ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ನಾವು ಸದಾ ಸಿದ್ಧ - ಎಸ್ಪಿ ಅಮರನಾಥ ರೆಡ್ಡಿ
ಮಹಾಲಿಂಗಪುರ 01: ಸಮೀಪದ ಮದಭಾವಿ ಗ್ರಾಮದಲ್ಲಿ ಸಂಗಾನಟ್ಟಿ, ಮದಭಾವಿ, ಮಾರಾಪುರ ಮೂರು ಹಳ್ಳಿಗಳು ಸೇರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ
ಎಸ್ ಪಿ. ಅಮರನಾಥ್ ರೆಡ್ಡಿ ಮಾತನಾಡಿ, ಬಾಗಲಕೋಟ ಜಿಲ್ಲೆಯಲ್ಲಿ 611 ಹಳ್ಳಿಗಳಿವೆ. ಎಲ್ಲ ಕಡೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೇಳಿ ಮತ್ತು ಜಾಗೃತಿ ಮೂಡಿಸುವ ಕಾರ್ಯ ನಮ್ಮ ಪೊಲೀಸ್ ಇಲಾಖೆ ದಿನನಿತ್ಯ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಳ್ಳತನ, ಕೊಲೆ, ದರೋಡೆ,ಡ್ರಗ್ಸ್ ಮತ್ತು ಗಾಂಜಾ ಮಾರಾಟ,ಹೆಲ್ಮೆಟ್ ಧರಿಸದೆ ಮಧ್ಯಪಾನ ಸೇವನೆ ಮಾಡಿ ಸಂಚಾರ ನಡೆಸುವುದು ಕಾನೂನು ಬಾಹಿರವಾಗಿದೆ. ಅದೇ ರೀತಿ ಮಹಿಳೆಯರ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ,ಬಾಲ ಕಾರ್ಮಿಕರು,ಶಾಂತಿ ಕದಡುವ ಜನ, ಕಂಡರೆ 112 ಗೆ ಕೂಡಲೇ ಕರೆ ಮಾಡಿ ನಿಮ್ಮ ಸಮಸ್ಯೆಗೆ ನಾವು ಸದಾ ಸಿದ್ಧವಾಗಿದ್ದೇವೆ ಎಂದರು.
ಡಿ ವೈ ಎಸ್ ಪಿ "ಶಾಂತವೀರ ಮಾತನಾಡಿ",ಅಪರಾಧ ತಡೆಗಟ್ಟುವಲ್ಲಿ ನಮ್ಮ ಕಾರ್ಯ ಶ್ಲಾಘನೀಯ. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಜೊತೆಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಠಾಣೆಯ ಅಡಿಯಲ್ಲಿ ಬರುವ ಮೂರು ಹಳ್ಳಿಗಳನ್ನು ಆಯ್ಕೆ ಮಾಡಿ ಗ್ರಾಮ ವಾಸ್ತವ್ಯ ಎಂಬ ಹೆಸರಿನಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ.ಬಾಗಲಕೋಟ ಜಿಲ್ಲಾ ಪೊಲೀಸ್ ಈ ಕಾರ್ಯಕ್ರಮಗಳನ್ನು ಹೆಚ್ಚಿನದಾಗಿ ಮಾಡುತ್ತಿದೆ ಎಂದರು.
ಊರಿನ ಮುಖಂಡ "ಮಹಾದೇವ ಮೇಟಿ"ಮಾತನಾಡಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡುವುದರಿಂದ ಜನರಿಗೆ ಇನ್ನಷ್ಟು ಅರಿವು ಮೂಡುತ್ತದೆ. ಪೊಲೀಸರು ಹೆಲ್ಮೆಟ್ ಹಾಗೂ ಲೈಸೆನ್ಸ್ ನ ಬಗ್ಗೆ ಇನ್ನಷ್ಟು ಜಾಗೃತಿ ವಹಿಸಿ ಸಾಮೂಹಿಕವಾಗಿ ಪರೀಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
"ಪತ್ರಕರ್ತ ಮೀರಾ ತಟಗಾರ"ಮಾತನಾಡಿ, ಪ್ರತಿ ಹಳ್ಳಿಗಳಿಗೆ ಜನ ಸಂಚಾರ ಮಾಡಲು,ಸೂಕ್ತವಾದ ಮಾರ್ಗ ತಿಳಿಯಲು ನಾಮಫಲಕ ಅಳವಡಿಸಿ ಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಬಾಗಲಕೋಟ ಎಸ್ಪಿ ಅಮರನಾಥ ರೆಡ್ಡಿ , ಡಿವೈಎಸ್ಪಿ ಶಾಂತವೀರ ,ಸಿಪಿಐ ಸಂಜೀವ ಬಳಿಗಾರ, ಪಿಎ ಕಿರಣ್ ಸತ್ತಿಗೇರಿ, ಪಿಎ ಮಧು ಎಲ್, ಊರಿನ ಮುಖಂಡರಾದ, ಮಹಾದೇವ ಮೇಟಿ, ಅನ್ನೇಶಗೌಡ ಉಳ್ಳಾಗಡ್ಡಿ, ವಿನೋದ ಉಳ್ಳಾಗಡ್ಡಿ, ಮಹ್ಮದ್ ಹೂಲಿಕಟ್ಟಿ, ಲಗ್ಮಪ್ಪ ಮಾದರ,ನಾಗಪ್ಪ ಡುಮ್ಮಣ್ಣವರ, ಜಯಶ್ರೀ ತಿಮ್ಮಾಪುರ, ಹನಮಂತ ಮಾದರ,ವಿಠ್ಠಲ ಮುಧೋಳ, ಬಸವರಾಜ ಘಂಟಿ, ಎಎ ಸಿದ್ದಪ್ಪ ಜೈನರ,ಮುತ್ತಪ್ಪ ಕೋಲುರ, ಎಂ ಎಂ ಮಠ,ಪೋಲಿಸ್ ಸಿಂಬ್ಬದಿಗಳಾದ ಮಹಾಲಿಂಗಪ್ಪ ಬೆಳಕೊಡ , ಜೆ ಜೆ ಪಾಟೀಲ,ದಯಾನಂದ ತಳವಾರ,ಸಿದ್ದಪ್ಪಾ ತಳವಾರ,ವೀರೇಶ ಮಸ್ಕಿ,ಲೋಕೇಶ ಹೂಕುಮಣ್ಣವರ, ವಾಯ್ ಎಸ್ ಸನದಿ,ಬಸವರಾಜ ದೇಸಾಯಿ, ಭೀಮಶಿ ಹಡಪದ,ವಿಠ್ಠಲ ಬಳಗಾನೂರ,ಸೇರಿದಂತೆ ಊರಿನ ಅನೇಕ ಮುಖಂಡರು ಭಾಗವಸಿದ್ದರು.ರವಿ ಕಲ್ಲೋಳಿ ನಿರೂಪಿಸಿ ವಂದಿಸಿದರು.