ಲೋಕದರ್ಶನ ವರದಿ
ಖಾನಾಪೂರ 13: ಗುರುವಾರ ವಿದ್ಯಾಥರ್ಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸುತ್ತಿರುವ ಸಂದರ್ಭದಲ್ಲಿ ಆಯುಕ್ತರು ಮೇಜರ್ ಸಿದ್ದಲಿಂಗಯ್ಯ ಕಕ್ಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳ ಜೊತೆ ಕುಳಿತು ಊಟ ಮಾಡಿ ಸರಳತೆ ಮೆರೆದರು. ಬಳಿಕ 7 ನೇ ತರಗತಿಯ ವರ್ಗಕೋಣೆಗೆ ಬೇಟಿ ನೀಡಿ ಮಕ್ಕಳಿಗೆ ಗಣಿತ,ಕನ್ನಡ,ಇಂಗ್ಲಿಷ್ ವಿಷಯದ ಪ್ರಶ್ನೆಗಳನ್ನು ಕೇಳಿದಾಗ ಮಕ್ಕಳು ಸರಿಯಾಗಿ ಉತ್ತರ ನೀಡಿದ್ದರಿಂದ ಖುಷಿ ಪಟ್ಟು ಮಕ್ಕಳನ್ನು ತುಂಬು ಹೃದಯದಿಂದ ಪ್ರಶಂಸಿಸಿದರು.
ಶಿಕ್ಷಕರು ಮಕ್ಕಳಿಗೆ ಪಾಠವನ್ನಷ್ಟೆ ಅಲ್ಲದೆ ಅದರ ಜೊತೆ ಕಥೆಗಳನ್ನು ಹೇಳಿಕೊಡಲು ಮತ್ತು ಪೂರ್ವ ತಯಾರಿಯನ್ನು ಮಾಡಿಕೊಂಡು ಬರಲು ಶಿಕ್ಷಕರಿಗೆ ತಿಳಿಸಿದರು.ಹಾಗೂ ಮಕ್ಕಳು ಹಾಗೂ ಶಿಕ್ಷಕರ ಜೊತೆ ಆತ್ಮೀಯವಾಗಿ ಖುಷಿಯಿಂದ ಮಾತನಾಡಿದರು. ಈ ಆಯುಕ್ತರ ಭೇಟಿಗೆ ಶಿಕ್ಷಕ ವೃಂದ ಸಂತೋಷ ಹಾಗೂ ಧನ್ಯವಾದಗಳನ್ನು ಅಪರ್ಿಸಿದ್ದಾರೆ.