ವಕ್ಕುಂದ ಗ್ರಾಮದ ನೇಕಾರ ಸಮಾಜ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಉಗ್ರ ಪ್ರತಿಭಟನೆ

ಬೈಲಹೊಂಗಲ 24: ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ತಾಲೂಕಿನ ವಕ್ಕುಂದ ಗ್ರಾಮದ ನೇಕಾರ ಸಮಾಜ ಬಾಂಧವರು ಪಟ್ಟಣದ ಕೆಪಿಟಿಸಿಎಲ್ ಕಚೇರಿ ಎದುರು ಶುಕ್ರವಾರ ಉಗ್ರ ಪ್ರತಿಭಟನೆ ನಡೆಸಿದರು. 

    ಬೇಕೆ ಬೇಕು...ನ್ಯಾಯ ಬೇಕು...ಅಧಿಕಾರಿಗಳಿಗೆ ಧಿಕ್ಕಾರ ಎಂಬ ಘೋಷಣೆ ಕೂಗಿದರು. ಪ್ರತಿಭಟನಾ ಸ್ಥಳದಲ್ಲೆ ಅಡುಗೆ ಮಾಡುವ ಉದ್ದೇಶದಿಂದ ಗ್ಯಾಸ್, ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದರು. ನೇಕಾರ ಸಮಾಜ ಬಾಂಧವರು ಮಾತನಾಡಿ, ನೇಕಾರ ಸಮಾಜ ಬಾಂಧವರು ವಿದ್ಯುತ್ತ ಮಗ್ಗಗಳನ್ನು ಹೊಂದಿದ್ದು ನಮ್ಮ ಜೀವನವೆಲ್ಲಾ ಸಂಪೂರ್ಣವಾಗಿ ವಿದ್ಯುತ್ನ್ನೆ ಅವಲಂಬಿಸಿದೆ. 

     ಪ್ರಸ್ತುತ 2ತಿಂಗಳಿನಿಂದ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದೇ ನಾವು ಜೀವನ ನಡೆಸುವುದು ಕಠಿಣವಾಗಿದೆ. ನಮಗೆ ಬರುತ್ತಿರುವ ವಿದ್ಯುತ್ನ್ನು ಕೆಪಿಟಿಸಿಎಲ್ ಅಧಿಕಾರಿ ಆಚಾರ್ಯ ಅವರು ಬೇರೆಯವರಿಗೆ ಕೊಟ್ಟು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಕ್ಕುಂದ ಗ್ರಾಮದಲ್ಲಿ ಒಟ್ಟು 200 ನೇಕಾರ ಕುಟುಂಬಗಳಿದ್ದು, ನಾವು ನೇಕಾರಿಕೆಯನ್ನೆ ಅವಲಂಭಿಸಿದ್ದೇವೆ. ಒಂದು ವೇಳೆ ವಿದ್ಯುತ್ ಇಲ್ಲದಿದ್ದಲ್ಲಿ ನಮ್ಮ ಉದ್ಯೋಗವೇ ನಿಂತು ಹೋಗುತ್ತದೆ. ವಿದ್ಯುತ್ ಕಳ್ಳರು ವಿದ್ಯುತ್ ಲೈನಗಳಿಗೆ ಹುಕ್ಸ್ಗಳನ್ನು ಹಾಕಿ ಲೈನ್ ಟ್ರಿಪ್ ಮಾಡುತ್ತಿದ್ದಾರೆ. ವಿದ್ಯುತ್ ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. 

