ಗದಗ 18: ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಉದ್ಭವಿಸಲಿರುವ ಜಿಲ್ಲೆಯ ಬರ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು, ಮುಖ್ಯವಾಗಿ ನೀರು, ಮೇವು ಪೂರೈಕೆ ಹಾಗೂ ಕೃಷಿಕರಿಗೆ ಕಾಮರ್ಿಕರಿಗೆ ಉದ್ಯೋಗ ನೀಡುವಿಕೆಗೆ ಸತತ ನಿಗಾ ವಹಿಸಲು ಸಂಬಂಧಿತ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕಾಮರ್ಿಕ ಇಲಾಖೆ ಕಾರ್ಯದಶರ್ಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಅಮ್ಲನ್ ಆದಿತ್ಯ ಬಿಸ್ವಾಸ್ ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಬರ ನಿರ್ವಹಣೆ ಕುರಿತು ಜಿಲ್ಲಾಡಳಿತ ಕೈಗೊಳ್ಳುತ್ತಿರುವ ಸಿದ್ದತಾ ಕ್ರಮಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಡಿಬಿಓಟಿ ಆಧಾರದ ಯೋಜನೆಯಡಿ ಗ್ರಾಮಗಳಿಗೆ ನೀರು ಪೂರೈಕೆ ಕುರಿತಂತೆ ಅದು ಅದೇ ಉದ್ದೇಶಕ್ಕಾಗಿ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಬರದಂತಹ ಕಠಿನ ಪರಿಸ್ಥಿತಿಯಲ್ಲಿ ಕೃಷಿಗಾಗಿ ಅಥವಾ ಇನ್ನಾವುದೋ ಕಾರಣಕ್ಕೆ ಬಳಕೆ ತಡೆಯಲು ಜಿಲ್ಲಾಡಳಿತ ಪೈಪಲೈನಗಳ ನಿಗಾವಹಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಜರುಗಿಸಬೇಕು. ಜಾನುವಾರುಗಳಿಗೆ ಮೇವು ಪೂರೈಕೆ ಕೊರತೆ ನೀಗಿಸಲು ಹೊಂಬಳ ರಸ್ತೆಯಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯವನ್ನು ಮುಖ್ಯ ಮೇವಿನ ಕೇಂದ್ರವಾಗಿಸಬೇಕು ಅಲ್ಲಿಂದ ಕೊರತೆ ಪ್ರದೇಶಗಳಿಗೆ ಮೇವಿನ ಪೂರೈಕೆಗೆ ಹಾಗೂ ಅದರ ಆಧೀನದಲ್ಲಿರುವ ಜಮೀನಿನಲ್ಲಿ ಮೇವು ಬೆಳೆಸುವಿಕೆಗೆ ಈಗಿನಿಂದಲೇ ಕ್ರಮ ಜರುಗಿಸಲು ಹಾಗೂ ನೀರು,ಮೇವು ಕೊರತೆಗಾಗಿ ಈಗಾಗಳೆ ಗುರುತಿಸಲಾದ 149 ಗ್ರಾಮಗಳಲ್ಲಿ ಪಶು ವೈದ್ಯಕೀಯ ಇಲಾಖೆ ಮೇವು ಕಿಟಗಳನ್ನು ವಿತರಿಸಬೇಕು ಎಂದ ಉಸ್ತುವಾರಿ ಕಾರ್ಯದಶರ್ಿಗಳು
ರಾಜ್ಯ ಸಕರ್ಾರವು ವಾಣಿಜ್ಯ ಬ್ಯಾಂಕುಗಳ ಕೃಷಿಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ಎಲ್ಲ ಅರ್ಹ ರೈತರು ಸಂಬಂಧಿತ ಬ್ಯಾಂಕ ಶಾಖೆಗಳಲ್ಲಿ ಸಮಸ್ಯೆಗಳ ಎದುರಿಸದಂತೆ ಜಿಲ್ಲಾಡಳಿತ, ಜಿಲ್ಲಾ ಲೀಡ ಬ್ಯಾಂಕ ಹಾಗೂ ಬ್ಯಾಂಕ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ನೊಂದಣಿ ಪ್ರಕ್ರಿಯೆ ಯಶಸ್ವಿಯಾಗಿಸಲು ನಿದರ್ೇಶನ ನೀಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಜಿಲ್ಲಾಡಳಿತ ಹಾಗೂ ತಾಲೂಕಾ ಟಾಸ್ಕಫೋಸ್ ಸಮಿತಿಗಳು ಕ್ಯಗೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನವೆಂಬರ 20ರವರೆಗೆ ವಾಡಿಕೆ ಮಳೆ 601.6 ಮಿ.ಮೀ.ಆಗಬೇಕಿತ್ತು ಆದರೆ 398.6 ಮಿ.ಮಿ. ಆಗಿದ್ದು ಶೆ.34ರಷ್ಟ ಕೊರತೆಯಾಗಿದೆ. ಕುಡಿಯುವ ನೀರಿನ ಪೂರೈಕೆ ಜನೇವರಿ ನಂತರ ತಲೆದೋರುವ 149 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಸಧ್ಯ ಜಿಲ್ಲೆಯಲ್ಲಿ 9 ವಾರಗಳಿಗಾಗುವಷ್ಟು 66,419 ಟನ್ ಮೇವಿನ ಸಂಗ್ರಹವಿದೆ. ಬರ ನಿರ್ವಹಣೆಗಾಗಿ ತಾಲೂಕಾ ಮತ್ತು ಹೊಬಳಿ ಮಟ್ಟದ ನೋಡಲ್ ಅಧಿಕಾರಿಗಳನ್ನು ನಿಯಮಿಸಿ ನಿಯಮಿತವಾಗಿಾಯಾ ಪ್ರದೇಶಗಳ ಬರ ಪರಿಸ್ಥಿಯ ಮೇಲೇ ನಿಗಾ ವಹಿಸಲಾಗಿದೆ ಎಂದರು.
ಗದಗ ಜಿ.ಪಂ. ಉಪಕಾರ್ಯದಶರ್ಿ ಎಸ್.ಸಿ. ಮಹೇಶ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿದರ್ೇಶಕ ಟಿ.ದಿನೇಶ, ಕೃಷಿ ಜಂಟಿನಿದರ್ೇಶಕ ಬಾಲರೆಡ್ಡಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.