ಗ್ಯಾರಂಟಿ ಯಶಸ್ವಿ ಅನುಷ್ಠಾನದ ಮೂಲಕ ನುಡಿದಂತೆ ನಡೆದಿದ್ದೇವೆ : ಸಚಿವ ಮಂಕಾಳ ವೈದ್ಯ

ಗ್ಯಾರಂಟಿ ಯಶಸ್ವಿ ಅನುಷ್ಠಾನದ ಮೂಲಕ ನುಡಿದಂತೆ ನಡೆದಿದ್ದೇವೆ  : ಸಚಿವ ಮಂಕಾಳ ವೈದ್ಯ We have done as promised through the successful implementation of the guarantee: Minister Mankala V

ಕಾರವಾರ 11 : ಸಾಮಾನ್ಯ ಜನ ಸಂತೋಷವಾಗಿರುವುದೇ ಅಭಿವೃದ್ಧಿ  ಎಂದು ಸಚಿವ ಮಂಕಾಳ ವೈದ್ಯ ಪ್ರತಿಪಾದಿಸಿದರು. ಹೊನ್ನಾವರ ಗುಣವಂತೆಯ ಒಕ್ಕಲಿಗರ ಭವನದಲ್ಲಿ  ಬುಧುವಾರ ನಡೆದ ಗ್ಯಾರಂಟಿ ಉತ್ಸವ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು  ಮಾತನಾಡಿದರು .ನಮ್ಮ ಕಾಂಗ್ರೆಸ್ ಕಾರ್ಯಕರ್ತರು  ಗ್ಯಾರಂಟಿ ಕಾರ್ಡನ್ನು ಎಲೆಕ್ಷನ್ ಗಿಂತ ಮುಂಚೆ ಹಂಚಿದ್ದರು. ನೀವು 136 ಜನ ಶಾಸಕರನ್ನು ಗೆಲ್ಲಿಸಿದಿರಿ. ನಾವು ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಬಿಜೆಪಿ ಆರೋಪಗಳನ್ನು ನಾವು ಸುಳ್ಳು ಮಾಡಿದ್ದೇವೆ. ನಂಬಿಕೆ ಉಳಿಸಿಕೊಂಡಿದ್ದೇವೆ.

ನುಡಿದಂತೆ ನಡೆದಿದ್ದೇವೆ ಎಂದರು. ಪ್ರತಿ ವರ್ಷ 50 ಸಾವಿರ ಕೋಟಿ ರೂ.ಗ್ಯಾರಂಟಿ ಯೋಜನೆಗಳಿಗೆ ಕೊಡ್ತಾ ಇದಿವಿ. ಈ ಯೋಜನೆಗಳನ್ನು ನಿಲ್ಲಿಸಿವುದಿಲ್ಲ ಎಂದರು. ಸಾಮಾನ್ಯ ಜನ ಸಂತೋಷವಾಗಿರುವುದೇ ಅಭಿವೃದ್ಧಿ . ಜನ ಊಟ, ವಸತಿ , ಆರೋಗ್ಯ , ಶಿಕ್ಷಣ,  ವಿದ್ಯುತ್ ಸಾರಿಗೆ ವೆಚ್ಚ ತೆಗೆದು,  ಎಲ್ಲಾ ಖರ್ಚು ಮಾಡಿ, ಉಳಿತಾಯ ಮಾಡಿದರೆ ಅದು ಅಭಿವೃದ್ಧಿ ಎಂದು ಸಚಿವ ವೈದ್ಯ ಪ್ರತಿಪಾದಿಸಿದರು. ಮೋಹನ್ ರಾಜ್ ಗ್ಯಾರಂಟಿ ಯೋಜನೆಗಳ ಬಗ್ಗೆ ಉಪನ್ಯಾಸ ನೀಡುತ್ತಾ ಭಾರತದಲ್ಲಿ ಅತ್ಯಂತ ಯಶಸ್ವಿ ಯೋಜನೆಗಳಾಗಿ  ಜನರನ್ನು ತಲುಪಿವೆ ಎಂದರು. ಕರ್ನಾಟಕದಲ್ಲಿ1,10,000 ಲಕ್ಷ ಕೋಟಿ ರೂ. ಈತನಕ ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗಿದೆ. ಆರಂಭದಲ್ಲಿ ಗ್ಯಾರಂಟಿ ಬಗ್ಗೆ ಅಪಪ್ರಚಾರ ಹೆಚ್ಚಾಗಿತ್ತು. ರಾಜ್ಯ ದಿವಾಳಿಯಾಗುತ್ತೆ. ಅಭಿವೃದ್ಧಿ ಕೆಲಸಕ್ಕೆ ಹಣ ಇಲ್ಲ. ಜನ ಸೋಮಾರಿಯಾಗ್ತಾರೆ ಎಂಬ ಸುಳ್ಳನ್ನು ಹಬ್ಬಿಸಲಾಗಿತ್ತು. ಆದರೆ ವಾಸ್ತವವಾಗಿ ಜನರಿಗೆ ಈ ಯೋಜನೆಗಳಿಂದ ಉಪಯೋಗ ಆಗುತ್ತವೆ ಮಹಿಳೆಯರೇ ಹೇಳುತ್ತಿದ್ದಾರೆ. ಎಲ್ಲಾ ಯೋಜನೆಗಳು ಜಾರಿಯಾಗಿವೆ.

