ಸಮಗ್ರ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ: ಪಿಡಿಒ ಅಂಬಿಗೇರ

ಲೋಕದರ್ಶನ ವರದಿ:-

ಮತದಾನ ನಿಮ್ಮ ಹಕ್ಕು ಹಾಗೂ ಕರ್ತವ್ಯವಾಗಿದ್ದು,ಯಾವುದೇ ಆಮಿಷಗಳಿಗೆ ಒಳಗಾಗದೇ ವಿವೇಚನೆಯಿಂದ ಮತ ಹಾಕಬೇಕು. ಮತದಾನ ಒಂದು ರೀತಿಯ ದೇಶಕಟ್ಟುವ ಪ್ರಕ್ರಿಯೇಯಾಗಿದ್ದು,ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಲಿಸಲು ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಶಿರೋಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ವಾಯ್.ಅಂಬಿಗೇರ ಹೇಳಿದರು.

   ಅವರು ಜಿಲ್ಲಾ ಆಡಳಿತ,ಜಿಲ್ಲಾ ಸ್ವಿಪ್ ಘಟಕದ ಆದೇಶನ್ವಯ ಶಿರೋಳ ಗ್ರಾ.ಪಂ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಅಭಿಯಾನದ ಪ್ರಯುಕ್ತ ನಡೆದ ರಂಗೋಲಿ ಸ್ಪಧರ್ೆ ಯನ್ನು ಉದ್ಘಾಟಿಸಿ ಮಾತನಾಡಿದರು. 18 ವರ್ಷ ತುಂಬಿದ ಪ್ರತಿಯೊಬ್ಬರು ಹಾಗೂ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿದವವರು ಮತದಾನ ಪ್ರಕ್ರಿಯೇಯಲ್ಲಿ ತಪ್ಪದೇ ಭಾಗವಹಿಸಬೇಕು. ಸಮಗ್ರ ಭಾರತ ನಿಮರ್ಾಣಕ್ಕಾಗಿ ಮತದಾನ ಮಾಡಿ,ಸೂಕ್ತ ಅಭ್ಯಥರ್ಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೇ ಎಂದರು.

   ಬಳಿಕ ಉತ್ತಮವಾಗಿ ಬಿಡಿಸಿದ ರಂಗೋಲಿಯನ್ನು ಆಯ್ಕೆ ಮಾಡಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ವಾಯ್.ಅಂಬಿಗೇರ,ಕಾರ್ಯದಶರ್ಿ ಎಸ್.ಎಸ್.ಅಡಳಟ್ಟಿ,ಎಸ್.ಡಿ.ಎ ಚಾಂದಸಾಬ ಆಸಂಗಿ,ಗ್ರಾಮದ ಹಿರಿಯರಾದ ವೆಖಣ್ಣ ಫಡತಾರೆ,ಬಸಪ್ಪ ವಾಲಿಮರದ,ಹಣಮಂತ ಸಾವಂತ್ರಿ,ಪ್ರೌಢಶಾಲೆಯ ಮುಖ್ಯಗುರುಗಳಾದ ಎ.ಆರ್.ಚಬ್ಬಿ,ಅಂಗನವಾಡಿ ಮತ್ತು ಆಶಾ ಕಾರ್ಯಕತರ್ೆಯರು,ಶಾಲಾ ಮಕ್ಕಳು ಮತ್ತು ಗ್ರಾಪಂ ಸಿಬ್ಬಂದಿ ವರ್ಗದವರು ಪಾಲ್ಗೋಂಡಿದ್ದರು. 

    ಕಾರ್ಯಕ್ರಮವನ್ನು ಅರುಣ ವಂದಾಲ ನಿರೂಪಿಸಿದರು. ಶ್ರೀಶೈಲ ಹುಣಶ್ಯಾಳ ವಂದಿಸಿದರು.