ಲೋಕದರ್ಶನ ವರದಿ
ಬೆಳಗಾವಿ, 3: ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಮತ್ತು ತಾಳ್ಮೆ ಅತಿ ಮುಖ್ಯವಾಗಿ ಇರಬೇಕಾದ ಗುಣಗಳು. ಅದರಲ್ಲಿಯು ತಾಳ್ಮೆ ಬಹಳ ಮುಖ್ಯ. ಅದರಿಂದಲೇ ಯಶಸ್ಸಿನ ಮೆಟ್ಟಿಲು ಏರಲು ಸಾದ್ಯ "ಎಂದು ನಿವೃತ್ತ ಉಪನ್ಯಾಸ ಹಾಗೂ ಯಕ್ಷಗಾನ ತಾಳಮದ್ದಳೆ ಅರ್ಥ ಗಾರರಾದ ಎಂ ಎನ್ ಹೆಗಡೆ ಹೇಳಿದರು. ಅವರು ಸ್ಥಳೀಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಕಾಲೇಜು ಬೆಳಗಾವಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಗಳ ಸ್ವಾಗತ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಎಂ ವಿ ಭಟ್ಟ ಮಾತನಾಡಿ, "ಅತ್ಯಂತ ಕಠಿಣ ಪರಿಸ್ತಿತಿಯಲ್ಲಿ ಏಳು ವರ್ಷಗಳ ಯಶಸ್ವಿ ಹೆಜ್ಜೆ ಇಟ್ಟದ್ದೇವೆ. ಈಗೀನ ಮತ್ತು ಮುಂದಿನ ಯಶಸ್ಸಿಗೆ ನಮ್ಮ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿಗಳು ಕಾರಣ" ಸಿಬ್ಬಂದಿಗಳ ಪರಿಶ್ರಮದಿಂದ ದ್ವತಿಯ ಪಿಯುಸಿ ಸಿಇಟಿ ಪರಿಕ್ಷೆಯಲ್ಲಿ 141ನೇ ಹಾಗೂ ಸಾವಿರದ ಒಳಗಿನ ರ್ಯಾಂಕ ಪಡೆಯಲು ಸಹಾಯವಾಯಿತು" ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಮೋಹನ ಎಚ್ ಕೆ ಮಾತನಾಡಿ "ವಿದ್ಯಾಥರ್ಿಗಳ ಯಶಸ್ಸಿಗೆ ಕೇವಲ ಕಾಲೇಜು ಮತ್ತು ಸಿಬ್ಬಂದಿ ಮಾತ್ರ ಕಾರಣರಲ್ಲ, ಪಾಲಕರೂ ಜವಾಬ್ದಾರರಾಗಿರುತ್ತಾರೆ," ಎಂದರು.
ವಿದ್ಯಾರ್ಥಿ ನಿ ಶ್ರಾವಣಿ ಇಳಕಲ್ ಅವಳ ಭರತನಾಟ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಆನಂದ ಖೋತ್ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಕಲ್ಲೋಳ್ಳಿ ಸ್ವಾಗತಿಸಿದರು.ಸನ್ಯಾಲ್ ಕಾಮತ್ ಮತ್ತು ಡಾ.ಶ್ರೀನಿವಾಸ ಜಾದವ ಪರಿಚಯಿಸಿದರು. ಅಬೀದ ಅಲಿ ಮತ್ತು ಪ್ರಸನ್ನ ಹೆಗಡೆ ವಾರ್ಷಿ ಕ ಚಟುವಟಿಕೆ ಮತ್ತು ಸಾಧನೆಯ ಕುರಿತು ಮಾತನಾಡಿದರು. ರಾಜು ಭಟ್ಟ ಮತ್ತು ಅಭಿಷೇಕ ಕುಂಬಾರ ನಿರ್ವಹಿಸಿದರು. ಸುನೀಲ ವೈಕುಂಠೆ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.