ನ. 1ರಿಂದ ವಿಠ್ಠಲ-ರುಕ್ಮಿಣಿ ಹರಿನಾಮ ಸಪ್ತಾಹ: ಲಕ್ಷ ದೀಪೋತ್ಸವ
Vitthal-Rukmini Harinama week from Nov. 1: Laksha Deepotsava
ನ. 1ರಿಂದ ವಿಠ್ಠಲ-ರುಕ್ಮಿಣಿ ಹರಿನಾಮ ಸಪ್ತಾಹ: ಲಕ್ಷ ದೀಪೋತ್ಸವ
ಮಹಾಲಿಂಗಪುರ: 7 ಶತಮಾನ ಇತಿಹಾಸವಿರುವ ಪಟ್ಟಣದ ವಿಠ್ಠಲ-ರುಕ್ಮಿಣಿ ದೇವಸ್ಥಾನ ಹರಿನಾಮ ಸಪ್ತಾಹ ಅಂಗವಾಗಿ ನವೆಂಬರ 01 ರಿಂದ 06 ವರೆಗೆ ವಿವಿಧ ಕಾರ್ಯಕ್ರಮಗಳ ಜೊತೆಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕ ಕೃಷ್ಣಗೌಡ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಪಂಢರಪುರದ ಕೃಷ್ಣಾ ಮಹಾರಾಜರು ಮತ್ತು ಸ್ಥಳೀಯ ಗುರು ಮಹಾಲಿಂಗೇಶ್ವರ ದೇವಸ್ಥಾನದ ರಾಜೇಂದ್ರ ಶ್ರೀಗಳು ವಹಿಸಿಕ್ಕೊಳ್ಳಲಿದ್ದಾರೆ.
ಕಾರ್ಯಕ್ರಮಗಳ ವಿವರ: ನವೆಂಬರ್ 01 ಸಂಜೆ 5ಕ್ಕೆ ಪೋತಿ ಸ್ಥಾಪನಾ, ಇದೆ ದಿವಸ ರಾತ್ರಿ 08 ರಿಂದ 09 ರವರೆಗೆ ಮುಂಜಾನೆ ಭಜನ ಮತ್ತು ಕೀರ್ತನೆ, 02, 03, 04 ರಂದು ಬೆಳಿಗ್ಗಿನ ಜಾವ 05 ರಿಂದ 06 ವರೆಗೆ ಕಾಕಡಾರತಿ, 07ಕ್ಕೆ ಪ್ರವಚನ, ಮಧ್ಯಾಹ್ನ 01ಕ್ಕೆ ಭಜನೆ, ಕೀರ್ತನೆ, ಸಂಜೆ 4 ರಿಂದ 6 ವರೆಗೆ ಹರಿಪಾಠ, ಸಂಜೆ 7 ರಿಂದ 9 ವರೆಗೆ ಕೀರ್ತನ, ರಾತ್ರಿ 9 ರಿಂದ ಜಾಗರಣೆ ನಂತರ ಮಹಾ ಪ್ರಸಾದ.04 ರಂದು ಮುಂಜಾನೆ 7 ಗಂಟೆಗೆ ರಾಜು ಜೋಶಿ ಅವರಿಂದ ಮಹಾ ವಿಷ್ಣು ಯಾಗ ಮತ್ತು ಪ್ರವಚನ , ಸಂಜೆ 7 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ. 05 ರಂದು ಮುಂಜಾನೆ 5ಕ್ಕೆ ಕಾಕಡಾರತಿ, 8ಕ್ಕೆ ಶ್ರೀ ಹರಿ ವಿಠ್ಠಲ ಸೋಹಳಾ ದಿಂಡಿ ಯಿಂದ ನಗರದಲ್ಲಿ ಮೆರವಣಿಗೆ.ಮಧ್ಯಾಹ್ನ 12 ಕ್ಕೆ ಮಹಾ ಪ್ರಸಾದ, ಸಂಜೆ ಮಹಾ ರಥೋತ್ಸವ. 06 ರಂದು ಸಂಜೆ 5 ಕ್ಕೆ ಕಳಸ ಇಳಿಸುವುದರೊಂದಿಗೆ ಆರು ದಿನಗಳ ಕಾರ್ಯಕ್ರಮಕ್ಕೆ ಮಂಗಲ.
ನೂತನ ಕಂಡ್ಯಾಳ ಬಾಸಿಂಗ ಕೊಡುಗೆಯನ್ನು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ನೀಡಿದ್ದಾರೆ. ಮಂಡಳಿಯವರು ವೀನಾ, ಬಾಳ, ತಾಳ, ಮೃದಂಗ ಜೊತೆಯಲ್ಲಿ ತರಬೇಕು. ಹೆಚ್ಚಿನ ಮಾಹಿತಿಗಾಗಿ: 998698327, 9901343522, ಕರೆ ಮಾಡಿ. ಕಮಿಟಿಯ ಕೃಷ್ಣಗೌಡ ಪಾಟೀಲ್, ಗೌಡಪ್ಪಗೌಡ ಪಾಟೀಲ್, ಮಹಾಲಿಂಗಪ್ಪ ಪಾಟೀಲ್, ರಾಜು ಮುದಕಪ್ಪಗೋಳ, ನಾರಾಯಣಗೌಡ ಪಾಟೀಲ್, ಸದಾಶಿವ ಶೇಗುಣಸಿ, ವಿಠ್ಠಲಗೌಡ ಪಾಟೀಲ್, ಮಲ್ಲಪ್ಪ ಅಂಬನ್ನಗೋಳ, ಕುಮಾರ್ ಪವಾರ, ಶ್ರೀನಿವಾಸ ಮಾಲಬಸರಿ, ಶಿವಯ್ಯ ಮಠಪತಿ ಮತ್ತು ಬೇಬವ್ವ ಯಾದವಾಡ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 