'ವಿಶ್ವಕ್ಕೆ ಭಾರತದ ಘನತೆ ಗೌರವ, ಸಂಸ್ಕೃತಿ ಪರಿಚಯಿಸಿದ ವಿವೇಕಾನಂದರು'

ಗದಗ 13: ಭಾರತದ ಸಂಸ್ಕೃತಿ, ಗೌರವ ಘನತೆಯನ್ನು ವಿಶ್ವಾದ್ಯಂತ ಪರಿಚಯಿಸಿ ಪಸರಿಸಿದ ವೀರ ಸನ್ಯಾಸಿ ವಿವೇಕಾನಂದರ ಧೈರ್ಯ ಮತ್ತು ಸ್ಥೈರ್ಯ ಯವ ಜನತೆಗೆ ಆದರ್ಶವಾಗಿವೆ ಎಂದು ಗದುಗಿನ ಜಗದ್ಗುರು ತೋಂಟದ ಸಿದ್ದರಾಮ ಸ್ವಾಮಿಜಿ ನುಡಿದರು.

ಗದಗ ಜಿಲ್ಲಾಡಳಿತ, ಜಿ.ಪಂ, ಯುವಜನ ಸಬಲೀಕರಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸ 125ನೇ ವಷರ್ಾಚರಣೆ ಸಮಿತಿಯ ಸಂಯುಕ್ತ ಆಶ್ರಯದಲ್ಲಿಂದು ಗದುಗಿನ ಎ.ಪಿ.ಎಂ.ಸಿ ಆವರಣದಲ್ಲಿನ ಸ್ವಾಮಿ ವಿವೇಕಾನಂದ ಭವನದಲ್ಲಿ  ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು  ಭರತ ಖಂಡವನ್ನು ಸಂಚರಿಸಿ ದೀನದಲಿತರನ್ನು ಸಂರಕ್ಷಿಸಲು, ಅಸಹಾಯಕರಿಗೆ ಸಹಾಯವಾಗಲು ಸ್ವಾಮಿ ವಿವೇಕಾನಂದರು ಬಹುವಾಗಿ ಶ್ರಮಿಸಿದವರು ಎಂದರು.

     ರಾಮಕೃಷ್ಣ ವಿವೇಕಾನಂದ ಗದಗ-ವಿಜಯಪುರ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ ಸ್ವಾಮಿ ವಿವೇಕಾನಂದರು ಅನುಭವದ ಅನುಭಾವ ಮೇಲೆ ಜೀವಿಸಿ ಯಾವುದೇ ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂಬುದನ್ನು ರುಜುವಾತಿಸಿದವರು ಎಂದರು. ಬೆಂಗಳೂರಿನ ಗಾಂಧೀ ಭವನದ ಉಪಾಧ್ಯಕ್ಷ ಜಿ.ಬಿ. ಶಿವರಾಜು ಮಾತನಾಡಿ ಯುವದಮನಿಗಳಲ್ಲಿ ವಿವೇಕಾನಂದರ ಸ್ಪೂತರ್ಿ ಸದಾ ಹರಿಯಬೇಕು. ಪರಿಶುದ್ದ ವ್ಯಕ್ತಿತ್ವದ ವಿವೇಕಾನಂದರು ನಮಗೇ ಸದಾ ಮಾರ್ಗದಶರ್ಿಗಳು ಎಂದರು.  

ಬೆೆಂಗಳೂರು ದಕ್ಷಿಣ ಪೋಲಿಸ ಮಹಾ ನಿದರ್ೇಶಕ ರವಿ ಚನ್ನಣ್ಣವರ ಮಾತನಾಡಿ ಅಹಂಕಾರ ಅಧಪತನಕ್ಕೆ ತಳ್ಳಿದರೆ, ವಿದ್ಯೆ, ವಿನಯ ಸರಳತೆ ವ್ಯಕ್ತಿ ಶಕ್ತಿಯಾಗಿ ಬೆಳೆಯಲು ಪ್ರೇರಣಾದಾಯಕವಾಗಿವೆ, ನಾವೂ ಸದಾ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. 