ರಾಜ್ಯ ದಿವಾಳಿ ಆಗಿಲ್ಲ ಎಂದು ಅಂಕಿಅಂಶಗಳ ಸಹಿತ ವಿವರಿಸಿದರು. ಕೆಲವರು ಮಾನವನ ಘನತೆಯನ್ನು ಕುಗ್ಗಿಸುವ ಆರೋಪಗಳಾಗಿವೆ. ಈ ಯೋಜನೆಗಳನ್ನು ಆರ್ಥಿಕ ತಜ್ಞರು ರೂಪಿಸಿದರು.  ಹಣವನ್ನು ಬಡವರಿಗೆ ಕೊಟ್ಟು ಅವರಿಗರ ಆರ್ಥಿಕ ಶಕ್ತಿ ತುಂಬಿದ ಸರ್ಕಾರ. ಇದು ಒಂದು ಮಾದರಿ ಸರ್ಕಾರ. ಮತ್ತೊಂದು ಸರ್ಕಾರ ಬಡವರ ಹಣ ಕಿತ್ತು ಶ್ರೀಮಂತರಿಗೆ ಕೊಡುವ ಸರ್ಕಾರ ಇದೆ.ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ , ಸಬಲೀಕರಣ ಮಾಡುವ ಉದ್ದೇಶ ದಿಂದ ಗ್ಯಾರಂಟಿ ಯೋಜನೆ ರೂಪಿಸಲಾಯಿತು. ಅದರ ಫಲವೇ ಗ್ಯಾರಂಟಿ. ನೇರ ಹಣ ಮಹಿಳೆಯರಿಗೆ ಕೊಡುವ ಕಾರಣ ಉತ್ತಮವಾಗಿ ಬಳಕೆಗೆ  ಸಹಾಯವಾಯಿತು.

ಅಭಿವೃದ್ಧಿ ಹೆಚ್ಚಿತು. ಸರ್ಕಾರದ ಹಲವು ವಿಭಾಗಗಳಲ್ಲಿ ಮಹಿಳೆ ಭಾಗವಹಿಸುವಿಕೆ ಹೆಚ್ಚಾಯಿತು. ತೆರಿಗೆ ಆದಾಯ ಹೆಚ್ಚಾತು. ಕೊಟ್ಟಹಣ ಖರೀದಿಸುವ ಶಕ್ತಿ ಹೆಚ್ಚಾತು.ಖರೀದಿಯಿಂದ ತೆರಿಗೆ ಮೂಲಕ ಹಣ ಮತ್ತೆ ಸರ್ಕಾರವನ್ನು ಸೇರಿತು ಹಾಗೂ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಾತು. ಹಾಗಾಗಿ ಅಭಿವೃದ್ಧಿಗೆ ಗ್ಯಾರಂಟಿ ಪೂರಕವಾಯಿತು ಎಂದರು .ಗ್ಯಾರಂಟಿ ಯೋಜನೆ ಅನುಷ್ಠಾನದ ರಾಜ್ಯಧ್ಯಕ್ಷ ಎಚ್‌.ಎಂ.ರೇವಣ್ಣ , ಉಪಾಧ್ಯಕ್ಷ ಎಸ್‌. ಆರ್‌. ಪಾಟೀಲ್, ಪುಷ್ಪಾ ಅಮರನಾಥ, ಸತೀಶ್ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ದೀಲೀಪ್ ಶಶಿ ,ಇತರರು ವೇದಿಕೆಯಲ್ಲಿದ್ದರು. 


Guarantee Utsav Mankala Vaidya (Minister) Workshop Congress Workers Guarantee Cards