ವಾಲಿಬಾಲ್ ಕೋಚ್ ಶಶಿಕಲಾ ವೇಣುಗೊಪಾಲ ನಾಯ್ಡು ಅವರಿಗೆ ಹೊರಕೇರಿ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನ

ವಾಲಿಬಾಲ್  ಕೋಚ್ ಶಶಿಕಲಾ ವೇಣುಗೊಪಾಲ ನಾಯ್ಡು ಅವರಿಗೆ ಹೊರಕೇರಿ ಶಿಕ್ಷಣ ಪ್ರತಿಷ್ಠಾನ  ವತಿಯಿಂದ ಸನ್ಮಾನ Volleyball coach Sasikala Venugopal Naidu honored by Horakere Education Foundation

         ಹುಬ್ಬಳ್ಳಿ 06:  ಜೈಂಟ್ಸ್‌  ಗ್ರುಪ್ ಆಫ್ ಹುಬ್ಬಳ್ಳಿ ಹೆಲ್ಪಿಂಗ್ ಹ್ಯಾಂಡ್ಸ್‌ ಮೂಲಕ ಹಲವಾರು ಉತ್ತಮ ಕಾರ್ಯ ಮಾಡುತ್ತಿರುವ,  ವಾಲಿಬಾಲ್  ಕೋಚ್, ಬ್ಲೂಡೈಮಂಡ್ ಸ್ಪೋರ್ಟ ್ಘ ಕಲ್ಚರಲ್ ಅಕಾಡೆಮಿಯ ಶಶಿಕಲಾ ವೇಣುಗೊಪಾಲ ನಾಯ್ಡು ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಶಾಲು, ಮಾಲಾರೆ​‍್ಣ ಮಾಡಿ,  ಗ್ರಂಥ ನೀಡಿ  ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿದರು,  ಅವರ  ಸಾಮಾಜಿಕ ಕಾರ್ಯಗಳು ಹಾಗೂ  ಕ್ರೀಡಾ ಜೀವನ ಸುಖಕರವಾಗಲೆಂದು ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಹಿರಿಯರಾದ ತಾರಾದೇವಿ ವಾಲಿ, ಪದ್ಮಜಾ ಉಮರ್ಜಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಉಪಾಧ್ಯಕ್ಷ ಚನ್ನಬಸಪ್ಪ ಧಾರವಾಡ ಶೆಟ್ಟರ,  ಡಾ. ನೇತ್ರಾವತಿ ಗಬ್ಬೂರು, ವೇಣುಗೋಪಾಲ, ರಾಜು, ಮುಂತಾದವರು ಭಾಗವಹಿಸಿದ್ದರು.  ಶಶಿಕಲಾ ವೇಣುಗೊಪಾಲ ನಾಯ್ಡು ಅವರು ವಾಲಿಬಾಲ್ ಆಟದಲ್ಲಿ ಪ್ರತಿಭಾನ್ವಿತ ಆಟಗಾರರಾಗಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಮೂರು ಭಾರಿ ಯುನಿವರ್ಸಿಟಿ ಬ್ಲೂ ಆಗಿದ್ದರು. ತಿಂಗಳ ಕಾಲ 25 ಮಕ್ಕಳಿಗೆ ಉಚಿತ ವಾಲಿಬಾಲ್ ಅಟದ ತರಬೇತಿ ನೀಡಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದ ಹತ್ತು ಬಡ ವಿದ್ಯಾರ್ಥಿನಿಯರಿಗೆ ಉಚಿತ ಊಟ, ವಸತಿ ನೀಡಿದ್ದಾರೆ. ತರಬೇತಿ ಸಮಯದಲ್ಲಿ ಬಂದ ಎಲ್ಲ ಖರ್ಚುವೆಚ್ಚ್ಗಳನ್ನು ತಾವೇ ಮಾಡಿದ್ದಾರೆ. ಶಿಬಿರಕ್ಕೆ ಸುಮಾರು 60ಸಾವಿರ ರೂಪಾಯಿಗಳಷ್ಟು ಖರ್ಚು ಮಾಡಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ವಾಲಿಬಾಲ್ನಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಂತೆ ತಯಾರು ಮಾಡುವ ನಿಟ್ಟಿನಲ್ಲಿ ನಿರತರಾಗಿದ್ದಾರೆ.