ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಕಡ್ಡಾಯ : ಬಾಗಲಕೋಟಿ

ಲೋಕದರ್ಶನ ವರದಿ

ಬೆಳಗಾವಿ05, ಶೇಡಬಾಳ : ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಯೋಗ್ಯ ಅಭ್ಯಥರ್ಿಗಳನ್ನು ಆಯ್ಕೆ ಮಾಡುವಂತೆ ಶೇಡಬಾಳ ಪಟ್ಟಣ ಪಂಚಾಯತ  ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಕರೆ ನೀಡಿದರು. 

ಅವರು ಶುಕ್ರವಾರದಂದು ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಎಸ ವಿ ಇ ಇ ಸಿ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಕಾಗವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ  ಮತದಾನ ಜಾಗೃತಿ ಕಾರ್ಯಕ್ರಮದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಕಾಗವಾಡ ಸಿ ಡಿ ಪಿ ಓ  ಡಾ ಸುರೇಶ ಕದ್ದು  ಮಾತನಾಡಿ ದೇಶದ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಅಭ್ಯಥರ್ಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿ ಮತದಾರರ ಮೇಲಿದೆ. ಆದ್ದರಿಂದ ಮತದಾರರು ಮತದಾನದಿಂದ ದೂರ ಉಳಿಯದೇ ಕಡ್ಡಾಯವಾಗಿ ಮತ ಚಲಾಯಿಸಿ ಯೋಗ್ಯ ಅಭ್ಯಥರ್ಿಯನ್ನು ಆಯ್ಕೆಗೊಳಿಸುವಂತೆ ಕರೆ ನೀಡಿದರು. 

  ಗ್ರಾಮ ಲೇಕ್ಕಾಧಿಕಾರಿ ಎಸ,ಬಿ ಬಯನಾಯಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಾಥಾದಲ್ಲಿ ಅಂಗನವಾಡಿ, ಆಶಾ ಕಾರ್ಯಕತರ್ೆಯರು   "ನಮ್ಮ ಮತ ನಮ್ಮ ಹಕ್ಕು ' ಮೊದಲಾದ ಸ್ಲೋಗನಗಳನ್ನು ಮೆಹಂದಿಯಿಂದ ಕೈ ಮೇಲೆ ಬರೆದುಕೊಂಡು  ಮತದಾನದ ಜಾಗೃತಿ ಮಾಡಿದರು.