ಲೋಕದರ್ಶನವರದಿ
ರಾಣೇಬೆನ್ನೂರ 26: ಈ ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಉತ್ತಮ ಅಭ್ಯಥರ್ಿಗಳ ಆಯ್ಕೆಗಾಗಿ ಕಡ್ಡಾಯ ಮತದಾನ ಪದ್ದತಿಯನ್ನು ಸರಕಾರ ಇಲ್ಲವೇ ಚುನಾವಣಾ ಆಯೋಗವು ಜಾರಿಗೊಳಿಸಬೇಕು. ಇದಕ್ಕೆ ಕಟ್ಟುನಿಟ್ಟಿನ ಕಾನೂನು ಹೊರಡಿಸಿದಾಗ ಮಾತ್ರ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಲು ಸಹಕಾರಿಯಾಗುತ್ತದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಆಗ್ರಹಿಸಿದ್ದಾರೆ.
ಸರಕಾರವು ಮತದಾನ ಪ್ರಮಾಣ ಹೆಚ್ಚಳಕ್ಕೆ ಹಾಗೂ ಜಾಗೃತಿಗಾಗಿ ಸಹಸ್ರಾರು ಕೋಟಿ ರುಗಳನ್ನು ವ್ಯ ಮಾಡಿದರೂ ಸಹ ತೃಪ್ತಿದಾಯಕವಾದ ಮತದಾನವಾಗುತ್ತಿಲ್ಲ. ಬೆಂಗಳೂರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಅಕ್ಷರಸ್ಥರು, ಉದ್ಯಮಿಗಳು, ನೌಕರರು ಅಧಿಕ ಸಂಖ್ಯೆಯಲ್ಲಿದ್ದರೂ ಇತ್ತೀಚೆಗೆ ಜರುಗಿದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ನೋವಿನ ಸಂಗತಿಯಾಗಿದೆ ಎಂದರು.
ಯಾವ ಒಬ್ಬ ಅಭ್ಯಥರ್ಿಗೆ ಮತ ಹಾಕಲು, ಇಲ್ಲವೇ ಒಂದು ಪಕ್ಷಕ್ಕೆ ಮತ ನೀಡಲು ಮುಜುಗರವಾದರೂ ಸಹ ನೋಟಾ ಪದ್ಧತಿ ಇದ್ದರೂ ಇದರ ಬಳಕೆಯೂ ಆಗಿಲ್ಲ. ಅವರಿಗೆ ದೇಶಾಭಿಮಾನ ಬೇಡವಾಗಿದೆ.
ಕಾರಣ ಯಾರೇ ಆಗಲಿ ಮತದಾನ ಮಾಡದಿದ್ದರೂ ಅಂತಹವರಿಗೆ ಸರಕಾರದ ಸೌಲಭ್ಯಗಳನ್ನು ಕಡಿತಗೊಳಿಸಬೇಕು, ಸರಕಾರಿ ನೌಕರರಾದರೆ ಅವರಿಗೆ ಹಿಂಬಡ್ತಿ ನೀಡಬೇಕು ಎಂದರು.
ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಶೇ.70ಕ್ಕೂ ಅಧಿಕ ಪ್ರಮಾಣದಲ್ಲಿ ಮತದಾನವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕ್ಷೇತ್ರ ವ್ಯಾಪ್ತಿಯ 8ವಿಧಾನಸಭಾ ಕ್ಷೇತ್ರಗಳಲ್ಲೂ ಉತ್ತಮ ಮತ್ತು ಶಾಂತಿಯುತ ಮತದಾನವಾಗಿರುವುದು ಶ್ಲಾಘನೀಯವಾಗಿದೆ. ಮತದಾರರೂ ಸಹ ಹೆಚ್ಚು ಜಾಗೃತಗೊಂಡು ಇಷ್ಟೊಂದು ಪ್ರಮಾಣದಲ್ಲಿ ಮತದಾನವಾಗಲು ಕಾರಣವಾಗಿದೆ ಎಂದರು
ಅಕ್ರಮ ಚಟುವಟಿಕೆಗಳಿಗೂ ಆಸ್ಪದ ನೀಡದೇ ಉತ್ತಮ ಕಾರ್ಯನಿರ್ವಹಿಸಿ ಯಶಸ್ವಿಯಾಗಿ ಚುನಾವಣೆ ನಡೆಸಲು ಕಾರಣಿಕರ್ತರಾದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಎಸ್ಪಿ ಕೆ.ಪರಶುರಾಮ, ಎಎಸ್ಪಿ ಜಗದೀಶ, ಸಿಇಓ ಕೆ ಲೀಲಾವತಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ಸ್ವೀಪ್ ಅಧಿಕಾರಿಗಳ, ಸಿಬ್ಬಂದಿಗಳ ಶೃಮ ಶ್ಲಾಘನೀಯವಾಗಿದ್ದು, ಅವರಿಗೆ ಕ್ಷೇತ್ರದ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಪಾಟೀಲರು ತಿಳಿಸಿದ್ದಾರೆ.