ಲೋಕದರ್ಶನ ವರದಿ
ಬೆಳಗಾವಿ
17: ಮಳೆಯ ಅಭಾವದಿಂದ ದನಕರುಗಳಿಗೆ ಕುಡಿಯುವ ನೀರು ಸಿಗದೇ ಗ್ರಾಮೀಣ ಪ್ರದೇಶದ ಜನರು ಜಾನುವಾರುಗಳಿಗೆ ನೀರು ಕುಡಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿಮರ್ಿಸಿ "ಜಲಾಮೃತವಾಗಿ" ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಹಾಯಕಾರಿಯಾಯಿತು.
ಈಗಾಗಲೇ ಅಥಣಿ, ಬೆಳಗಾವಿ ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪೂರ, ರಾಮದುರ್ಗ, ರಾಯಬಾಗ ಮತ್ತು ಸವದತ್ತಿ ತಾಲೂಕುಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1002 ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಯನ್ನು ಯೋಜನೆಯಡಿ ನಿಮರ್ಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಲಾವಾರು ಸ್ಥಳದಲ್ಲಿ ನೀರು ಸಂಗ್ರಹಿಸಲು ಟ್ಯಾಂಕಗಳನ್ನು ಅಳವಡಿಸಿರುತ್ತಾರೆ. ಟ್ಯಾಂಕನಲ್ಲಿ ನೀರು ತುಂಬಿದ ನಂತರ ಹೆಚ್ಚಿನ ನೀರು ತಗ್ಗು ಪ್ರದೇಶಗಳಿಗೆ ಹರಿದು ಹೋಗಿ ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭವಾಗಿತ್ತು. ನೀರು ಪೋಲಾಗದಂತೆ ಅದೇ ಟ್ಯಾಂಕಿನ ಪಕ್ಕದಲ್ಲಿ ಜಾನುವಾರುಗಳ ನೀರಿನ ತೊಟ್ಟಿ ನಿಮರ್ಿಸುವುದರಿಂದ ನೀರು ಪೋಲಾಗುವುದನ್ನು ತಪ್ಪಿಸುವುದಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ತೀರಿಸಬಹುದಾಗಿದೆ. ಇದಲ್ಲದೇ ಜನರಿಗೆ ಬಟ್ಟೆ ತೊಳೆಯಲು ಕೂಡಾ ಅನುಕೂಲವಾಗಿದೆ. ತೊಟ್ಟಿಯ ಪ್ರಮಾಣ 5.0 ಮೀ ಉದ್ದ 1.7 ಮೀ ಅಗಲ ಮತ್ತು 0.525 ಮೀ ಎತ್ತರದಲ್ಲಿ ಒಟ್ಟು ರೂ. 42000ಗಳಲ್ಲಿ ನಿಮರ್ಿಸಬಹುದಾಗಿದೆ.
ಜನ ಸಾಮಾನ್ಯರು ಉದ್ಯೋಗ ಇಲ್ಲದೇ ಬೇರೆ ಬೇರೆ ಪ್ರದೇಶಕ್ಕೆ ಮತ್ತು ನಗರಗಳಿಗೆ ತೆರಳಿ ಉದ್ಯೋಗಕ್ಕಾ ಮೂಲ ಉದ್ಯೋಗ ಇಲ್ಲದೇ ಉದ್ಯೋಗ ಮರೆತು ಬೇರೆ ಉದ್ಯೋಗ ಮಾಡಿಕೊಂಡು ತಮ್ಮ ಉಪ ಜೀವನ ನಡೆಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿತ್ತು. ಅಂತಹ ಸಮಯದಲ್ಲಿ ಈ ಯೋಜನೆಯ ಜನರ ಬದುಕು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಾಗಿದೆ. ಮಾಹಿತಿಗಾಗಿ ನಿಮ್ಮ ಸಮೀಪದ ಗ್ರಾಮ ಪಂಚಾಯತಿಗೆ ಸಂಪಕರ್ಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.