ನಮ್ಮನ್ನು ನಾವು ಅರಿತುಕೊಡು ಸಮಾನತೆಯಿಂದ ಜೀವಿಸಬೇಕು: ಪ್ರೊ. ಕೆ.ವಿ.ಪ್ರಸಾದ್‌

ರಾಷ್ಟ್ರೀಯ ಸಂವಿಧಾನ ದಿನಾಚರಣೆ

ನಮ್ಮನ್ನು ನಾವು ಅರಿತುಕೊಡು ಸಮಾನತೆಯಿಂದ ಜೀವಿಸಬೇಕು: ಪ್ರೊ. ಕೆ.ವಿ.ಪ್ರಸಾದ್‌

ಕೊಪ್ಪಳ 27: ನಮ್ಮನು ನಾವು ಅರಿತುಕೊಡು, ಸಮಾನತೆಯಿಂದ ಜೀವಿಸಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ವಿ.ಪ್ರಸಾದ್ ಹೇಳಿದರು.ಅವರು ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆಯಲ್ಲಿ ಸಂವಿಧಾನ ಪೀಠಿಕೆಗೆ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.  

ಭಾರತ ಸಂವಿಧಾನವು ಎಲ್ಲರಿಗೂ ಸ್ವತಂತ್ರ ಸಮಾನತೆ ನೀಡಿದೆ. ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹಕ್ಕು ಹಾಗೂ ನಮ್ಮ ಸುತ್ತಮುತ್ತಲಿನ ಜನರಿಗೂ ಸಂವಿಧಾನದ ಅರಿವನ್ನು ಮೂಡಿಸಬೇಕು ಎಂದರು.ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರಕಾಶ ಯಳವಟ್ಟಿ ಮಾತನಾಡಿ, ಸಂವಿಧಾನದಲ್ಲಿರುವ ಆದರ್ಶಗಳನ್ನು ದಿನನಿತ್ಯ ಜೀವನದಲ್ಲಿ ಪಾಲಿಸಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಚಾಂದ್ ಬಾಷಾ ಮತ್ತು ಪ್ರವೀಣ ಪೊಲೀಸ್ ಪಾಟೀಲ, ಸಂತೋಷ ಕುಮಾರ, ಪಾರ್ವತಿ, ವಿರೂಪಾಕ್ಷ, ಪಾಪಣ್ಣ, ಅಯ್ಯಪ್ಪ,ಶ್ರೀಕಂತ್, ಸುಧಾಕರ್, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.