ಶೇಡಬಾಳ 06: ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಕರ್ತರು ಮಹತ್ವದ ಪಾತ್ರ ವಹಿಸಿದ್ದರು. ಆಡಳಿತ ಸಕರ್ಾರ ತಪ್ಪು ದಾರಿಯಲ್ಲಿ ಸಾಗಿದಾಗ ಅದನ್ನು ತಿದ್ದಿ ತೀಡಿ ಆಡಳಿತ ಯಂತ್ರವನ್ನು ಸರಿ ದಾರಿಗೆ ತರುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ರವಿವಾರ ದಿ. 6 ರಂದು ಸಮೀಪದ ಉಗಾರ ಖುರ್ದ ಪಟ್ಟಣದ ಉಗಾರ ಸಕ್ಕರೆ ಕಾಖರ್ಾನೆಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಭಾರತದ ಸಂವಿಧಾನದಲ್ಲಿ ಕಾಯರ್ಾಂಗ, ನ್ಯಾಯಾಂಗ, ಶಾಸಕಾಂಗ ಯಾವ ರೀತಿ ಮಹತ್ವದ ಪಾತ್ರ ನಿರ್ವಹಿಸುತ್ತಿವೆಯೋ ಅದೇ ರೀತಿ 4 ನೇ ಅಂಗವಾದ ಪತ್ರಿಕಾ ರಂಗವು ಮಹತ್ವದ ಪಾತ್ರವನ್ನು ಹೊಂದಿದೆ ಎಂದು ಹೇಳಿದ ಅವರು ಪತ್ರಕರ್ತರು ಪತ್ರಿಕಾ ಧರ್ಮವನ್ನು ಪಾಲಿಸುತ್ತಾ ಪ್ರಾಮಾಣಿಕತೆಯಿಂದ ವಸ್ತು ನಿಷ್ಠ ವರದಿಗಳನ್ನು ಮಾಡಿದಾಗ ಪತ್ರಿಕೆಗಳಿಗೆ ಹಾಗೂ ಪತ್ರಕರ್ತರಿಗೂ ಬೆಲೆ ಬರುತ್ತದೆ ಎಂದು ಹೇಳಿದರು. ಪತ್ರಕರ್ತರು ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಹೋಗುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಗಾರ ಸಕ್ಕರೆ ಕಾಖರ್ಾನೆಯ ಅಧಿಕಾರಿ ರಾಜು ಬೆಳ್ಳಂಕಿ, ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಜಯೇಂದ್ರ ಶೆಟ್ಟಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಗವಾಡ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಭಾಕರ ಗೋಂಧಳಿ ವಹಿಸಿದ್ದರು. ಪತ್ರಿಕಾ ದಿನಾಚರಣೆಯನ್ನುದ್ದೇಶಿಸಿ ಲಕ್ಷ್ಮಣ ಸೂರ್ಯವಂಶಿ, ಕುಮಾರ ಪಾಟೀಲ, ಸುಕುಮಾರ ಬನ್ನೂರೆ, ರಾಜು ತಾರದಾಳೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾಗವಾಡ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಭಾಕರ ಗೋಂಧಳಿ, ಉಪಾಧ್ಯಕ್ಷ ಕುಮಾರ ಪಾಟೀಲ, ರಾಜು ಇಂಗಳಗಾಂವೆ, ರಂಗನಾಥ ದೇಶಿಂಗಕರ, ಸಿದ್ಧಯ್ಯ ಹಿರೇಮಠ, ಸುಕುಮಾರ ಬನ್ನೂರೆ, ಲಕ್ಷ್ಮಣ ಸೂರ್ಯವಂಶಿ, ಸಚೀನ ಮಾನೆ, ಸಂಜಯ ಕಾಟಕರ, ಶಿವಾಜಿ ಪಾಟೀಲ, ಸುರೇಶ ಕಾಗಲಿ, ಬಾಪು ಪಾಟೀಲ, ಸಂದೀಪ ಪರಾಂಜಪೆ, ರಾಜು ತಾರದಾಳೆ, ಶೀತಲ ಕುಂಬಾರ ಸೇರಿದಂತೆ ಅನೇಕ ಪತ್ರಕರ್ತರು ಇದ್ದರು.