ನವದೆಹಲಿ 14, ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ದಿನದಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳ ನಡುವೆ ಸಮರ ನಡೆಯುತ್ತಲೇಇದೆ.ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿಕ್ರಿಕೆಟಿಗ ಶಾಹಿದ್ಅಫ್ರಿದಿ ಪಾಕ್ ಸಕರ್ಾರವನ್ನುಕೆಣಕಿದ್ದಾರೆ.
ಕಾಶ್ಮೀರಕ್ಕಾಗಿ ಪಾಕಿಸ್ತಾನ ಇಟ್ಟಿರುವ ಬೇಡಿಕೆಯಿಂದ ಹಿಂದೆ ಸರಿಯಬೇಕು, ಇರುವ ನಾಲ್ಕು ಪ್ರಾಂತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವತ್ತ ಸಕರ್ಾರ ಗಮನ ಹರಿಸಬೇಕುಎಂದುಅಫ್ರಿದಿ ಹೇಳಿದ್ದಾರೆ.ಪಾಕಿಸ್ತಾನಕ್ಕೆ ಕಿವಿಮಾತು ಹೇಳುವ ಮೂಲಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ನಮ್ಮ ಪಾಕ್ ಸಕರ್ಾರಕ್ಕೆ ಸ್ವದೇಶವನ್ನೇ ನಿಯಂತ್ರಿಸುವಷ್ಟು ಶಕ್ತಿಯಿಲ್ಲ. ಈ ವೇಳೆ ಭಾರತದ ವಶದಲ್ಲಿರುವ ಜಮ್ಮು-ಕಾಶ್ಮೀರ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ.ಇದುಅಸಮಂಜಸ ನಡೆಯಾಗಿದ್ದು, ಕೂಡಲೇ ಈ ಬೇಡಿಕೆಯನ್ನುಕೈಬಿಡಬೇಕೆಂದು ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮದೇಶದ ವಿರುದ್ಧವೇ
ಪಾಕಿಸ್ತಾನಕ್ಕೆ ಜಮ್ಮು-ಕಾಶ್ಮೀರ ಬೇಕಿಲ್ಲ. ನಮ್ಮದೇಶದ ನಾಲ್ಕು ಪ್ರಾಂತ್ಯಗಳನ್ನೇ ನಿಯಂತ್ರಿಸಲು ಪಾಕ್ ಸಕರ್ಾರಕ್ಕೆಆಗುತ್ತಿಲ್ಲ. ಈ ಸಂದರ್ಭದಲ್ಲಿ ಮತ್ತೊಂದು ಪ್ರದೇಶವನ್ನುತೆಗೆದುಕೊಂಡು ಹೇಗೆ ಆಡಳಿತ ನಡೆಸಲು ಸಾಧ್ಯಎಂದು ಶಾಹಿದಿ ಅಫ್ರಿದಿ ಪ್ರಶ್ನಿಸಿದ್ದಾರೆ.
ಅಲ್ಲದೇ ಇಮ್ರಾನ್ ಖಾನ್ ನೇತೃತ್ವದ ಸಕರ್ಾರ ನಮ್ಮ ದೇಶವನ್ನು ಮೂಲಭೂತವಾದಿಗಳಿಂದ ಕಾಪಾಡುವಲ್ಲಿ ಎಡವಿದೆ.ದೇಶದಏಕತೆಯನ್ನುತೋರುವಲ್ಲಿ ವಿಫಲವಾಗಿದೆ. ಜಮ್ಮು-ಕಾಶ್ಮೀರವನ್ನು ಪ್ರತ್ಯೇಕ ದೇಶವಾಗಿ ಘೋಷಿಸಬೇಕು. ಪಾಕಿಸ್ತಾನ ಮತ್ತು ಭಾರತಎರಡು ದೇಶಗಳಿಗೆ ನೀಡಬಾರದು. ಜಮ್ಮು-ಕಾಶ್ಮೀರದಲ್ಲಿ ಪ್ರತಿನಿತ್ಯ ಈ ವಿಚಾರಕ್ಕೆ ಸಾಮಾನ್ಯಜನ ಸಾಯುತ್ತಿದ್ದಾರೆಎಂದು ಮಾಜಿಕ್ರಿಕೆಟಿಗತಮ್ಮ ನೋವನ್ನುತೋಡಿಕೊಂಡರು.
ಜಮ್ಮು-ಕಾಶ್ಮೀರಜನತೆಯನ್ನು ಬದುಕಲು ಬಿಡಬೇಕು. ಅವರು ನಮ್ಮ ಹಾಗೆಯೇ ಮನುಷ್ಯರು, ಹೀಗಾಗಿ ಮನುಷ್ಯತ್ವತೋರುವುದು ನಮ್ಮಕರ್ತವ್ಯ.ಭಾರತಕ್ಕಾಗಲೀ, ಪಾಕಿಸ್ತಾನಕ್ಕಾಗಲೀ ಜಮ್ಮು-ಕಾಶ್ಮೀರವನ್ನು ಸೇರ್ಪಡೆ ಮಾಡುವುದು ಬೇಡ.ನಾವು ಜಮ್ಮು-ಕಾಶ್ಮೀರವನ್ನು ಪ್ರತ್ಯೇಕದೇಶವಾಗಿ ಘೋಷಿಸದಿದ್ದರೆ, ಜನ ಪ್ರತಿನಿತ್ಯ ಸಾವು - ಬದುಕಿನ ನಡುವೆಜೀವನ ಸಾಗಿಸಬೇಕಾದ ಸ್ಥಿತಿ ಮುಂದುವರೆಯುತ್ತದೆಎಂದು ಹೇಳಿಕೆ ನೀಡಿದ್ದಾರೆ.ಈ ರೀತಿಯ ಹೇಳಿಕೆಗಳನ್ನು ಅಫ್ರಿದಿ ಈ ಹಿಂದೆಯೂ ನೀಡಿದ್ದರು.