ಗದಗ 16: ಗದಗ ಜಿಲ್ಲೆಯಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಮತ ಪರಿಷ್ಕರಣೆಯಲ್ಲಿ ಯುವ ಜನರು ಸೇರಿದಂತೆ ಹೆಸರು ಇಲ್ಲದ ಅರ್ಹ ಮತದಾರರ ಸೇರ್ಪಡೆಗೆ ಇದೇ ದಿ. ರವಿವಾರ ದಿ. 18ರಂದು ಜಿಲ್ಲೆಯ ಎಲ್ಲ 959 ಮತಗಟ್ಟೆಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯದ ಕೈಗಾರಿಕಾ ಆಯುಕ್ತರು ಹಾಗೂ ಜಿಲ್ಲೆಯ ಮತಪಟ್ಟಿ ಪರಿಷ್ಕರಣೆ ವೀಕ್ಷಕರಾದ ದರ್ಪಣ ಜೈನರವರು ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಮತಪಟ್ಟಿ ಪರಿಷ್ಕರಣಾ ಸಂಬಂಧಿತ ಜಿಲ್ಲಾ ಸ್ವೀಪ ಸಮಿತಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಸಭೆಯಲ್ಲಿ ಜಿಲ್ಲೆಯ ಮತಪಟ್ಟಿ ಪರಿಷ್ಕರಣೆ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜನಸಂಖ್ಯೆ ಪ್ರಮಾಣಕ್ಕನುಗುಣವಾಗಿ 01-01-2019ಕ್ಕೆ 18 ವರ್ಷ ಪೂರ್ಣಗೊಳ್ಳುವ 30 ಸಾವಿರಕ್ಕೂ ಹೆಚ್ಚಿನ ಯುವಜನರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಬೇಕಾಗಿದ್ದು ಇದಕ್ಕಾಗಿ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಗತ್ಯದ ಕ್ರಮ ಜರುಗಿಸಬೇಕು. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕುರಿತಂತೆ ದುರ್ಬಲ, ಕೆಲಸಕ್ಕಾಗಿ ಹೊರಗೆ ಹೋಗುವವರ ಸಮುದಾಯಗಳನ್ನು ಗುರುತಿಸಿ ಅವರನ್ನು ಮತಪಟ್ಟಿಗೆ ಸೇರಿಸಲು ಹಾಗೂ ಜನಸಂಖ್ಯೆಗೆ ಆಧರಿಸಿ ವಯೋಮಿತಿ ರೀತ್ಯ ಇರಬೇಕಾದ ಮತದಾರರು ಕಡಿಮೆ ಇದ್ದಲ್ಲಿ ಆ ಕುರಿತು ಪರಿಶೀಲಿಸಿ ಕ್ರಮ ಜರುಗಿಸಬೇಕು. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿ ಕುರಿತಂತೆ ಬಂದಂತಹ ದೂರುಗಳನ್ನು ಅವಲೋಕಿಸಿ ಆ ಕುರಿತ ಪರಿಹಾರ ಕ್ರಮಗಳನ್ನು ಕೈಕೊಳ್ಳಬೇಕು. ವಿಶೇಷವಾಗಿ ಮತಗಟ್ಟೆ ಮಟ್ಟದಲ್ಲಿ ಮತದಾರರ ಪಟ್ಟಿ ಎಲ್ಲ ತರಹದ ದೋಷರಹಿತವಾಗಿರಲು ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಣಾ ಅಧಿಕಾರಿಗಳು ಹಾಗೂ ಸಂಬಂಧಿತ ರಾಜಕೀಯ ಪಕ್ಷಗಳ ಭೂತ ಮಟ್ಟದ ಪ್ರತಿನಿಧಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಒಟ್ಟಾರೆಯಾಗಿ ಜಿಲ್ಲೆಯ ನಾಲ್ಕು ವಿಧಾನಸಭಾಗಳ ಮತದಾರರ ಯಾದಿಗಳು ದೋಷ ರಹಿತ ಹಾಗೂ ಎಲ್ಲ ಅರ್ಹ ಮತದಾರರಿಗೆ ಅವಕಾಶ ಒದಗಿಸುವಂತೆ ನೋಡಿಕೊಳ್ಳಬೇಕು ಎಂದು ದರ್ಪಣ ಜೈನ ನುಡಿದರು.
ತದನಂತರ ಜರುಗಿದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು ಶಾಂತ ಹಾಗೂ ಮುಕ್ತ ಚುನಾವಣೆಗೆ ಮತದಾರರ ಪಟ್ಟಿಯೇ ಮೂಲವಾಗಿದ್ದು ಅದರ ಪರಿಷ್ಕರಣೆ ಸಂದರ್ಭದಲ್ಲ ವಿವಿಧ ರಾಜಕೀಯ ಪಕ್ಷಗಳ ಭೂತ ಮಟ್ಟದ ಪ್ರತಿನಿಧಿಗಳು ಸರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವುದೇ ದೂರೂ ಅಥವಾ ಆತಂಕಗಳಿಗೆ ಅವಕಾಶವಿರುವುದಿಲ್ಲ. ಆದುದರಿಂದ ರಾಜಕೀಯ ಪಕ್ಷಗಳ ಪ್ರತಿನಿದಿಗಳು ನವೆಂಬರ 20ರ ವರೆಗೆ ಇರುವ ಮತಪರಿಷ್ಕರಣೆಯ ಈ ಅವಕಾಶವನ್ನು ಉಪಯೋಗಿಸಿಕೊಂಡು ವಿಧಾನ ಸಭಾ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ಕುರಿತಂತೆ ಇರುವ ದೋಷಗಳ ಕುರಿತು ನಿಗದಿತ ನಮೂನೆಯಲ್ಲಿ ಅಜರ್ಿಗಳನ್ನು ಸಲ್ಲಿಸುವ ಮೂಲಕ ಅವುಗಳನ್ನು ಪರಿಹರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಲು ದರ್ಪಣ ಜೈನ್ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿ ಮತದಾರರ ಪರಿಷ್ಕರಣೆ ಕುರಿತಂತೆ ತಮ್ಮ ಸಲಹೆ ಹಾಗೂ ದೂರುಗಳ ಕುರಿತು ಚಚರ್ೆ ನಡೆಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಜಿಲ್ಲಾ ಸ್ವೀಪ ಸಮಿತಿ ಸದಸ್ಯ ಕಾರ್ಯದಶರ್ಿ ಹಾಗೂ ನೊಡೆಲ್ ಅಧಿಕಾರಿ ಟಿ.ದಿನೇಶ ಸೇರಿದಂತೆ ಎಲ್ಲ ತಹಶಿಲ್ದಾರರು ಹಾಗೂ ಚುನಾವಣಾ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.