ನಮ್ಮ ಉನ್ನತಿ ಮತ್ತು ಅವನತಿಗೆ ನಾವೇ ಕಾರಣ: ಗವಿಸಿದ್ದೇಶ್ವರ ಶ್ರೀ
We are responsible for our rise and fall: Gavisiddheshwara Sri
ಮಹಾಲಿಂಗಪುರ 26: ತಂದೆ-ಮಕ್ಕಳಿಗೆ, ಮಗ ತಾಯಿಗೆ, ಅಣ್ಣ ತಮ್ಮನಿಗೆ ಅಥವಾ ಗಂಡ ಹೆಂಡತಿಗೆ ಆಗುವನೆ, ಮೊಮ್ಮಕ್ಕಳು ಅಜ್ಜನಿಗೆ ಆಗುವರೆ ಹೀಗೆ ಯಾರು ಯಾರಿಗೆ ಆಗುತ್ತಾರೆ, ಈ ಜಗತ್ತಿನಲ್ಲಿ ಯಾರು ಯಾರಿಗೆ ಹಿತವರು ಎಂದು ಹೇಳಲಾಗದು ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಕೆ ಎಲ್ ಇ ಕಾಲೇಜ ಎದುರುಗಡೆ ಇರುವ ಮೈದಾನದಲ್ಲಿ ನಡೆಯುತ್ತಿರುವ ಅಧ್ಯಾತ್ಮ ಪ್ರವಚನದ ಐದನೆ ದಿನ ಸಂಜೆ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇಲ್ಲಿ ಯಾರು ಯಾರಿಗೂ ಶತ್ರುವಲ್ಲ, ಯಾರಿಗೆ ಯಾರು ಮಿತ್ರರಲ್ಲ, ಇಲ್ಲಿ ಯಾರಿಂದ ಯಾರ ಉನ್ನತಿ, ಯಾರಿಂದ ಯಾರ ಅವನತಿ ಎಂದು ಹೇಳಲಾಗದು, ನಿನ್ನ ಉನ್ನತಿ ನಿನ್ನಿಂದಲೆ ಮತ್ತು ನಿನ್ನ ಅವನತಿ ನಿನ್ನ ಕೈಯಲ್ಲಿದೆ, ಇಲ್ಲಿ ನಿಗನೆ ನೀನೆ ಶತ್ರು, ನಿನಗೆ ನೀನೆ ಮಿತ್ರ.ನಾವು ಬರುವಾಗ ಏಕಾಂಕಿಯಾಗಿ ಬಂದಿದ್ದೇವೆ ಹೋಗುವಾಗಲೂ ಏಕಾಂಗಿಯಾಗಿಯೇ ಹೋಗಬೇಕು.
ಮನುಷ್ಯ ಇರುವುದಕ್ಕಿಂತ ಜಾಸ್ತಿ ತೋರಿಸಬೇಕು ಎನ್ನುವುದಕ್ಕೆ ಅವನ ಅವನತಿಯಾಗುತ್ತಿದೆ. ಮನುಷ್ಯ ತನ್ನ ಸೋಲನ್ನು ಬೇರೆಯವರ ಮೇಲೆ ಹಾಕಿಬಿಡುತ್ತಾನೆ, ಮನುಷ್ಯ ಸಂತೋಷವಾಗಿರಬೇಕಾದರೆ 2 ಸೂತ್ರಗಳ ಇವೆ, 1) ದೇವರು ಕೊಟ್ಟದ್ದನ್ನು ಸರಿಯಾಗಿನೋಡಿಕೊಳ್ಳಬೇಕು, 2) ದೇವರು ಕೊಡದೆ ಇರುವುದರ ಕಡೆಗೆ ತಲೆ ಕಡೆಸಿಕೊಳ್ಳಬೇಡ ಇದನ್ನು ತಿಳಿದು ನಡೆದರೆ ನಿಮ್ಮ ಬದುಕು ಸಂತೋಷವಾಗಿರುವುದು. ಆತ್ಮವಿಸ್ವಾಸದಿಂದ ಮಾತ್ರ ಮನುಷ್ಯನ ಉನ್ನತಿ ಸಾಧ್ಯ. ಮನುಷ್ಯ ಹೇಗೆ ಬೇಳೆಯಬೇಕು ಎಂದರೆ ನಿಮ್ಮ ಶತ್ರುಗಳ ನಿನ್ನ ಬಗ್ಗೆ ಕೊಂಡಾಡಬೇಕು,
ನಿನ್ನಲ್ಲಿ ಒಳ್ಳೆಯ ಗುಣಗಳಿದ್ದರೆ ನೀನಗೆ ನೀನೆ ಮಿತ್ರ, ನಿನ್ನಲ್ಲಿ ಕೆಟ್ಟು ಗುಣಗಳಿದ್ದರೆ ನಿನಗೆ ನೀನೆ ಶತ್ರು.ಮನುಷ್ಯನಗೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ತಿಳಿಸುವುದು ಮನಸ್ಸು.ನಮ್ಮಲ್ಲಿರುವ ಇಂದ್ರಿಯಗಳು ನೀನು ವಿವೇಕದಿಂದ ಕೆಲಸ ಮಾಡಿದರೆ ನಿನಗೆ ಮಿತ್ರನಾಗುತ್ತವೆ, ನೀನು ಅವಿವೇಕದಿಂದ ಕೆಲಸ ಮಾಡಿದರೆ ಅವು ಶತ್ರುಗಳಾಗುತ್ತವೆ. ಹೀಗೆ ನಿನ್ನ ಉನ್ನತಿ ಮತ್ತು ಅವನತಿಗೆ ನೀನೆ ಕಾರಣ ಆದ್ದರಿಂದ ನಮ್ಮ ಜೀವನದ ಗೆಲುವು ಸೋಲುಗಳು ನಮ್ಮ ಕೈಯಲ್ಲಿವೆ, ವಿವೇಕದಿಂದ ಜೀವನ ನಡೆಸಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 