ಕುಂಟೋಜಿ ಲಕ್ಷ್ಮೀ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಗೆ ವಿಶ್ವನಾಥರೆಡ್ಡಿ ಭೇಟಿ

ಕೊಪ್ಪಳ 15: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕುಂಟೋಜಿ ಲಕ್ಷ್ಮೀ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ್ರೆಡ್ಡಿ ಅವರು ದಿ. (ಜು.15 ರಂದು) ಭೇಟಿ ನೀಡಿದರು.

ಕುಂಟೋಜಿ ಲಕ್ಷ್ಮೀ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಯೂ ಕೊಪ್ಪಳ ಜಿಲ್ಲೆಯ ಮಾದರಿ ಶಾಲೆಯಾಗಿದ್ದು, ಶಾಲಾ ಆವರಣವು ಸಂಪೂರ್ಣವಾಗಿ ಸ್ವಚ್ಛತೆಯಿಂದ ಕೂಡಿದೆ.  ಶಾಲಾ ಕಾಪೌಂಡ್ ಹಾಗೂ ಗೋಡೆಗಳಿಗೆ ಆಕರ್ಷಕ ಗೊಂಬೆ ಚಿತ್ರ, ಬಣ್ಣ ಹಚ್ಚಲಾಗಿದೆ.  ಈ ಮಹತ್ವದ ಕಾರ್ಯಕ್ಕೆ ಶಾಲೆಯ ಎಲ್ಲಾ ಶಿಕ್ಷಕರು, ಗ್ರಾಮಸ್ಥರು, ಶಾಲೆಯ ಹಳೇಯ ವಿದ್ಯಾಥರ್ಿಗಳು ಸೇರಿಕೊಂಡು ಭಾನುವಾರದಿನಗಳಂದು ಸಸಿ ನಡೆಯುವುದು ಹೀಗೆ ಅನೇಕ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡು ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿಸಿದ್ದಾರೆ.  

ಕುಂಟೋಜಿ ಲಕ್ಷ್ಮೀ ಕ್ಯಾಂಪ್ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ್ರೆಡ್ಡಿ ಅವರು ಭೇಟಿ ನೀಡಿ, ವಾತವರಣ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.  ಚಿಕ್ಕ ಜಾಗವನ್ನು ಚೊಕ್ಕವಾವಾಗಿರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಾಪೌಂಡ್ ಗೋಡೆಗಳಿಗೆ ಆಕರ್ಷಕ ಗೊಂಬೆ ಚಿತ್ರವನ್ನು ಬಿಡಿಸಿದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.  ಇನ್ನೂ ಶಾಲೆಯ ಎಳಿಗೆಗೆ ಕಾರಣರಾದ ಗ್ರಾಮಸ್ಥರಿಗೆ ಮತ್ತು ಶಾಲಾ ಶಿಕ್ಷಕರಿಗೆ ಸನ್ಮಾನ ಮಾಡಿದರು.  ಮಕ್ಕಳ ಜೋತೆ ಕೇಲವೊತ್ತು ಅಧ್ಯಕ್ಷರು ಕಾಲ ಕಳೆದುರು.  ಶಾಲೆಗೆ ಅಗತ್ಯವಿರುವ ನೀರಿನ ಟ್ಯಾಂಕ್ ನಿಮರ್ಾಣಕ್ಕೆ ಕ್ರಮ ಹಾಗೂ ಶಾಲಾ ಆವರಣದಲ್ಲಿ ನೆಡಲು ಅನ್ನೂ ಅನೇಕ ಬಗೆಯ ಸಸಿಗಳನ್ನು ಅರಣ್ಯ ಇಲಾಖೆಯಿಂದ ನೀಡುವುದಾಗಿ ಅಲ್ಲದೇ ಅಗತ್ಯ ಸಹಕಾರವನ್ನು ಸಹ ನೀಡುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.