ಲೋಕದರ್ಶನ ವರದಿ
ರಾಣೇಬೆನ್ನೂರು18: ವಿಶ್ವದಲ್ಲಿಯೇ ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಈ ಭಾರತ ದೇಶದಲ್ಲಿ ಪ್ರಜಾಪ್ರಭುತ್ತವ ಇನ್ನಷ್ಟು ಗಟ್ಟಿಗೊಳ್ಳಲು ಪ್ರತಿಯೊಬ್ಬ ಪ್ರಜೆಯು ಚುನಾವಣೆಯಲ್ಲಿ ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು. ಅಂದಾಗ ಮಾತ್ರ ಮತದಾನದ ಹಕ್ಕು ನೀಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಜಿಪಂ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಕೆ.ಲೀಲಾವತಿ ಹೇಳಿದರು.
ಗುರುವಾರ ಮತದಾರರ ಜಾಗೃತಿಗಾಗಿ ಕರಪತ್ರ ವಿತರಣೆ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ ಕುರಿತಾದ ಮತದಾನ ಜಾಗೃತಿಯ ಸಂಕಲ್ಪ ಪತ್ರ ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂವಿಧಾನವು ನಮಗೆ ಬಹಳಷ್ಟು ಹಕ್ಕುಗಳನ್ನು ಕೊಟ್ಟಿದೆ, ಅದಕ್ಕಾಗಿ ನಾವೆಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ನೀಡಬೇಕು ಎಂದರು.
ಮತದಾನ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗುವುದು. ದೇಶಕ್ಕೂ ಒಳಿತಾಗುವುದು, ಕಾರಣ ಎ.23ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮದ ಆನಂತರ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿಮರ್ಿಸಿ ಮತದಾನದ ಜಾಗೃತಿ ಮಾಡಲಾಯಿತು. ತಾಪಂನಿಂದ ಹೊರಟ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ತಾಪಂ ಇಓ ಡಾ. ಬಸವರಾಜ ಡಿ.ಸಿ, ಜಿಲ್ಲಾ ಯೋಜನಾಧಿಕಾರಿ ಡಾ.ಪರಮೇಶ ಹುಬ್ಬಳ್ಳಿ, ಬಿಇಓ ಶ್ರೀಧರ ಎನ್, ಚುನಾವಣಾಧಿಕಾರಿ ಅಭೀದ, ನಗರಸಭೆ ಪೌರಾಯುಕ್ತ ಡಾ. ಮಹಾಂತೇಶ ಎನ್, ಅಶೋಕ ನಾರಜ್ಜಿ ಸೇರಿದಂತೆ, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು, ವಿವಿಧ ಗ್ರಾಪಂಗಳ ಅಭಿವೃದ್ದಿ ಅಧಿಕಾರಿಗಳು ಚುನಾವಣಾ ಮತ್ತು ಸ್ವೀಪ್ ಸಿಬ್ಬಂದಿಗಳು ಮತ್ತಿತರರು ಇದ್ದರು.