ಗೋಕಾಕ ಜುಲೈ 12: ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮುಂದಿನ 8 ದಿನಗಳ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ರಾಜ್ಯದ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಗೋಕಾಕ್ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೋವಿಡ್ ಟಾಸ್ಕ್ ಫೋಸರ್್ ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಸಚಿವರು, ನಾಳೆ ಸೋಮವಾರ ರಾತ್ರಿಯಿಂದ ಮುಂದಿನ 8 ದಿನಗಳ ಕಾಲ ಸ್ವಯಂಪ್ರೇರಿತ ಲಾಕ್ ಡೌನ್ ನಡೆಯಲಿದೆ ಎಂದು ತಿಳಿಸಿದರು.
ಜೀವ ಇದ್ದರೆ ಮಾತ್ರ ಜೀವನ. ಹಾಗಾಗಿ ಈ ಕೊರೋನಾ ಸೋಂಕು ನಿವಾರಿಸಲು ಅನಿವಾರ್ಯವಾಗಿ ಲಾಕ್ ಡೌನ್ ಘೋಷಿಸಬೇಕಾಗಿದೆ. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಲಹೆ ಪಡೆಯಲಾಗಿದೆ. ಜನರು ಸಹಕರಿಸಬೇಕೆಂದು ಸಚಿವರು ಕೋರಿದರು.
ಈ ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಅಗತ್ಯವಿರುವ ಸಾಮಗ್ರಿಗಳು ದೊರೆಯಲಿವೆ. ಆದರೆ ಎಲ್ಲರೂ ಸಾಮಾಜಿಕ ವ್ಯಕ್ತಿಗತ ಅಂತರ ಕಾಪಾಡಿಕೊಂಡಿರಬೇಕು. ಕಾರಣವಿಲ್ಲದೇ ಯಾರೂ ಮನೆಯಿಂದ ಹೊರಗೆ ಬರಬಾರದು. ಸೋಂಕು ಕಡಿಮೆ ಮಾಡಲು ಇದೊಂದೇ ದಾರಿ. ಆದ್ದರಿಂದ ಸಕರ್ಾರದ ನಿಧರ್ಾರವನ್ನು ಪಾಲಿಸುವಂತೆ ಜನತೆಗೆ ಕರೆ ನೀಡಿದರು.
ಅನಗತ್ಯವಾಗಿ ಹೊರಬರುವವರ ಮೇಲೆ ಕ್ರಮ: ಮಂಗಳವಾರ ರಾತ್ರಿ 8ಗಂಟೆಯಿಂದ ಜಾರಿಯಾಗಲಿರುವ ಲಾಕ್ಡೌನ್ ಸಮಯದಲ್ಲಿ ಅನಾವಶ್ಯಕವಾಗಿ ಸುತ್ತಾಡುವವರ ಮೇಲೆ ನಿದರ್ಾಕ್ಷಿನ್ಯವಾಗಿ ಕ್ರಮ ಜರುಗಿಸುವಂತೆ ಸಚಿವ ರಮೇಶ ಜಾರಕಿಹೊಳಿ ಪೋಲಿಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಾಸ್ಕ ಖಡ್ಡಾಯ: ನಗರದಲ್ಲಿ ಮಾಸ್ಕ ಧರಿಸದೆ ಅಂಗಡಿಕಾರರು ವ್ಯಾಪಾರ ವಹಿವಾಟು ಮಾಡಬಾರದು. ನಗರದಲ್ಲಿ ಪಾನ್, ಗುಟ್ಕಾ, ಜದರ್ಾ ಸೇವಿಸಿ ಎಲ್ಲೆಂದರಲ್ಲಿ ಉಗುಳವರ ಮೇಲೆ ಕೇಸ್ ದಾಖಲಿಸಲಾಗುವದು. ಮಾಸ್ಕ ಧರಿಸದವರಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವದಾಗಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಸೂಚನೆ ನೀಡಿದರು.
ಟಾಸ್ಕ್ ಫೋಸರ್್ ಸಭೆಯಲ್ಲಿ ಗೋಕಾಕ ತಹಶಿಲ್ದಾರ್ ಪ್ರಕಾಶ ಹೊಳೆಯಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ಡಿಎಸ್ಪಿ ಮನೋಜನಕುಮಾರ ನಾಯ್ಕ, ಸಿಪಿಐ ಗೋಪಾಲ ರಾಠೋಡ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಹೆಗ್ಗನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವ್ಯಾಪಾರಸ್ಥರು, ನಗರ ಸಭೆ ಸದಸ್ಯರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು