ಮತದಾರ ದಿನಾಚರಣೆ: ಯುವ ಮತದಾರರಲ್ಲಿ ಉತ್ಸಾಹ ಹೆಚ್ಚಿಸಲಿ

ಗದಗ 09:  ಕೇಂದ್ರ ಚುನಾವಣಾ ಆಯೋಗದ ನಿದರ್ೇಶನಗಳ ರೀತ್ಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳು ದೋಷರಹಿತವಾಗಿರಲು ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ರಾಜ್ಯದ ಕೈಗಾರಿಕಾ ಆಯುಕ್ತ ಹಾಗೂ ಗದಗ ಜಿಲ್ಲೆ ಮತದಾರ ಪಟ್ಟಿ ವೀಕ್ಷಕರಾದ ದರ್ಪಣ್ ಜೈನ್ ನುಡಿದರು.

ಜಿಲ್ಲೆಯ ನಾಲ್ಕು  ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ಪರಿಷ್ಕರಣೆ,  ಜನೆವರಿ 25 ರಂದು ಆಚರಿಸುವ ಮತದಾರ ದಿನಚರಣೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.  ಅರ್ಹರ ಹೆಸರು ಇಲ್ಲದಿದ್ದರೆ ಹೆಸರು ಸೇರಿಸಲು ಅಜರ್ಿ ಹಾಗು ಅಗತ್ಯದ ದಾಖಲೆ, ಮತದಾರ ಪಟ್ಟಿಯಲ್ಲಿ ಫೋಟೋ ಸರಿಯಿರದಿದ್ದರೆ ಅದನ್ನು ಬದಲಿಸುವ ಹಾಗೂ ಮೃತರಾದ ಮತದಾರರ ಹೆಸರು ಕಡಿಮೆ ಮಾಡುವುದು ಮುಖ್ಯವಾಗಿದ್ದು ಮತಗಟ್ಟೆ ಅಧಿಕಾರಿಗಳು ಈ ಕುರಿತು ಜವಾಬ್ದಾರಿಯಿಂದ ಹಾಗೂ ಆಸಕ್ತಿಯಿಂದ  ಕಾರ್ಯನರ್ಿಹಿಸಬೇಕು.  ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಆಸಕ್ತಿ ತೋರದ, ವಿಳಂಬ ಕಾರ್ಯ ಮಾಡುತ್ತಿರುವ ಮತಗಟ್ಟೆ ಹಾಗೂ ಮೇಲ್ವಿಚಾರಕರನ್ನು ಗುರುತಿಸಿ ಕ್ರಮ ಜರುಗಿಸಬೇಕು. ಯುವ ಜನರು ಹಾಗೂ ಅರ್ಹರಿದ್ದು ಮತದಾರ ಪಟ್ಟಿಯಲ್ಲಿ ಸೇರದೇ ಇರುವವರನ್ನು ಗುರುತಿಸಿ  ಮತದಾರರಾಗಿ ಸೇರ್ಪಡೆಗೊಳ್ಳಲು ಅಧಿಕಾರಿಗಳು ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳಲು ಮುಂದಾಗಬೇಕು.  ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಜಾಬ ಕಾರ್ಡ ಹೊಂದಿರುವ ಕುಟುಂಬದಲ್ಲಿ ಮತದಾರರಾಗಿ ಸೇರ್ಪಡೆ ಆಗಿರುವ ಕುರಿತು ವಿವಿದ ನಿಗಮ, ಇಲಾಖೆಗಳಿಂದ ಜಾರಿಗೊಳ್ಳುವ ಜನಪರ ಯೋಜನಾ ಸೌಲಭ್ಯಗಳ ಫಲಾನುಬವಿಗಳು ಅರ್ಹತೆ ಇದ್ದು ಮತದಾರರಾಗಿರುವ ಕುರಿತು ಪರಿಶೀಲನೆ ನಡೆಸಿ ಅಗತ್ಯದ ಕ್ರಮ ಜರುಗಿಸಲು ದರ್ಪಣ್ ಜೈನ್ ಸಲಹೆ ಮಾಡಿದರು.  ರಾಜಕೀಯ ಪಕ್ಷಗಳು ಮತದಾರ ಪಟ್ಟಿಗಳ ಕುರಿತು ನೀಡಿದ ಅಂಶಗಳ ಕುರಿತು ಕ್ರಮ ಕೈಕೊಂಡಿರುವುದನ್ನು ಅವರು ಪರಿಶೀಲಿಸಿದರು.

       ಮತದಾರ ದಿನಾಚರಣೆ:  ದಿ. 25 ರಂದು ಆಚರಿಸಲಾಗುವ ಮತದಾರ ದಿನಾಚರಣೆ ಸಕರ್ಾರಿ ಕಾರ್ಯಕ್ರಮವೆನಿಸದೇ ಯುವ ಮತದಾರರ ಉತ್ಸಾಹದ ದಿನವಾಗಿ ಆಚರಿಸಲು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳಲು ದರ್ಪಣ್ ಜೈನ್ ಸೂಚಿಸಿದರು.  ಜಿಲ್ಲೆಯಲ್ಲಿ ಇತ್ತಿಚಿನ ಪರಿಷ್ಕರಣೆಯಲ್ಲಿ 9  ಸಾವಿರಕ್ಕೂ ಹೆಚ್ಚಿನ ಯುವ ಮತದಾರರಿದ್ದು ಅವರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತದಾನದ ಮಹತ್ವದ ಕುರಿತು  ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಕಾರ್ಯಕ್ರಮಗಳನ್ನು  ಹಾಕಿಕೊಳ್ಳಬೇಕು.  ಒಟ್ಟಾರೆಯಾಗಿ ಮತಪಟ್ಟಿ ಪರಿಷ್ಕರಣೆ, ಹೊಸ ಅರ್ಹ ಮತದಾರ ಸೇರ್ಪಡೆ ಹಾಗೂ ಮತದಾನದ ಜಾಗೃತಿಗಾಗಿ ಗದಗ ಜಿಲ್ಲೆ ಇತರರಿಗೂ ಮಾದರಿಯಗುವಂತೆ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಗದಗ ಜಿಲ್ಲೆ ಮತದಾರ ಪಟ್ಟಿ ವೀಕ್ಷಕ ಹಾಗೂ ರಾಜ್ಯದ  ಕೈಗಾರಿಕಾ ಆಯುಕ್ತ ದರ್ಪಣ್ ಜೈನ್ ನುಡಿದರು.

        ಜಿಲ್ಲಾದಿಕಾರಿ ಎಂ.ಜಿ. ಹಿರೇಮಠ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಜನೆವರಿ 15 ರಂದು ಪ್ರಕಟಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ,  ಜಿಲ್ಲೆಯಲ್ಲಿ ಯುವ ಮತದಾರರ ಸೇರ್ಪಡೆ, ಜಾಗೃತಿಗೆ ಕಾಲೇಜುಗಳಲ್ಲಿ ಕೈಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ  ಕುರಿತು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ,  ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ  ಕಾರ್ಯದಶರ್ಿ   ಟಿ. ದಿನೇಶ, ತಹಶೀಲ್ದಾರರುಗಳಾದ ಹೊಳೆಪ್ಪಗೋಳ, ಅಮರಾವದಗಿ, ಶ್ರೀನಿವಾಸ ಮೂತರ್ಿ, ಶಕುಂತಲಾ ಚೌಗಲೆ, ಭ್ರಮರಾಂಬ ಗುಬ್ಬಿಶೆಟ್ಟರ್ , ಚುನಾವಣಾ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.