ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಒಕ್ಕೂಟ ಹಬ್ಬ ಕಾರ್ಯಕ್ರಮ

ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಒಕ್ಕೂಟ ಹಬ್ಬ ಕಾರ್ಯಕ್ರಮ  We are organizing a union festival program for you on behalf of the organization.

         ಬಳ್ಳಾರಿ 27:  ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಹಲಕುಂದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಕ್ಕೂಟ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮಾಜಿ ಸೈನಿಕರಾದ ಬಿ.ಎನ್ ಪ್ರಹ್ಲಾದ್ ರೆಡ್ಡಿ., ಪತ್ರಕರ್ತ ಮಂಜುನಾಥ, ಪಿ.ಆರಿ​‍್ಪ ಶ್ರೀನಿವಾಸ ರೆಡ್ಡಿರವರು ನೇರವೇರಿಸಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಕೆಂಚಪ್ಪ.ಕೆ ಮಾತಾಡಿ, ಗಣರಾಜ್ಯೋತ್ಸವ ದಿನವನ್ನು ಒಕ್ಕೂಟ ಹಬ್ಬವಾಗಿ ಶಾಲೆಯಲ್ಲಿ ಆಯೋಜನೆ ಮಾಡಿರುವುದು ಖುಷಿಯ ವಿಚಾರ, ಈ ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಸ್ಮರಿಸುತ್ತಾ ತಪ್ಪದೇ ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ನೀತಿ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿನಯ್ ಕುಮಾರ್ ಎಂ.ಎಸ್ ರವರು ಮಾತಾಡಿ 77 ನೇ ಒಕ್ಕೂಟ ದಿನವಾದ ಇಂದು ನಾವೆಲ್ಲರೂ ದೇಶಕ್ಕಾಗಿ ದುಡಿದ ಮಡಿದ ಮಹನೀಯರ ಜೀವನವನ್ನು ಆದರ್ಶವಾಗಿ ಇಟ್ಟುಕೊಂಡು ಸಾಗಬೇಕಿದೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಎಲ್ಲರೂ ತೊಡಿಗಿಸಿಕೊಳ್ಳಬೇಕು ಎಂದು ತಿಳಿಸಿದರು.

         ಪತ್ರಕರ್ತ ಮಂಜುನಾಥ ಮಾತಾಡಿ, ನಿಮಗಾಗಿ ನಾವು ಸಂಸ್ಥೆಯು ಕಾರ್ಯಕ್ರಮವನ್ನು ತುಂಬ ಅಚ್ಚುಕಟ್ಟಾಗಿ ಮಾಡಿದ್ದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರಿ​‍್ಡಸಿ ಬಹುಮಾನ ವಿತರಣೆ ಮಾಡಿದ್ದು ಎಲ್ಲಾರಿಗೂ ಸಂತೋಷದ ಸಂಗತಿ, ಅವರ ಅನ್ನಧನ್ಯ, ನಾವು ನಮ್ಮವರಿಗೆ, ನಮ್ಮ ಪರಿಸರ, ಹೊದಿಕೆ ಜೀವಕೆ ಇನ್ನೂ ಅನೇಕ ಯೋಜನೆಗಳು ನಿರಂತರವಾಗಿ ಚಾಲ್ತಿಯಲ್ಲಿದ್ದು ಅವರ ಕೆಲಸಗಳು ಎಲ್ಲಾರಿಗೂ ಮಾದರಿ ಎಂದು ತಿಳಿಸಿ, ಸಂವಿಧಾನ ಪೀಠೀಕೆಯನ್ನು ಓದಿದರು. ಮಾಜಿ ಸೈನಿಕ ಪ್ರಹ್ಲಾದ್ ರೆಡ್ಡಿ ಮಾತಾಡಿ, ದೇಶ ಕಾಯೋ ಯೋಧರನ್ನು ಸ್ಮರಿಸುತ್ತಿರುವುದು ನಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯವೆಂದು ತಿಳಿಸಿದರು. ಗ್ರಾ.ಪಂ.ಸದಸ್ಯ ಕೇಶವರೆಡ್ಡಿ ಮಾತಾಡಿ ಶಾಲೆಯ ಅಭಿವೃದ್ಧಿಗೆ ಪಂಚಾಯಿತಿಯ ಸಹಕಾರ ಸದಾ ಇರಲಿದ್ದು ಮುಂದಿನ ದಿನಗಳಲ್ಲಿ ಮಕ್ಕಳಾ ಕಲಿಕಾ ಚಟುವಟಿಕೆಗಳ ಸಾಮಾಗ್ರಿಗಳಿಗೆ ಪಂಚಾಯಿತಿ ವತಿಯಿಂದ ನೆರವಾಗುವುದಾಗಿ ತಿಳಿಸಿದರು.

         ಈ ಕಾರ್ಯಕ್ರಮದಲ್ಲಿ ಹಲಕುಂದಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಹೊನ್ನುರಮ್ಮ ಸದಸ್ಯರಾದ ನಾಗರಾಜ್, ಬುಡೇನ್ ಸಾಬ್, ಕೇಶವರೆಡ್ಡಿ ಇತರರು ಮಕ್ಕಳಿಗೆ ಬಹುಮಾನ ವಿತರಿಸಿದರು ಶಿಕ್ಷಕರಾದ ಶ್ರೀಮತಿ ಮೀನಾಕ್ಷಿ ಕಾಳೆ, ಶ್ರೀಮತಿ ವಿಶಾಲಾಕ್ಷಿ ಶ್ರೀಮತಿ ಜಯಲಕ್ಷ್ಮೀ ಕು.ವಿಶಾಲಾಕ್ಷಿ ಕು.ಶಮೀನಾ ಹಾಗು ಸಂಸ್ಥೆಯ ಕಾರ್ಯನಿರ್ವಾಹಕರಾದ ಅನಿವಾಶ್, ವಸಂತ್, ವೆಂಕಟೇಶ್, ಹಸೇನ್, ಭರತ್,ರಾಜು ಕೆ ಹೆಚ್, ಉದಯ್, ರಾಜ, ದಕ್ಷಿಣ ಮೂರ್ತಿ, ವೀರೇಶ್ ಪಾಲ್ಗೊಂಡಿದ್ದರು ಶಾಲೆಯ ಮಕ್ಕಳಿಂದ ಹಾಡು ನೃತ್ಯ ಕಾರ್ಯಕ್ರಮಗಳನ್ನು ಆಯೋಜಸಿದರು.