ವಡ್ಡರಬಂಡೆ ರಾಜಕಾಲುವೆ ಸೇತುವೆ ಪುನರ್ ನಿರ್ಮಿಸಲು ಒತ್ತಾಯ

Waddarabande Rajkaluve bridge forced to rebuild

ವಡ್ಡರಬಂಡೆ ರಾಜಕಾಲುವೆ ಸೇತುವೆ ಪುನರ್ ನಿರ್ಮಿಸಲು ಒತ್ತಾಯ

ಬಳ್ಳಾರಿ 22:  ನಗರದ ವಾರ್ಡ್‌ ನಂ. 15, ಬಾಲಾಜಿ ರಾವ್ ರಸ್ತೆ ಕೊನೆಯ ಭಾಗದಲ್ಲಿ ವಡ್ಡರಬಂಡೆ ರಾಜ್ ಕಾಲುವೆ ರಸ್ತೆಯಲ್ಲಿ ದೊಡ್ಡ ಗುಂಡಿ ತೆಗೆದು ಸುಮಾರು ಒಂದು ತಿಂಗಳಾದರೂ ಕಾಮಗಾರಿ ಕಾರ್ಯ ಪ್ರಾರಂಭ ಮಾಡಿರುವುದಿಲ್ಲ ಏಕೆ.ಈ ರಸ್ತೆಯು ಮಧ್ಯಭಾಗದಲ್ಲಿರುವುದರಿಂದ ಹಾಗೂ ಅಕ್ಕ-ಪಕ್ಕದಲ್ಲಿ ಗ್ಯಾರೇಜ್ಗಳು ಮತ್ತು ಲಗೇಜ್ ಆಟೋಗಳು ಮತ್ತು ಭಾರಿ ವಾಹನಗಳು ನಿಲ್ಲ್ಲುವುದರಿಂದ ಈ ಸದರಿ ರಸ್ತೆಯಲ್ಲಿ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಹಾಗೂ ಓಡಾಡುವುದಕ್ಕೆ ತುಂಬಾ ತೊಂದರೆಯಾಗುತ್ತದೆ.ಇದನ್ನು ಸರಿಪಡಿಸುವುದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾಕೇ ನಿರ್ಲಕ್ಷ್ಯತನ ತೋರುತ್ತಿದ್ದಾರೆನ್ನುವುದು ತಿಳಿಯುತ್ತಿಲ್ಲ, ಒಂದು ವೇಳೆ ರಾತ್ರಿ ಸಮಯದಲ್ಲಿ ಅಪಘಾತವಾದರೇ ಅದಕ್ಕೆ ಯಾರು ಹೊಣೆಗಾರರು ? ಆದ್ದರಿಂದ ಮಾನ್ಯರಾದ ತಾವುಗಳು ದಯಮಾಡಿ ಸದರಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಮೇಯರ್ ನಂದೀಶ್ ಅವರಿಗೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ  ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರರೆಡ್ಡಿ, ಎಸ್‌.ಕೃಷ್ಣ, ಜಿ.ಎಂ. ಭಾಷ, ಪಿ. ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ, ಶ್ರೀನಿವಾಸರೆಡ್ಡಿ ಎಂ, ಎಂ.ಕೆ. ಜಗನ್ನಾಥ, ಪಿ. ನಾರಾಯಣ,ಕೆ. ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಆಗಮಿಸಿದ್ದರು.