ರೈತರ ಸಂಪೂರ್ಣ ಸಾಲ ಜ.31ರೊಳಗೆ ಮನ್ನಾ: ಕುಮಾರಸ್ವಾಮಿ

ಲೋಕದರ್ಶನ ವರದಿ

ಕೊಪ್ಪಳ: ರೈತರ ಸಾಲ ಮನ್ನಾ ಮಾಡಲು ನಾಲ್ಕು ವರ್ಷ ಸಮಯ ತೆಗೆದುಕೊಳ್ಳುವುದಿಲ್ಲ. 2019ರ ಜ. 31ರೊಳಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

 ಅವರು ಸೋಮವಾರ ಕೊಪ್ಪಳ ಸಮೀಪ ಎಂಎಸ್ಪಿಎಲ್ ವಿಮಾನ ನಿಲ್ದಾಣದಲ್ಲಿ ಬಾಗಲಕೋಟೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಯೋಜನೆ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಸಾಲಮನ್ನಾಕ್ಕಾಗಿ  ಯಾವುದೇ ಇಲಾಖೆಯ ಅನುದಾನ ಕಡಿತ ಮಾಡುವುದಿಲ್ಲ. ಅಭಿವೃದ್ಧಿ ಕೆಲಸವೇ ಬೇರೆ, ಸಾಲಮನ್ನಾ ಯೋಜನೆಯೇ ಬೇರೆ. ಸಾಲಮನ್ನಾಗೆ ಬೇರೆ ರೀತಿಯ ಅನುದಾನ ಹೊಂದಾಣಿಕೆ ಮಾಡುತ್ತೇನೆ ಎಂದು ಅವರು 46 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದು ಸುಲಭದ ಮಾತಲ್ಲ. ಬೇರೆ ಯಾವ ರಾಜ್ಯದಲ್ಲಿ ಇಷ್ಟು ಪ್ರಮಾಣದ ಸಾಲ ಮನ್ನಾ ಯಾರು ಮಾಡಿದ್ದಾರೆ? ಉತ್ತರ ಪ್ರದೇಶ ಸಕರ್ಾರ 2017ರ ಜೂನ್ನಲ್ಲೇ ಸಾಲಮನ್ನಾದ ಆದೇಶ ಹೊರಡಿಸಿದೆ ಆದರೆ ಇಲ್ಲಿಯವರೆಗೆ ಶೇ. 40ರಷ್ಟೂ ಸಾಲ ಮನ್ನಾ ಮಾಡಿಲ್ಲ. ರಾಜ್ಯದಲ್ಲಿ ಕೆಲವರು ಸಹಕಾರಿ ಸಂಘಗಳಲ್ಲಿ ರೈತರ ಹೆಸರಿನಲ್ಲಿ ಸಾಲ ಪಡೆದು ಮಜಾ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿ ಕೆಲವು ನಿಯಮ ರಚನೆ ಮಾಡಲು ಸಮಯ ಬೇಕು ಎಂದು ಅವರು 10 ವರ್ಷಗಳಿಂದ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮರಳು ನೀತಿ ಜಾರಿ ಮಾಡುತ್ತೇವೆ ಎಂದಿದ್ದರು. ಆದರೆ ಅಂದಿನಿಂದ ಇಲ್ಲಿಯವರೆಗೂ ಮರಳು ಸಮಸ್ಯೆ ನಿಂತಿಲ್ಲ. ರಾಯಚೂರಿನ ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಧಿಕಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಜೊತೆ ಅಂದು ರಾತ್ರಿ ಮಾತನಾಡಿದ್ದು ಈಗಾಗಲೇ ಟಿಪ್ಪರ್ ಚಾಲಕನ ಬಂಧಿಸಲಾಗಿದೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಕೆಲವು ಭಾಗಗಳಲ್ಲಿ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ ಅದರಲ್ಲಿ ರಾಯಚೂರು, ಕೊಪ್ಪಳ, ಕೋಲಾರ ಜಿಲ್ಲೆಗಳಲ್ಲಿ ಏಗ್ಗಿಲ್ಲದೇ ಸಾಗಿದೆ, ಮರಳು ದಂಧೆಕೋರರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳನ್ನು ನಾನು ಗಮನಿಸಿದ್ದೇನೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಟ್ಟದಲ್ಲಿ ಕೆಲವು ತಪ್ಪುಗಳಿವೆ, ಜನಪ್ರತಿನಿಧಿಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ, ಜನರಿಗೆ ಮರಳು ಸುಲಭವಾಗಿ ಸಿಗಬೇಕು ಇಲ್ಲವಾದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದಶರ್ಿಯನ್ನು ನೇರ ಹೊಣೆಗಾರರನ್ನಾಗಿ ಮಾಡುವೆ ಎಂದ ಅವರು ಮರಳು ದಂಧೆಗೆ ಹಣದ ಪ್ರೋತ್ಸಾಹವಿದೆ ಇದನ್ನು ಒಂದೇ ದಿನದಲ್ಲಿ ನಿನರ್ಾಮ ಮಾಡಲು ಸಾಧ್ಯವಿಲ್ಲ, ಮರಳು ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳ ಜೊತೆಗೆ ಎರಡು ರಿಂದ ಮೂರು ಬಾರಿ ಸಭೆ ನಡೆಸಿದ್ದೇನೆ ಈ ಸಮಸ್ಯೆಯನ್ನು ಬಗೆಹರಿಸಲು ನನಗೆ ಸ್ವಲ್ಪ ಸಮಯ ಬೇಕು ಎಂದರು.

ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಪ್ರದೀಪ್ಗೌಡ ಮಾಲಿಪಾಟೀಲ್, ಕೆ.ಎಂ.ಸೈಯದ್, ಜಿಲ್ಲಾ ಜೆಡಿಎಸ್ ಕಾಯರ್ಾಧ್ಯಕ್ಷ ವಿರೇಶ ಮಹಾಂತಯ್ಯನಮಠ, ಮುಖಂಡರಾದ ಕರಿಯಣ್ಣ ಸಂಗಟಿ, ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್,ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಜಿಲ್ಲಾ ಜೆಡಿಎಸ್ ವಕ್ತಾರ ಮೌನೇಶ ಎಸ್.ವಿ. ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಕುರಗೋಡ ರವಿ, ನಗರ ಬ್ಲಾಕ್ ಅಧ್ಯಕ್ಷ ಎಂ.ಕಾಟನ್ ಪಾಶ, ಜಿಲ್ಲಾಧಿಕಾರಿ ವಿ.ಸುನೀಲಕುಮಾರ, ಎಸ್ಪಿ ರೇಣುಕಾ ಸುಕುಮಾರ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.