   ಮಲ್ಲಪ್ಪಾ ಢವಳೆ, ಮಲ್ಲಿಕಾಜರ್ುನ ಢವಳೆ, ಶಂಕರ ಢವಳೆ, ಫಕ್ಕೀರ ಕಾಂಬಳೆ, ರಾಜು ಬುಚಡಿ, ಶಿವಪ್ಪಾ ಢವಳೆ, ಶಹಜಾನ ಹುಡೇದ, ಅರುಣ ಢವಳೆ, ಪ್ರಕಾಶ ಸಂಭೋಜಿ, ಉಮೇಶ ಬುಚಡಿ, ಪ್ರಕಾಶ ಲೋಕರಿ, ಮಹೇಂದ್ರ ಢವಳೆ, ಮಾಲಾ ಢವಳೆ, ಗಂಗವ್ವ ಭಂಡಾರಿ, ಕಮಲವ್ವಾ ಢವಳೆ, ಗೌರವ್ವಾ ಬುಚಡಿ ಸೇರಿದಂತೆ ನೇಕಾರ ಸಮಾಜ ಬಾಂಧವರು ಉಪಸ್ಥಿತರಿದ್ದರು. 

ಬಾಕ್ಸ್ ಐಟಂ: 

ವಕ್ಕುಂದ ಗ್ರಾಮದ ವ್ಯಾಪ್ತಿಗೆ ಬರುವ ಕೆಪಿಟಿಸಿಎಲ್ ಅಧಿಕಾರಿ ಆಚಾರ್ಯ ಅವರು ರೈತರಿಂದ, ನೇಕಾರ ಸಮಾಜ ಬಾಂಧವರಿಂದ ಲಂಚ ಪಡೆಯುತ್ತಿದ್ದಾರೆ. 1 ಮೋಟಾರ್ಗೆ 500 ರೂ.ರಂತೆ ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಲಂಚದ ಹಣ ಸಂಗ್ರಹವಾಗುತ್ತಿದೆ. ವಿದ್ಯುತ್ನ್ನು ಸರಿಯಾಗಿ ಸರಬರಾಜು ಮಾಡದೇ ನೇಕಾರ ಸಮಾಜದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆಚಾರ್ಯ ಅವರ ಮೇಲೆ ಮೇಲಾಧಿಕಾರಿಗಳು ಕ್ರಮ ಜರುಗಿಸದಿದ್ದರೆ ನಾವೇ ಧರ್ಮದೇಟು ನೀಡುತ್ತೇವೆ. 

ತುಳಸವ್ವ ಭಂಡಾರಿ 

ನೇಕಾರ ಸಮಾಜದ ಮಹಿಳೆ, ವಕ್ಕುಂದ 

-----ಬಾಕ್ಸ್ ಐಟಂ: 

ಕೆಪಿಟಿಸಿಎಲ್ನವರು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿಲ್ಲ. ವಿದ್ಯುತ್ ಕಳ್ಳರ ಮೇಲೆ ಕೆಪಿಟಿಸಿಎಲ್ ಅಧಿಕಾರಿಗಳು ಕ್ರಮ ಜರುಗಿಸಲು ನಿಷ್ಕಾಳಜಿ ತೋರುತ್ತಿದ್ದಾರೆ. ವಿದ್ಯುತ್ ಕಳ್ಳರ, ಅನ್ಯಾಯ ಮಾಡುವವರ ಮೇಲೆ ಕ್ರಮ ಜರುಗಿಸಲು ಕೆಪಿಟಿಸಿಎಲ್ನವರಿಗೆ ಶಕ್ತಿ ಇಲ್ವಾ. 

ರೇಖಾ ಢವಳೆ

ನೇಕಾರ ಸಮಾಜ ಬಾಂಧವರು, ವಕ್ಕುಂದ 

ಬಾಕ್ಸ್ ಐಟಂ: 

ಸಮರ್ಪಕವಾಗಿ ವಿದ್ಯುತ್ನ್ನು ಸರಬರಾಜು ಮಾಡದಿದ್ದರೆ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮುಂದುವರೆಯಲಿದೆ. ಕೆಪಿಟಿಸಿಎಲ್ ಕಚೇರಿ ಎದುರೇ ಅಡುಗೆ ಮಾಡುತ್ತೇವೆ. 

ಮಲ್ಲಿಕಾಜರ್ುನ ಢವಳೆ 

ನೇಕಾರ ಸಮಾಜದ ಮುಖಂಡರು, ವಕ್ಕುಂದ