ದಿವಾಳಿತನ ಸಂಹಿತೆ ತಿದ್ದುಪಡಿ ಸುಗ್ರೀವಾಜ್ಞೆಗೆ ಸಂಪುಟ ಅನುಮೋದನೆ

ನವದೆಹಲಿ, ಡಿ 24 - ದಿವಾಳಿತನ ಸಂಹಿತೆ, 2016 ಕ್ಕೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಪ್ರಕಟಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಈ ತಿದ್ದುಪಡಿ 2016ರ ನೀತಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ  ಮತ್ತು ನೀತಿಯ ಸರಳ ಅನುಷ್ಟಾನವನ್ನು ಖಾತರಿಪಡಿಸುತ್ತದೆ ಎಂದರು. 

 ಈ ತಿದ್ದುಪಡಿಯಲ್ಲಿ ದಿವಾಳಿತ ನಿರ್ಣಯದ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನ  ಕಾರ್ಪೊರೇಟ್ ಸಾಲಗಾರನ ಮಾಡಿರುವ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಡೆಯುತ್ತದೆ. ಈ ತಿದ್ದುಪಡಿ ದಿವಾಳಿಯಾಗಿರುವ ಸಂಸ್ಥೆಗಳು, ವ್ಯಕ್ತಿಗಳಿಂದ ಸಾಲವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಕೂಡ ಸರಳವಾಗಿಸುತ್ತದೆ. ಈ ನಿರ್ಣಯ ಸಂಸ್ಥೆಯ ಆಡಳಿತವನ್ನು ಬದಲಿಸಿದರೆ, ಅದನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.