ಅನೈತಿಕ ಚಟುವಟಿಕೆಗಳ ತಾಣವಾದ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಯಾವಾಗ?

ಶಶಿಧರ ಶಿರಸಂಗಿ

ಶಿರಹಟ್ಟಿ 25: ದೊಡ್ಡ ದೊಡ್ಡ ಹೋಟೆಲ್ಗಳು, ಮಧ್ಯಮ ರೀತಿಯ ಹೋಟೆಲ್ಗಳಿಗೆ ಹೋಗಿ ಅಲ್ಪ ಹಣದಲ್ಲಿ ಬಡವರು ತಮಗಾದ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಿಲ್ಲದ ಬಡವರಿಗೆ, ಶಾಲಾ ಮಕ್ಕಳಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗಬೇಕೆಂಬ ಮಹಾತ್ವಾ ಕಾಂಕ್ಷಿ ಯೋಜನೆಯನ್ನು ಹೊತ್ತ ಕಾಂಗ್ರೆಸ್ ಸಕರ್ಾರದ ಕನಸು ನನಸಾಗಬೇಕೆಂದು ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಹುಟ್ಟು ಹಾಕಿ ಎಲ್ಲರಿಗೂ ಕಡಿಮೆ ದರದಲ್ಲಿ ಹೊಟ್ಟೆತುಂಬ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ರಾಜ್ಯ ಸಕರ್ಾರದಿಂದ ಸಾಕಾರಗೊಳಿಸುತ್ತಿದೆ.

ತಾಲೂಕಾ ಕೇಂದ್ರವಾದ ಶಿರಹಟ್ಟಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿ ಬೆಳ್ಳಟ್ಟಿ ರಸ್ತೆಯ ಎಪಿಎಂಸಿ ಆವರಣದಲ್ಲಿ ಪೂರ್ಣಗೊಂಡು 5-6 ತಿಂಗಳ ಹಿಂದೆಯೇ ಆಗಿದ್ದರೂ ಸಹ ಅದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳ ನಿರ್ಲಕ್ಷ್ಯತನದಿಂದ ಲೋಕಾರ್ಪಣೆ ಭಾಗ್ಯ ಇನ್ನೂ ಕಾಣದಂತಾಗಿದೆ. 

ಈಗಾಗಲೇ ತಾಲೂಕಾ ಕೇಂದ್ರಕ್ಕೆ ಬರಬೇಕಾದ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾಗಿ ಬಸ್ ಡಿಪೊ, ನ್ಯಾಯಾಲಯಗಳು ಈಗಾಗಲೇ ಮಂಜೂರಾತಿ ದೊರೆತು ನ್ಯಾಯಾಲಯ ಪ್ರಾರಂಭಗೊಂಡಿದ್ದು ಖುಷಿ ತಂದಿದೆ. ಬಸ್ ಡಿಪೋ ಕಾಮಗಾರಿಗೆ ಹೆಚ್ಚಿನ ಅನುದಾನ ಮಂಜೂರಾತಿಯೂ ದೊರೆತದ್ದು ಆದಷ್ಟು ಬೇಗನೇ ಡಿಪೋ ಸ್ಥಾಪನೆಯ ಕನಸು ನನಸಾಗಲಿದೆ.

ಆದರೆ ಇನ್ನೂ 100 ಹಾಸಿಗೆ ಆಸ್ಪತ್ರೆ, ಕೃಷಿ ಮಾರುಕಟ್ಟೆ ಕೇಂದ್ರ, ಬೀಜ ಸಂಸ್ಕರಣ ಕೇಂದ್ರ ಸೇರಿದಂತೆ ಹತ್ತಾರು ಸಮಸ್ಯೆಗಳ ಸರಮಾಲೆಗಳಿವೆ. ಈ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲಿ ಸೂಕ್ತವಾದ ಪರಿಹಾರವನ್ನು ಒದಗಿಸಬಲ್ಲರಾ ಈ ಕ್ಷೇತ್ರಕ್ಕೆ ಸಂಭಂಧಿಸಿದ ಜನಪ್ರತಿನಿಧಿಗಳು ಹಾಗೂ ಮೂಖಂಡರುಗಳು ಅಂತಾ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