ಲೋಕದರ್ಶನ ವರದಿ
ಬೆಳಗಾವಿ, 20: 94 ಕಿ.ಮೀ. ದೂರದಲ್ಲಿರವ ಕೃಷ್ನಾ ನದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯದಿಂದ ಒಂದು ಟಿ.ಎಂ.ಸಿ. ಹರಿಸುವ ಜಲಸಂಪನ್ಮೂಲ ಖಾತೆಯ ಸಚಿವ ಡಿ.ಕೆ ಶಿವಕುಮಾರ ಮತ್ತು ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ ಅವರ ನಿಧರ್ಾರದಂತೆ ಇಂದು ಸೋಮವಾರ ಮುಂಜಾನೆ 8 ಗಂಟೆಗೆ ಹಿಡ್ಕಲ್ ಜಲಾಶಯದಿಂದ ಮೂರು ಸಾವಿರ ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಲಾಯಿತು.
ನಾಳೆ ಮಂಗಳವಾರ ಮುಂಜಾನೆಯಿಂದ ನಿತ್ಯ ಒಂದು ಸಾವಿರ ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಲಾಗುವದು. ಜ
ಲಾಶಯದಲ್ಲಿ ಸದ್ಯ 4 ಟಿ.ಎಂ.ಸಿ. ನೀರಿನ ಸಂಗ್ರಹವಿದ್ದು ಒಂದು ಟಿ.ಎಂ.ಸಿ. ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಧೂಪದಾಳ ವೇರ್ ಭತರ್ಿಯಾದ ನಂತರ ಅಲ್ಲಿಂದ ಮುಗಳಖೋಡ ಚೌಕಿಯವರೆಗಿನ 50 ಕಿ.ಮೀ. ದೂರವನ್ನು ಮುಖ್ಯ ಕಾಲುವೆ ಮೂಲಕ ನೀರು ಸಾಗಬೇಕು. ಅಲ್ಲಿಂದ ಅಥಣಿ ತಾಲೂಕಿನ ಶೇಗುಣಸಿವರೆಗಿನ 22 ಕಿ.ಮೀ. ಕಾಲುವೆಯಲ್ಲಿ ಸಾಗಿ ಹಿರೇಹಳ್ಳದ ಮೂಲಕ ಈ ನೀರು ಕೃಷ್ಣಾ ತಟವನ್ನು ಸೇರಬೇಕಾಗಿದೆ. ಆದರೆ ಒಂದು ಟಿ.ಎಂ.ಸಿ. ನೀರು 94 ಕಿ.ಮೀ. ದೂರವನ್ನು ಕ್ರಮಿಸಿ ಕೃಷ್ಣಾ ತಟವನ್ನು ಸೇರುವದು ಕಷ್ಟ ಸಾಧ್ಯವೆಂದು ಅನೇಕ ನೀರಾವರಿ ಅಧಿಕಾರಿಗಳು ಅಭಿಪ್ರಾಯಪಡುತಿದ್ದಾರೆ.