾರು ಕಿಲೋಮೀಟರ್ ಉಳಿತಾಯ ಸೇರಿಸಿದಂತಾಗುತ್ತದೆ.
ಹೌದು ಇದೊಂದು ಸೇತುವೆ ನಿರ್ಮಾಣವಾಗುವದರಿಂದ ಗದಗ ಜಿಲ್ಲಾ ಕೇಂದ್ರದಿಂದ ಡಾವಣಗೇರಿ ತಲುಪಲು ಸುಮಾರು 35-40 ಕೀಮಿ ನಷ್ಟು ದೂರ ಕಡಿಮೆಯಾಗಲಿದೆ. ಅಲ್ಲದೆ ಶಿರಹಟ್ಟಿ ಹಾಗೂ ಸುತ್ತಮುತ್ತಲಿನ ಪಟ್ಟಣಗಳಿಗೆ ಡಾವಣಗೇರಿ ಜಿಲ್ಲೆಯ ಜೊತೆಗೆ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಯೂ ಸುಮಾರು 40 ಕೀಮಿ ಕಡಿಮೆಯಾಗಲಿದೆ. ಅಲ್ಲದೆ ನದಿಯ ಆ ಭಾಗದಲ್ಲಿ ಮೈಲಾರಲಿಂಗೇಶ್ವರ ಸಕ್ಕರೆ ಕಾರ್ಖಾನೆಯಿದ್ದು ಈ ಸೇತುವೆ ನಿರ್ಮಾಣದಿಂದ ಇಲ್ಲಿ ಕಬ್ಬು ಬೆಳೆಯುವ ರೈತರಿಗೂ ಹೆಚ್ಚು ಅನಕೂಲವಾಗಲಿದೆ.
ಕಳೆದ ಒಂದು ವರ್ಷಗಳ ಹಿಂದೆ ಈಗಿನ ಸಂಸದರಾದ ಶಿವಕುಮಾರ ಉದಾಸಿ ಅವರೇ ಕೇಂದ್ರ ಸರಕಾರದ ಅನುದಾನದಲ್ಲಿ ಸುಮಾರು 48 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿಮರ್ಿಸಲು ಮಂಜೂರಿ ಪಡೆದಿದ್ದರು. ಇದು ಈ ಭಾಗದ ಜನರಿಗೆ ಸ್ವರ್ಗಕ್ಕೆ ಎರಡೇ ಗೇಣು ಎಂಬಂತಾಗಿತ್ತು. ಆದರೆ ಮುಂದೆ ಏನಾಯಿತೊ ತಿಳಿಯದೆ ಸೇತುವೆ ಕಾರ್ಯ ಆರಂಭಕ್ಕೆ ಮುನ್ನವೆ ಸ್ಥಗಿತಗೊಂಡಿತು. ಇದು ಇದು ನದಿ ದಂಡೆಯ ಜನರಿಗೆ ಬೇಸರವನ್ನು ತಂದಿತ್ತು.
ಒಂದು ಮೂಲದ ಪ್ರಕಾರ ಮೊದಲು ಪಿಡಬ್ಲೂಡಿ ಇಲಾಖೆಯವರು ತಯಾರಿಸಿದ ಪ್ಲಾನ್ ಅನುಸಾರ 48 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಕೇಂದ್ರ ಸರಕಾರದಿಂದ ಮಂಜೂರಿ ಪಡೆಯಲಾಗಿತ್ತು ಎನ್ನಲಾಗಿದೆ. ಆದರೆ ಮುಂದೆ ಅಲ್ಲಿ ರಾಷ್ಟ್ರಿಯ ಹೆದ್ದಾರಿಯವರು ಒಂದು ಹೊಸ ಪ್ಲಾನ್ ತಯಾರಿಸಿ ಬೃಹತ್ತಾದ ಸೇತುವೆ ಹಾಗೂ ಅಕ್ಕಪಕ್ಕದ ಜಮೀನು ಕಳೆದುಕೊಂಡವರಿಗೆ ಪರಿಹಾರ ಎಲ್ಲವು ಸೇರಿ ಸೇತುವೆ ಸೇತುವೆ ನಿರ್ಮಾಣಕ್ಕೆ ಸುಮಾರು 95 ಕೋಟಿಗಿಂತಲು ಅಧಿಕ ವೆಚ್ಚದಾಗಿದ್ದು ಈ ಪ್ರಮಾಣದ ಮೊತ್ತಕ್ಕೆ ಮಂಜುರಿ ಪಡೆಯುವಲ್ಲಿ ವಿಳಂಬವಾದ ಕಾರಣ ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು ಎಂದು ಕೇಳಿ ಬರುತ್ತಿದೆ. ಅಷ್ಠರಲ್ಲಿ ಲೋಕಸಭಾ ಚುನಾವಣೆ ಆಗಮಿಸಿದ್ದು ಒಂದು ಕಾರಣವಾಗಿದ್ದರು ಆಗಿರಬಹುದು. ಆದರೆ ಈಗ ಮತ್ತೆ ಮೂರನೆ ಬಾರಿಗೆ ಶಿವಕುಮಾರ ಉದಾಸಿ ಅವರು ಸಂಸದರಾಗಿ ಆಯ್ಕೆಯಾಗಿದ್ದಲ್ಲದೆ ಕೇಂದ್ರದಲ್ಲಿ ಇವರದೆ ಪಕ್ಷ ಅಧಿಕಾರದಲ್ಲಿ ಇರುವದರಿಂದ ಈ ಬಾರಿಯಾದರು ಸೇತುವೆ ನಿರ್ಮಾಣಕ್ಕೆ ಅನುಮೋದನೆ ಪಡೆದು ಈ ಭಾಗದ ಜನರ ಬಹುದಿನದ ಕನಸು ನನಸಾಗುವಂತೆ ಮಾಡುವರೆ ಎಂದು ಕಾದು ನೋಡತ್ತಿದ್ದಾರೆ.