ವೃತ್ತಿ ಯಾವದೇ ಇರಲಿ ಅದನ್ನು ಪ್ರೀತಿಸಿ ಮನಸ್ಸನ್ನಾವರಿಸಿಕೊಂಡು, ಅದನ್ನೇ ಹಗಲು ರಾತ್ರಿ, ಕಷ್ಟ ಸುಖ ಎನ್ನದೇ ಜೀವಿಸುವುದೇ ಎಲ್ಲ ಯಶಸ್ಸುಗಳ ಹಿಂದಿನ ರಹಸ್ಯವಾಗಿದೆ.ವ್ಯವಸ್ಥೆಯನ್ನು ದೂಷಿಸುವ ಅಗತ್ಯ ಇಲ್ಲ. ಇಡೀ ಮಾನವ ನಾಗರಿಕತೆಯ ಶ್ರೇಷ್ಠ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಎಲ್ಲ ವ್ಯಕ್ತಿಗಳಿಗೆ ತಮ್ಮ ಇತಿ ಮಿತಿಗಳನ್ನೂ ಮೀರಿ ಮುನ್ನಡೆಯವ ಅವಕಾಶ ಇದ್ದೇ ಇದೇ. ಅದನ್ನು ಸಾಧಿಸುವ ಛಲ ನಮ್ಮಲ್ಲಿರಬೇಕು, ರಾಜ್ಯಕ್ಕೆ, ದೇಶಕ್ಕೆ ಇರುವ ವಾಷರ್ಿಕ ಬಜೆಟ್ ರೀತ್ಯ ವ್ಯಕ್ತಿ ಕೂಡಾ ತನ್ನ ವ್ಯಕ್ತಿತ್ವದ ಬಜೆಟನ್ನು ಹೊಂದಬೇಕು ಅದನ್ನು ಸಾಧಿಸಬೇಕು. ತಮ್ಮ ಜೀವನ ಪಯಣ ಹಾಗೂ ಯಶಸ್ಸಿನ ಹಿಂದೆ ತಮ್ಮ ಗುರು ಗದಗ-ವಿಜಯಪುರ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರ ಮಾರ್ಗದರ್ಶನ ಸದಾ ತಮ್ಮನ್ನು ಕೈ ಹಿಡಿದು ನಡೆಸಿದೆ. ಇಂತಹ ಸಾಧನೆ ಎಂತಹವರಿಗೂ ಸಾಧ್ಯವಿದೆ. ಯುವಜನರು ಈ ಎಲ್ಲ ಅಂಶಗಳ ಅರಿತು ಉತ್ತಮ ಧ್ಯೆಯ ಹೊಂದಿ ಸತತ ಸಾಧಕರಾಗಬೇಕು ಎಂದು ಚನ್ನಣ್ಣವರ ನುಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ ಜೀವನದಲ್ಲಿ ಯಶಸ್ಸು ಕಾಣಬೇಕಾದಲ್ಲಿ ಯುವಜನರು ತಾವೇನಾಬೇಕು ಎನ್ನುವ ಅಜೆಂಡಾ ರೂಪಿಸಿ ಅದನ್ನು ಕಾರ್ಯಗತಗೊಳಿಸಬೇಕು. ಒಳ್ಳೆಯವರಾಗಲು ನಿರಂತರವಾಗಿ ಪ್ರಯತ್ನಿಸಬೇಕು ಅದುವೇ ನಾವು ಸ್ವಾಮಿ ವಿವೇಕಾನಂದರಿಗೆ ಅಪರ್ಿಸುವ ಗೌರವಾಗಿದೆ ಎಂದರು. 

ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಮಿತಿ ಕಾಯರ್ಾಧ್ಯಕ್ಷ ಡಿ.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾರಂಭದ ಉದ್ದೇಶ ವಿವರಿಸಿ ನಾವೆಲ್ಲರೂ ಒಂದೇ ಗುರಿಯಡೆಗೆ ನಡೆಯುತ್ತಿರುವ ಪಥಿಕರು ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ ವಿವೇಕಾನಂದರ ಬಗೆಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅವರ ಕನ್ನಡ ಅನುವಾದಿತ ಕೃತಿಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಒದಗಿಸಿದ ರಾಜ್ಯ ಸಕರ್ಾರದ ಕಾರ್ಯ ನಿಜಕ್ಕೂ ಶ್ಲ್ಯಾಘ್ಯನೀಯ ಎಂದರು. ಗದಗ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸರ್ವರನ್ನು ಸ್ವಾಗತಿಸಿದರು.  ಇದೇ ಸಂದರ್ಭದಲ್ಲಿ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಅಂಗವಾಗಿ ಕಾಲೇಜು ವಿದ್ಯಾಥರ್ಿಗಳಿಗೆ ಎರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜೀವನ ಸಾಧನೆ ವಿಷಯಗಳ ಕುರಿತ ವಿವಿಧ ಸ್ಪಧರ್ೇಗಳ ವಿಜೇತ ಜಿಲ್ಲಾ ಮತ್ತು ತಾಲೂಕಾ ಮಟ್ಟದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪಂ.ಪುಟ್ಟರಾಜ ಸಂಗೀತ ವಿದ್ಯಾಲಯದ ಶಿಕ್ಷಕರು ನಾಡಗೀತೆ ಪ್ರಸ್ತುತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ರೂಪಿಸಿದರು.

ಗದಗ ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಉಪಾಧ್ಯಕ್ಷರಾದ ಶಕುಂತಲಾ ಮೂಲಿಮನಿ, ಗದಗ ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಸದಸ್ಯರಾದ ಶ್ರೀನಿವಾಸ ಹುಯಿಲಗೋಳ, ಗದಗ ಜಿ.ಪಂ. ಸಿ.ಇ.ಓ  ಮಂಜುನಾಥ ಚವ್ಹಾಣ,    ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಮಿತಿ ಕಾಯರ್ಾಧ್ಯಕ್ಷ ಡಿ.ಆರ್.ಪಾಟೀಲ, ಉಪಾಧ್ಯಕ್ಷ ಮಾಜಿ ಶಾಸಕ ಬಿ.ಆರ್.ಯಾವಗಲ್ಲ, ಅಲ್ಲದೇ ರವಿಕಾಂತ ಅಂಗಡಿ, ಜೆ.ಕೆ. ಜಮಾದಾರ,ರಂಗನಾಥ ಜನಪ್ರತಿನಿಧಿಗಳು, ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕಾಲೇಜುಗಳ ಅಧ್ಯಾಪಕ ವೃಂದ, ಹೆಚ್ಚಿನ ಸಂಖ್ಯೆಯಲ್ಲಿ ವಿಧ್ಯಾಥರ್ಿಗಳು ಹಾಗೂ ಸಾರ್ವಜನಿಕರನ್ನು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.