ಎಕ್ಸ್ ಬಾಂಡ್ ಡಾಪ್ಲರ್ ರೈತರ ರಾಡಾರ್ ಯೋಜನೆಗೆ ಸ್ವಾಗತ
ಶಿಗ್ಗಾವಿ 09: ರೈತರ ಬೆಳೆಹಾನಿ, ಬೆಳೆ ನಷ್ಟದಿಂದ ಪಾರುಮಾಡುವದರ ಜೊತೆಗೆ ಕೃಷಿ ಚಟುವಟಿಕೆಗಳ ಪೂರ್ವ ಸಿದ್ದತೆಗೆ ಸಹಾಯ ಮಾಡುವ ರಾಡಾರ್ ಮಹತ್ವದ ಯೋಜನೆ ನಮ್ಮ ಕ್ಷೇತ್ರಕ್ಕೆ ಸ್ಥಾಪನೆ ಗೊಳ್ಳಲು ಕಾರಣಿಕರ್ತರಾದ ಪ್ರಧಾನಿ ನರೇಂದ್ರ ಮೋದೀಜೀ, ಡಾ.ಜಿತೇಂದ್ರ ಸಿಂಗ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಜನತೆಯ ಪರವಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಭಾಜಪ ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ ಸಲ್ಲಿಸಿದರು.
ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕ ರೈತರ ಹಿತದೃಷ್ಟಿಯಿಂದ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಎಕ್ಸ್ ಬಾಂಡ್ ಡಾಪ್ಲರ್ ರಾಡಾರ್ ಎಂದರೆ ಸುಮಾರು 150 ರಿಂದ 175 ಕಿಲೋ ಮೀಟರ್ ಸುತ್ತ ಮುತ್ತಲಿನ ಪ್ರದೇಶದ ನಿಖರವಾದ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರಿತ್ತದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡುವುದರ ಜೊತೆಗೆ ಕೃಷಿ ಚಟುವಟಿಕೆಗಳ ಪೂರ್ವ ಸಿದ್ದತೆಗೆ ಸಹಾಯ ಮಾಡುವ ಮಹತ್ವದ ಯೋಜನೆ ಇದಾಗಿದೆ ಎಂದರು.