ಗಡಿ ಭಾಗದ ಜಮೀನುಗಳಿಗೆ ನೀರು: ರೈತರಲ್ಲಿ ಹರ್ಷ
Water for border lands: Farmers rejoice
ಗಡಿ ಭಾಗದ ಜಮೀನುಗಳಿಗೆ ನೀರು: ರೈತರಲ್ಲಿ ಹರ್ಷ
ಸಂಬರಗಿ 27: ಗಡಿ ಭಾಗದ ರೈತರ ಕನಸಾಗಿರುವ ಖಿಳೆಗಾವ ಬಸವೇಶ್ವರ ಯಾತ ನೀರಾವರಿ ಯೋಜನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ ಶಿವಕುಮಾರ ಸಚಿವ ಎಂ.ಬಿ ಪಾಟೀಲ ಇವರ ಆಶೀರ್ವಾದದಿಂದ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಇವರ ಸತತ ಪ್ರಯತ್ನದಿಂದ ಕೊನೆಯ ಹಂತದಲ್ಲಿ ಈ ಯೋಜನೆಗೆ ನೀರು ಹರಿದು ಬಂತು ಎಂದು ಚಿಕ್ಕೋಡಿ ಲೋಕ ಸಭಾ ಕ್ಷೇತ್ರದ ಮಾದ್ಯಮ ಪ್ರತಿನಿಧಿ ಹೇಳಿದರು.
ಖಿಳೆಗಾವ ಬಸವೇಶ್ವರ ಏತ ನೀರಾವರಿ ಯೋಜನೆ ನೀರನ್ನು ಕೃಷ್ಣಾ ನದಿಯಿಂದ ವಿಷ್ಣುವಾಡಿ ಗ್ರಾಮದಲ್ಲಿ ತಲುಪಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜು ಕಾಗೆ ನೀಡಿದಂತ ಭರವಸೆ ಈಡೇರಿಸಿದರು.ಈ ಭಾಗದಲ್ಲಿ 22 ಗ್ರಾಮದಲ್ಲಿ 22 ಸಾವಿರ ಹೆಕ್ಟರ ಜಮೀನಿಗೆ ನೀರು ತಲುಪಿ ಸತತವಾಗಿ ಈ ಗ್ರಾಮಗಳು ಬರಗಾಲ ಮುಕ್ತವಾಗುತ್ತವೆ. ಇವರು ನೀಡಿದಂತ ಯಾವುದೆ ಭರವಸೆ ಪೂರ್ಣಗೊಳಿಸಲು ಬೀದಿಗೆ ಇಳಿದು ಹೋರಾಟ ಮಾಡಲು ಸಿದ್ಧರಾಗುತ್ತಿದ್ದರು. ಮೊದಲನೆ ಹಂತದ ನೀರನ್ನು ಮಧಭಾವಿ, ವಿಷ್ಣುವಾಡಿ, ಜಕಾರಟ್ಟಿ, ಅರಳಿಹಟ್ಟಿ, ಬೊಮ್ಮನಾಳ, ಜಂಬಗಿ, ಹನಮಾಪುರ, ಸಂಬರಗಿ, ಸಿದ್ದೆವಾಡಿ ಈ ಗ್ರಾಮಕ್ಕೆ ರೈತರಿಗೆ ನೀರಿನ ಅನುಕೂಲ ಆಗುತ್ತದೆ. ಎರಡನೆ ಹಂತದಲ್ಲಿ ಖಿಳೆಗಾವ ಪಾಂಡೆಗಾವ ಹಾಗೂ ಇನ್ನಿತರ ಗ್ರಾಮ ತಲುಪುತ್ತದೆ ಎಂದು ಹೇಳಿದರು.ಮಲ್ಲಿಕಾರ್ಜುನ ದಳವಾಯಿ, ಅಶೋಕ ಬಾಬು ಮಾನೆ, ಅಮೃತ ಮಿಸಾಳ, ಅನ್ನಪ್ಪಾ ಮಿಸಾಳ ಮಹಾದೇವ ತಾನಗೆ ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 