ಸಾಯಿಬಾಬಾ ಮೂರ್ತಿಗೆ ಜಲಾಭಿಷೇಕ

ಲೋಕದರ್ಶನ ವರದಿ

ಕಾಗವಾಡ 03:  ತಾಲೂಕಿನ ಉಗಾರ ಖುರ್ದ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಸೋಮವಾರರಂದು ಮೂತರ್ಿಗೆ ಜಲಾಭಿಷೇಕ, ಜಲಕುಂಭ ಮೆರವಣಿಗೆ, ಸಾಯಿಬಾಬಾ ಪಲ್ಲಕ್ಕಿ ಮೆರವಣಿಗೆ ನೆರವೇರಿತು.

ಉಗಾರ ಹಾಗೂ ಪರಿಸರದಲ್ಲಿಯ ಸಾವಿರಾರು ಸಾಯಿಬಾಬಾ ಭಕ್ತರಿಗೆ ನೂರಾರು ಕಿ.ಮೀ ಅಂತರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರಕ್ಕೆ ಹೋಗಿ ದರ್ಶನ ಪಡೆದುಕೊಳ್ಳಲು ಅಸಾಧ್ಯವಾಗುತ್ತಿದೆ. ಇದನ್ನು ಗಮನಿಸಿ, 16 ವರ್ಷಗಳ ಹಿಂದೆ ಉಗಾರ ಸಕ್ಕರೆ ಕಾಖರ್ಾನೆ ಉದ್ಯಮಿ ರಾಜಾಭಾವು ಶಿರಗಾಂವಕರ ಹಾಗೂ ಸ್ಥಳೀಯ ಸಾಯಿ ಭಕ್ತರು ಸಾಯಿ ಮಂದಿರ ಕಟ್ಟಿಸಲು ಸಂಸ್ಥೆ ಸ್ಥಾಪಿಸಿದ್ದರು. ಇದಕ್ಕೆ 16 ವರ್ಷಗಳು ಪೂರ್ಣಗೊಂಡಿವೆ. ಇದರ ನಿಮಿತ್ಯ ರವಿವಾರ ದಿ. 26 ರಿಂದ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.

ದಿ. 26ರಿಂದ ದಿ. 1ರ ವರೆಗೆ ಬೆಳಿಗ್ಗೆ 3 ಗಂಟೆ ಸಾಯಿ ಸಪ್ತಚರಿತ್ರ ಪಾರಾಯಣ ನೆರವೇರಿತು. ಸೋಮವಾರ ರಂದು ಕೃಷ್ಣಾ ನದಿಯಿಂದ ನೂರಾರು ಸಾಯಿ ಭಕ್ತ ಮಹಿಳೆಯರು ಜಲಕುಂಭ ತೆಗೆದುಕೊಂಡು ಮೂತರ್ಿಗೆ ಜಲಾಭಿಷೇಕ ಮಾಡಿದರು. ಪಲ್ಲಕ್ಕಿ ಮೆರವಣಿಗೆ ನೆರವೇರಿತು. ಕೃಷ್ಣಾವೇಣಿ ಮಹಿಳಾ ಭಜನಿ ಮಂಡಳ ಅವರಿಂದ ಭಜನಿ ಮತ್ತು ಸಂಜೆ ಬಾಲ ಕಲಾವಿದ ಡಿ.ಎನ್.ಜೋಶಿ ಇವರಿಂದ ಭಾವಗೀತೆ ಹಾಗೂ ಭಕ್ತಿಗೀತೆ ಕಾರ್ಯಕ್ರಮ ನೆರವೇರಿತು. ಮಂಗಳವಾರ ರಂದು ಸತ್ಯನಾರಾಯಣ ಪೂಜೆ, ಆರತಿ, ಮಹಾಪ್ರಸಾದ ನೆರವೇರಲಿದೆ.

ಮಂದಿರದ ಕಮೀಟಿ ಕಾರ್ಯದಶರ್ಿಗಳಾದ ವಸಂತ ಭೋಸಲೆ ಮಾತನಾಡುವಾಗ,ಶ್ರೀ ಸಾಯಿ ಮಂದಿರ 16 ವರ್ಷ ಹಿಂದೆ ಸ್ಥಾಪಿಸಿದ್ದು. ಪ್ರತಿದಿನ ಸಾಯಿ ಭಕ್ತರಿಗೆ ದರ್ಶನ ಪಡೆಯಲು ಬಹಳಷ್ಟು ಅನುಕೂಲವಾಗಿದೆ. ಅನೇಕ ಕುಟುಂಬದವರು ಇಲ್ಲಿಗೆ ಬಂದು ಕೆಲ ಕಾಲ ಶಾತಿಯಿಂದ ಕುಳಿತು ಸಾಯಿಯ ಸಂದೇಶ ಓದಿ ಕೃತಾರ್ತವಾಗುತ್ತಾರೆ ಎಂದರು.

ಸಾಯಿ ಮಂದಿರದ ಉಪಾಧ್ಯಕ್ಷ ಸುರೇಶ ಥೋರುಶೆ ಮಾತನಾಡಿ, ಸಕ್ಕರೆ ಕಾಖರ್ಾನೆ ಉದ್ಯಮಿ ಹಾಗೂ ಅಧ್ಯಾತ್ಮಿಕವಾಗಿರುವ 90 ವಯಸ್ಸಿನ ರಾಜಾಭಾವು ಶಿರಗಾಂವಕರ ಇವರ ನೇತೃತ್ವದಲ್ಲಿ ಮಂದಿರ ಸ್ಥಾಪಿಸಿದ್ದರಿಂದ ಶಿರಡಿ ಸಾಯಿಬಾಬಾಗೆ ಹೋಗಲಾರ ಭಕ್ತರು ಇಲ್ಲಿಗೆ ದರ್ಶನ ಪಡೆದು ಧನ್ಯರಾಗುತ್ತಾರೆ ಎಂದರು.

ಮಂದಿರದ ಸದಸ್ಯರಾದ ಅಪ್ಪಾಸಾಹೇಬ ಮಾಳಿ, ಲಕ್ಷ್ಮಣ ಭೋವಿ, ಯಶ್ವಂತ ಶಿರಸಾಟ್, ವಿನಾಯಕ ಭಾಂಡಾರಕರ, ಮಾಯಪ್ಪಾ ಕೊರಬು, ಮಹಾದೇವ ಪಾಟೀಲ, ಭೀಮಸೇನ ಕಾಂಬಳೆ ಮತ್ತು ಎಲ್ಲ ಸಾಯಿ ಮಂಡಳದ ಕಾರ್ಯಕರ್ತರು, ಮಹಿಳಾ ಭಕ್ತರು ವಾಷರ್ಿಕೋತ್ಸವ ಯಶಸ್ವಿ ಮಾಡಿದ್ದಾರೆ. ಆರ್ಚಕ ಆರ್ಚಕ ಲಕ್ಷ್ಮಣ ಜೋಶಿ ವಿಧಿ ವಿಧಾನ ಕಾರ್ಯಕ್ರಮ ನೆರವೇರಿಸಿದರು.